ಕರ್ನಾಟಕ

karnataka

ETV Bharat / bharat

ಕೇಂದ್ರವು ಮೌಲ್ಯೀಕರಿಸಿದರೆ ಮಾತ್ರ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಬಳಸಲಾಗುತ್ತದೆ: ದೆಹಲಿ ಆರೋಗ್ಯ ಸಚಿವ - Rapid Testing Kits

ಈಟಿವಿ ಭಾರತದೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ರಾಜ್ಯ ಸರ್ಕಾರ ಆದೇಶಿಸಿರುವ ಒಂದು ಲಕ್ಷ ಹೆಚ್ಚುವರಿ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಕೇಂದ್ರ ಸರ್ಕಾರ ಮೌಲ್ಯೀಕರಿಸಿದರೆ ಮಾತ್ರ ಬಳಸಲಾಗುತ್ತದೆ ಎಂದು ಹೇಳಿದರು. ಹಾಗೆ ಕೆಲ ಪ್ರಶ್ನಿಗಳಿಗೆ ಮುಕ್ತವಾಗಿ ಉತ್ತರಿಸಿದರು.

Will use rapid testing kits only if Centre validates: Delhi Health Minister
ಕೇಂದ್ರವು ಮೌಲ್ಯೀಕರಿಸಿದರೆ ಮಾತ್ರ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಬಳಸಲಾಗುತ್ತದೆ: ದೆಹಲಿ ಆರೋಗ್ಯ ಸಚಿವ

By

Published : Apr 23, 2020, 1:29 PM IST

ನವದೆಹಲಿ: ರಾಜ್ಯ ಸರ್ಕಾರ ಆದೇಶಿಸಿರುವ ಒಂದು ಲಕ್ಷ ಹೆಚ್ಚುವರಿ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಕೇಂದ್ರ ಸರ್ಕಾರ ಮೌಲ್ಯೀಕರಿಸಿದರೆ ಮಾತ್ರ ಬಳಸಲಾಗುತ್ತದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಗುರುವಾರ ಹೇಳಿದ್ದಾರೆ.

ಈಟಿವಿ ಭಾರತದೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಜೈನ್​ ರಾಜಧಾನಿಯಲ್ಲಿ ವಿಕಸಿಸುತ್ತಿರುವ ಕೋವಿಡ್​ -19 ಪರಿಸ್ಥಿತಿ ಮತ್ತು ಈ ಸಾಂಕ್ರಾಮಿಕ ರೋಗಕ್ಕೆ ಅವರ ಸರ್ಕಾರದ ಸ್ಪಂದನೆಯ ಬಗ್ಗೆ ಮಾತನಾಡಿದರು.

ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

ಪ್ರಶ್ನೆ - ಆರೋಗ್ಯ ಸಚಿವರಾಗಿ, ದೆಹಲಿಯ ಕೋವಿಡ್​​-19 ಪರಿಸ್ಥಿತಿಯ ಬಗ್ಗೆ ನೀವು ಏನು ಹೇಳುತ್ತೀರಿ?

ಇಂದಿಗೆ ದೆಹಲಿಯಲ್ಲಿ ನಿನ್ನೆಯಷ್ಟೇ 75 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು 2156 ಕೋವಿಡ್​ -19 ಪಾಸಿಟಿವ್​ ಪ್ರಕರಣಗಳಿವೆ. ಒಟ್ಟು 180 ರೋಗಿಗಳು ಈವರೆಗೆ ಚೇತರಿಸಿಕೊಂಡಿದ್ದಾರೆ. ಹಾಗೂ ಒಟ್ಟು ಸಾವುಗಳ ಸಂಖ್ಯೆ 47 ಆಗಿದೆ. ಹಾಗೇ, 1498 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 27 ರೋಗಿಗಳು ಐಸಿಯುನಲ್ಲಿದ್ದರೆ, ಐದು ಮಂದಿ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ.

ಪ್ರಶ್ನೆ- ಖಾಸಗಿ ಆಸ್ಪತ್ರೆಗಳು ರೋಗಿಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವವನ್ನು ತೋರುತ್ತಿವೆ. ಜೊತೆಗೆ ರೋಗಿಗಳ ಪ್ರವೇಶಕ್ಕೆ ವಿವಿಧ ಷರತ್ತುಗಳನ್ನು ಹಾಕುತ್ತಿವೆ ಎಂಬ ದೂರುಗಳು ಬಂದಿವೆ.

ಕೋವಿಡ್​-19 ಗೆ ಸಂಬಂಧಿಸಿದಂತೆ, ಕೇಂದ್ರವು ಪ್ರಕರಣಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ. ಮೊದಲ ವಿಭಾಗದಲ್ಲಿ, ಲಕ್ಷಣರಹಿತ ಪ್ರಕರಣಗಳು ಮತ್ತು ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಪ್ರದರ್ಶಿಸುವವರನ್ನು ಸೇರಿಸಲಾಗಿದೆ. ಈ ರೋಗಿಗಳು ಕೊರೊನಾ ಆರೈಕೆ ಕೇಂದ್ರಗಳಲ್ಲಿ ಇರಿಸಬೇಕಾಗುತ್ತದೆ.

ಎರಡನೆಯ ವರ್ಗವು ಮಧ್ಯಮ ರೋಗಲಕ್ಷಣಗಳನ್ನು ಪ್ರದರ್ಶಿಸುವವರನ್ನು ಒಳಗೊಂಡಿದೆ, ಅವರನ್ನು ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕವಾಗಿ ಇರಿಸಬೇಕಾಗುತ್ತದೆ. ಅಂತಿಮವಾಗಿ, ಮೂರನೇ ವರ್ಗವು ಗಂಭೀರ ರೋಗಲಕ್ಷಣಗಳನ್ನು ಹೊಂದಿರುವವರನ್ನು ಒಳಗೊಂಡಿದೆ, ಅವರು ಆಸ್ಪತ್ರೆಗಳಲ್ಲಿರಿಸಿ ನಿಗಾ ವಹಿಸಬೇಕಾಗುತ್ತದೆ.

ಖಾಸಗಿ ಆಸ್ಪತ್ರೆಗಳ ಮಟ್ಟಿಗೆ ಹೇಳುವುದಾದರೆ, ದೆಹಲಿಯಲ್ಲಿ ಇಂತಹ ಮೂರು ಆಸ್ಪತ್ರೆಗಳು ಮೂರನೇ ವರ್ಗದ ರೋಗಿಗಳನ್ನು ಪೂರೈಸುತ್ತವೆ. 90 ರಷ್ಟು ಪ್ರಕರಣಗಳನ್ನು ಈ ಆಸ್ಪತ್ರೆಗಳಿಗೆ ದಾಖಲಿಸಬೇಕಾಗಿಲ್ಲವಾದರೆ, ದೆಹಲಿ ಸರ್ಕಾರವು ಎಲ್ಲಾ ಮೂರು ವಿಭಾಗಗಳ ರೋಗಿಗಳಿಗೆ ವ್ಯವಸ್ಥೆ ಮಾಡಿದೆ. ರೋಗಿಗಳು ಎಲ್ಲಿಂದ ಬಂದರೂ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.

ಪ್ರಶ್ನೆ - ರಾಜಸ್ಥಾನವು ಈಗಾಗಲೇ ಕ್ಷಿಪ್ರ ಪರೀಕ್ಷೆಯನ್ನು ನಿಲ್ಲಿಸಿದೆ ಮತ್ತು ಐಸಿಎಂಆರ್ ಸಹ ಇದನ್ನು ನಿಲ್ಲಿಸುವಂತೆ ರಾಜ್ಯಗಳನ್ನು ಕೇಳಿದೆ. ಕೇಂದ್ರದಿಂದ ಪಡೆದ 42,000 ಕಿಟ್‌ಗಳ ಹೊರತಾಗಿ ದೆಹಲಿ ಸರ್ಕಾರವು ಒಂದು ಲಕ್ಷ ಹೆಚ್ಚುವರಿ ಕಿಟ್‌ಗಳನ್ನು ಪಡೆಯುವ ಬಗ್ಗೆಯೂ ಮಾತನಾಡಿದೆ. ಈ ವಿಷಯದಲ್ಲಿ ನಿಮ್ಮ ನಿಲುವು ಏನು?

ಪ್ರಸ್ತುತ, ಕೇಂದ್ರವು ನಮಗೆ ನೀಡಿದ ಕಿಟ್‌ಗಳನ್ನು ಮೌಲ್ಯೀಕರಿಸುವ ಪ್ರಕ್ರಿಯೆಯಲ್ಲಿದೆ. ತಾತ್ಕಾಲಿಕ ಎರಡು ದಿನಗಳ ನಿಷೇಧವನ್ನು ಜಾರಿಗೆ ತರಲಾಗಿದೆ. ಆದ್ದರಿಂದ, ಕೇಂದ್ರವು ಕಿಟ್‌ಗಳನ್ನು ಮೌಲ್ಯೀಕರಿಸಿದರೆ ಮಾತ್ರ ನಾವು ಅವುಗಳನ್ನು ಪಡೆಯುತ್ತೇವೆ.

ABOUT THE AUTHOR

...view details