ಕರ್ನಾಟಕ

karnataka

ETV Bharat / bharat

ವಿಂಗ್​ ಕಮಾಂಡರ್​​ ಮೀಸೆಗೆ ಸಖತ್​ ಡಿಮ್ಯಾಂಡ್​... 'ರಾಷ್ಟ್ರೀಯ ಮೀಸೆ' ಎಂದು ಘೋಷಣೆಗೆ ಕಾಂಗ್ರೆಸ್​ ಒತ್ತಾಯ - ಲೋಕಸಭೆ

ಭಾರತೀಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಅವರ ಮೀಸೆಯನ್ನ 'ರಾಷ್ಟ್ರೀಯ ಮೀಸೆ'ಯನ್ನಾಗಿ ಘೋಷಣೆ ಮಾಡುವಂತೆ ಲೋಕಸಭೆಯಲ್ಲಿ ಕಾಂಗ್ರೆಸ್​ ಒತ್ತಾಯ ಮಾಡಿದೆ.

ಕಾಂಗ್ರೆಸ್​ ಒತ್ತಾಯ

By

Published : Jun 24, 2019, 4:18 PM IST

Updated : Jun 24, 2019, 4:23 PM IST

ನವದೆಹಲಿ:ಭಾರತದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಪಾಕ್​​ನ ಯುದ್ಧ ವಿಮಾನವನ್ನ ಹೊಡೆದುರುಳಿಸಿದ ಬಳಿಕ ಅವರ ಹೆಸರಿನಷ್ಟೇ ಅವರು ಬಿಟ್ಟಿರುವ ಮೀಸೆ ಕೂಡ ಹೆಸರುವಾಸಿಯಾಗಿತ್ತು. ಇದೀಗ ಇದೇ ವಿಷಯವಾಗಿ ಲೋಕಸಭೆಯಲ್ಲೂ ಚರ್ಚೆಯಾಗಿದೆ.

ಕಾಂಗ್ರೆಸ್​​ನ ಲೋಕಸಭೆ ಮುಖಂಡ ಅಧೀರ್​ ರಂಜನ್ ಚೌಧರಿ ಮಾತನಾಡಿದ್ದು, ವಿಂಗ್​ ಕಮಾಂಡರ್​​ ಅಭಿನಂದನ್​ ವರ್ತಮಾನ್​ ಅವರಿಗೆ ಗೌರವಿಸಬೇಕಾಗಿದ್ದು, ಅವರು ಬಿಟ್ಟಿರುವ ಮೀಸೆಯನ್ನ 'ರಾಷ್ಟ್ರೀಯ ಮೀಸೆ' ಎಂದು ಘೋಷಣೆ ಮಾಡುವಂತೆ ತಿಳಿಸಿದ್ದಾರೆ.

ಇದೇ ವೇಳೆ, ಬಾಲಕೋಟ್​​ನಲ್ಲಿ ಭಾರತೀಯ ವಾಯುಸೇನೆ ಉಗ್ರರ ಮೇಲೆ ನಡೆಸಿರುವ ದಾಳಿಯನ್ನ ಕಾಂಗ್ರೆಸ್​ ಪಕ್ಷ ಸಮರ್ಥನೆ ಮಾಡಿಕೊಳ್ಳಲಿದ್ದು, ಮಹತ್ವದ ಕಾರ್ಯ ನಿರ್ವಹಿಸಿರುವ ವಿಂಗ್​ ಕಮಾಂಡರ್​ ಅಭಿನಂದನ್​ ಅವರಿಗೆ ಗೌರವ ನೀಡಬೇಕು ಎಂದು ಹೇಳಿದ್ದಾರೆ.

ಫೆ.14ರಂದು ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ಬಾಲಕೋಟ್​​ನಲ್ಲಿ ಉಗ್ರ ಕ್ಯಾಂಪ್​ಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮರುದಿನ ಪಾಕ್​ ವಾಯುದಾಳಿ ನಡೆಸಲು ಮುಂದಾದಾಗ ಭಾರತೀಯ ವಿಂಗ್ ಕಮಾಂಡರ್​ ಅಭಿನಂದನ್​ ಪಾಕ್ ವಿಮಾನ ಹೊಡೆದುರುಳಿಸಿ, ಅಲ್ಲಿನ​ ಗಡಿಯೊಳಗೆ ಬಿದ್ದಿದ್ದರು. ಈ ವೇಳೆ ಅವರನ್ನ ಪಾಕ್​ ಬಂಧನ ಮಾಡಿತ್ತು. ತದನಂತರ ಭಾರತಕ್ಕೆ ಮಣಿದ ಪಾಕ್​​ ಅವರನ್ನ ವಾಘಾ ಗಡಿ ಮೂಲಕ ಭಾರತಕ್ಕೆ ಕಳುಹಿಸಿತ್ತು.

Last Updated : Jun 24, 2019, 4:23 PM IST

ABOUT THE AUTHOR

...view details