ಕರ್ನಾಟಕ

karnataka

ETV Bharat / bharat

ವಿಂಗ್ ಕಮಾಂಡರ್ ಅಭಿನಂದನ್​ಗೆ ವಾಯುಪಡೆಯ ಪ್ರತಿಷ್ಠಿತ ಪ್ರಶಸ್ತಿ - ಯುನಿಟ್ ಸಿಟಷನ್​​

ಪಾಕಿಸ್ತಾನದ ಎಫ್- 16 ಯುದ್ಧ ವಿಮಾನಗಳು ಭಾರತದ ಗಡಿ ಪ್ರವೇಶಿಸಿ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಅಭಿನಂದನ್ ವರ್ಧಮಾನ್ ಅವರು ಮಿಗ್​-21 ಯುದ್ಧ ವಿಮಾನ ಮೂಲಕ ಅದನ್ನು ಹಿಮ್ಮೆಟ್ಟಿಸಿದ್ದರು. ಘಟನೆಯಲ್ಲಿ ಅಭಿನಂದನ್​ ಪಾಕ್​ ನೆಲದಲ್ಲಿ ಏರ್​ ಬ್ಯಾಗ್​ನಿಂದ ಬಿದ್ದು, 60 ಗಂಟೆಗಳ ಕಾಲ ಶತ್ರು ರಾಷ್ಟ್ರದಲ್ಲಿದ್ದು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು. ಅಭಿನಂದನ್​ ಸಾಹಸ ಕಾರ್ಯಕ್ಕೆ 2019ರ ಸ್ವಾತಂತ್ರ್ಯ ದಿನಾಚರಣೆಯ ವೇಳೆ ವೀರಚಕ್ರ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಈಗ...

ಅಭಿನಂದನ್

By

Published : Oct 6, 2019, 10:46 AM IST

ನವದೆಹಲಿ: ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿ ನೆಲದಲ್ಲಿ ಬಿದ್ದು 60 ಗಂಟೆಗಳ ಬಳಿಕ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ಭಾರತೀಯ ವಾಯುಪಡೆ ವಿಂಗ್​ ಕಮಾಂಡರ್ ಅಭಿನಂದನ್​ ವರ್ಧಮಾನ್ 'ಯೂನಿಟ್ ಸಿಟೇಷನ್​​ ಅವಾರ್ಡ್'​​ಗೆ ಪಾತ್ರರಾಗಿದ್ದಾರೆ.

ಪಾಕಿಸ್ತಾನದ ಎಫ್- 16 ಯುದ್ಧ ವಿಮಾನಗಳು ಭಾರತ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಮುಂದಾಗಿದ್ವು. ಈ ವೇಳೆ ಅಭಿನಂದನ್ ವರ್ಧಮಾನ್ ಮಿಗ್​-21 ಯುದ್ಧ ವಿಮಾನ ಮೂಲಕ ಅದನ್ನು ಹಿಮ್ಮೆಟ್ಟಿಸಿದ್ದರು. ಘಟನೆಯಲ್ಲಿ ಅಭಿನಂದನ್​ ಪಾಕ್​ ನೆಲದಲ್ಲಿ ಏರ್​ ಬ್ಯಾಗ್​ನಿಂದ ಬಿದ್ದು, 60 ಗಂಟೆಗಳ ಕಾಲ ಶತ್ರು ರಾಷ್ಟ್ರದಲ್ಲಿದ್ದು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು.

ಅಂಭಿನಂದನ್​ ಸಾಹಸ ಕಾರ್ಯಕ್ಕೆ 2019ರ ಸ್ವಾತಂತ್ರ್ಯ ದಿನಾಚರಣೆಯ ವೇಳೆ 'ವೀರಚಕ್ರ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಈಗ ಸೇನೆಯ ಸ್ಕ್ವಾಡ್ರನ್​ ಯೂನಿಟ್​ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಾಯು ಸೇನೆಯ ಏರ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಸತೀಶ್ ಪವಾರ್ ಅವರಿಂದ ಅಭಿನಂದನ್​ ಅವರು ಸ್ವೀಕರಿಸುವರು.

ಫೆಬ್ರುವರಿ 27ರಂದು ಡಾಗ್ ಫೈಟ್​ನಲ್ಲಿ ಭಾರತೀಯ ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ಅಭಿನಂದನ್ ಅವರಿಗೆ ಮಿಂಟಿ ಮಾರ್ಗದರ್ಶನ ನೀಡಿದ ಲೀಡರ್ ಮಿಂಟಿ ಅಗರ್ವಾಲ್ ಅವರಿಗೂ ಯುನಿಟ್ ಸಿಟೇಷನ್ ಪ್ರಶಸ್ತಿ ನೀಡಲಾಗಿದೆ.

ABOUT THE AUTHOR

...view details