ಕರ್ನಾಟಕ

karnataka

ETV Bharat / bharat

ಚಳಿಗೆ ಉತ್ತರ ತತ್ತರ.. ಆದರೂ ನಮಗಿಷ್ಟ ಎಂದ ರೈತರು! - ಪಂಜಾಬ್ ಚಳಿ

ಉತ್ತರ ಭಾರತವನ್ನು ಅತಿಯಾದ ಚಳಿ ಆವರಿಸಿ ಜನರನ್ನು ತತ್ತರಿಸುವಂತೆ ಮಾಡಿದೆ. ಆದರೆ ಈ ನಡುವೆ ರೈತರು ಮಾತ್ರ ಸಂತೋಷವಾಗಿದ್ದಾರೆ. ಕಾರಣ ದಟ್ಟವಾದ ಮಂಜು ಗೋಧಿ ಬೆಳೆಗೆ ನೀರಿನ ಅಗತ್ಯತೆಯನ್ನು ಪೂರೈಸಿ ಇಳುವರಿ ಚೆನ್ನಾಗಿರುತ್ತದೆ ಎಂದು ರೈತರು ಅಭಿಪ್ರಾಯಪಡುತ್ತಾರೆ.

Winter
ಚಳಿ

By

Published : Jan 4, 2021, 6:43 AM IST

ಅಂಬಾಲಾ (ಪಂಜಾಬ್):ಚಳಿಗಾಲವು ಉತ್ತರ ಭಾರತದ ಮೇಲೆ ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದೆ. ದಟ್ಟವಾದ ಮಂಜು ಮತ್ತು ಮಳೆಯಿಂದಾಗಿ ಜನರು ಹೊರಗೆ ಹೆಜ್ಜೆ ಹಾಕುವುದು ಕಷ್ಟಕರವಾಗಿದೆ.

ಆದರೆ, ಈ ಚಳಿಗಾಲವು ತಮ್ಮ ಬೆಳೆಗಳಿಗೆ ನೀರಾವರಿ ಮಾಡುತ್ತಿರುವ ರೈತರ ಮುಖದಲ್ಲಿ ಮಾತ್ರ ಮಂದಹಾಸ ಮೂಡಿಸಿದೆ. ರೈತರ ಪ್ರಕಾರ, ಮಳೆ ಮತ್ತು ಮಂಜು ಗೋಧಿ ಬೆಳೆಗೆ ಬಹಳ ಪ್ರಯೋಜನಕಾರಿಯಾಗಿದೆಯಂತೆ.

ಮಳೆ ಮತ್ತು ಮಂಜು ಇವೆರಡು ಬೆಳೆಗಳಿಗೆ ಲಾಭದಾಯಕವಾಗಿದೆ. ಮಳೆಯಷ್ಟೇ ರೈತರು ಮಂಜನ್ನೂ ಹೆಚ್ಚು ಸಂತೋಷಪಡುತ್ತಾರೆ. ಕಾರಣ ಮಂಜು ಬೆಳೆಗೆ ನೀರಿನ ಅಗತ್ಯವನ್ನು ಪೂರೈಸುತ್ತದೆ ಹಾಗೂ ಅದರ ಇಳುವರಿಗೆ ಉತ್ತಮವಾಗಿರುತ್ತದೆ, ಎಂದು ರೈತನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details