ಗುಲ್ಮಾರ್ಗ್ ( ಜ-ಕಾ): ಕ್ರೀಡೆಗಳ ಅಭಿವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮವಾದ 'ಖೆಲೋ ಇಂಡಿಯಾ' ಅಡಿ ಮೊದಲ ಬಾರಿಗೆ ಚಳಿಗಾಲದ ಕ್ರೀಡಾಕೂಟ ಮಾ.7 ರಿಂದ 11 ರವರೆಗೆ ಗುಲ್ಮಾರ್ಗ್‌ನಲ್ಲಿ ನಡೆಯಲಿದೆ. ಖೇಲೋ ಇಂಡಿಯಾ ಚಳಿಗಾಲದ ಈ ಕ್ರೀಡಾಕೂಟವು ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಿದೆ ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು.
ಚಳಿಗಾಲದ ಕ್ರೀಡಾಕೂಟ ಭಾರತದ ಕ್ರೀಡಾ ಇತಿಹಾಸದಲ್ಲಿ ಮೈಲಿಗಲ್ಲು: ಕಿರಣ್ ರಿಜಿಜು
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗದಲ್ಲಿ ಚಳಿಗಾಲದ ಮೊದಲ ಕ್ರೀಡಾಕೂಟ ಮಾರ್ಚ್ 7 ರಿಂದ 11 ರವರೆಗೆ ನಡೆಯಲಿದೆ. ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟವು ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಿದೆ ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಕಿರಣ್ ರಿಜಿಜು, ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಚಳಿಗಾಲದ ಕ್ರೀಡಾಕೂಟವನ್ನು ಗುಲ್ಮಾರ್ಗ್‌ನಲ್ಲಿ ಆಯೋಜಿಸುತ್ತಿದ್ದೇವೆ. ಕ್ರೀಡಾ ಇತಿಹಾಸದಲ್ಲಿ ಇದು ಅತಿದೊಡ್ಡ ಮತ್ತು ಅತ್ಯುನ್ನತ ಕ್ರಿಡಾಕೂಟವಾಗಿದೆ. ಕ್ರೀಡೆಗಳನ್ನು ಉತ್ತೇಜಿಸುವುದರ ಜೊತೆಗೆ, ಇದು ಬೆಟ್ಟದ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಯನ್ನು ಸಹ ಪರಿವರ್ತಿಸುತ್ತದೆ. ಏಕೆಂದರೆ ಇದು ಪ್ರವಾಸೋದ್ಯಮ ಉತ್ತೇಜಿಸುತ್ತದೆ ಎಂದರು.
ಖೇಲೋ ಇಂಡಿಯಾ ಜೆ-ಕೆ ವಿಂಟರ್ ಕ್ರೀಡಾಕೂಟದ ಸ್ಪರ್ಧೆಗಳು ಬಾಲಕ ಮತ್ತು ಬಾಲಕಿಯರಿಗಾಗಿ ನಾಲ್ಕು ವಯಸ್ಸಿನ ವಿಭಾಗಗಳಲ್ಲಿ ಗುಲ್ಮಾರ್ಗ್‌ನ ಕೊಂಗ್ ಡೋರಿಯಲ್ಲಿ ನಡೆಯಲಿದೆ. 19-21 ವರ್ಷ, 17-18 ವರ್ಷ, 15-16 ವರ್ಷ ಮತ್ತು 13-14 ವರ್ಷ ವಯಸ್ಸಿನ ಕ್ರೀಡಾಪಟುಗಳು ಆಲ್ಪೈನ್ ಸ್ಕೀಯಿಂಗ್, ಕ್ರಾಸ್ ಕಂಟ್ರಿ ಸ್ಕೀಯಿಂಗ್, ಸ್ನೋ ಬೋರ್ಡಿಂಗ್ ಮತ್ತು ಸ್ನೋ ಶೂಯಿಂಗ್‌ನಲ್ಲಿ ಸ್ಪರ್ಧಿಸಬಹುದು. ಜೆ-ಕೆ ಸ್ಪೋರ್ಟ್ಸ್ ಕೌನ್ಸಿಲ್ ಮತ್ತು ಜೆ-ಕೆ ಯ ವಿಂಟರ್ ಗೇಮ್ಸ್ ಅಸೋಸಿಯೇಷನ್ ಆಯೋಜಿಸುತ್ತಿರುವ ಆಟಗಳಲ್ಲಿ ಸುಮಾರು 841 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದು, ವಿವಿಧ ರಾಜ್ಯಗಳು ಮತ್ತು ಸಂಸ್ಥೆಗಳ 15 ತಂಡಗಳು ಭಾಗವಹಿಸಲಿವೆ.