ನವದೆಹಲಿ:ವೀರ ಚಕ್ರ ಪದಕ ಪುರಸ್ಕೃತ ವೀರ ಸೇನಾನಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಠಾಣ್ಕೋಟ್ ವಾಯುನೆಲೆಯಲ್ಲಿ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಜೊತೆಯಾಗಿ ಮಿಗ್-21 ಫೈಟರ್ ಜೆಟ್ನಲ್ಲಿ ಹಾರಾಟ ನಡೆಸಿದ್ದಾರೆ.
1999ರ ಕಾರ್ಗಿಲ್ ಯುದ್ಧದಲ್ಲಿ ಮಿಗ್ ಪೈಲಟ್ ಆಗಿ ಪಾಕಿಸ್ತಾನದ ದಾಳಿಗೆ ತಕ್ಕ ಪ್ರತಿರೋಧ ತೋರಿದ್ದ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಹಾಗೂ 2019ರಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಅಭಿನಂದನ್ ಒಟ್ಟಾಗಿ ಮಿಗ್ನಲ್ಲಿ ಹಾರಾಟ ನಡೆಸಿದ್ದು ಪಠಾಣ್ಕೋಟ್ ವಾಯುನೆಲೆಯಲ್ಲಿ ವಿಶೇಷತೆಗೆ ಸಾಕ್ಷಿಯಾಯಿತು.