ಕರ್ನಾಟಕ

karnataka

ETV Bharat / bharat

ಭಾರತೀಯರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವುದು ಸರಿಯೇ: ಅಸಾದುದ್ದೀನ್ ಓವೈಸಿ

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಪ್ರಯುಕ್ತ ಭೋಲಕ್‌ಪುರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ, ಹಳೆ ಹೈದರಾಬಾದ್ ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗುವುದು ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸರಿಯೇ ಎಂದು ಬಿಜೆಪಿ ನಾಯಕರನ್ನು ಓವೈಸಿ ಪ್ರಶ್ನಿಸಿದ್ದಾರೆ.

ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

By

Published : Nov 25, 2020, 2:23 PM IST

ಹೈದರಾಬಾದ್(ತೆಲಂಗಾಣ): ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್​ ಹೇಳಿಕೆಗೆ ಕೋಪಗೊಂಡಿರುವ ಅಸಾದುದ್ದೀನ್ ಓವೈಸಿ ಅವರು ಹಳೆ ಹೈದರಾಬಾದ್​​ನಲ್ಲಿರುವ ಮುಸ್ಲಿಮರು ಯಾರೂ ಭಾರತೀಯರಲ್ಲವೇ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ಹೈದರಾಬಾದ್​ ಸಂಸದ ಅಸಾದುದ್ದೀನ್ ಓವೈಸಿ

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ, ಹಳೆ ಹೈದರಾಬಾದ್ ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗುವುದು ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಹೈದರಾಬಾದ್ ಪಾಕಿಸ್ತಾನದಲ್ಲಿದೆಯೇ?: ಬಿಜೆಪಿಗೆ ಸಚಿವ ಕೆ.ಟಿ.ರಾಮ ರಾವ್ ತಿರುಗೇಟು

ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಭೋಲಕ್‌ಪುರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಸಾದುದ್ದೀನ್, ಭಾರತೀಯರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬಹುದೇ?, ಲಡಾಖ್ ಗಡಿಯಲ್ಲಿ ಚೀನಾದವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಂದು ಬಿಜೆಪಿ ನಾಯಕರಿಗೆ ಸವಾಲು​ ಹಾಕಿದರು.

ಹೈದರಾಬಾದ್​ ಪ್ರವಾಹದ ವೇಳೆ ಕೇಂದ್ರ ಯಾವ ನೆರವೂ ನೀಡಿಲ್ಲ : ಅಸಾಸುದ್ದೀನ್ ಓವೈಸಿ

ಯಾವುದೇ ಸಂದರ್ಭದಲ್ಲೂ ಭಾರತೀಯ ನೆಲದಲ್ಲಿ ಪಾಕಿಸ್ತಾನಿಗಳು ಇರುವುದನ್ನು ಒಪ್ಪುವುದಿಲ್ಲ. 24 ಗಂಟೆಗಳ ಒಳಗೆ ಎಷ್ಟು ಪಾಕಿಸ್ತಾನಿಗಳು ಈ ಹಳೆ ಹೈದರಾಬಾದ್​ನಲ್ಲಿ ಇದ್ದಾರೆ ಎಂದು ಲೆಕ್ಕಹಾಕಬೇಕು ಎಂದು ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಒತ್ತಾಯಿಸಿದರು. "ಪಾಕಿಸ್ತಾನ", "ಭಯೋತ್ಪಾದನೆ" ಮತ್ತು "ರೋಹಿಂಗ್ಯಾ" ಮುಂತಾದ ಪದಗಳನ್ನು ಬಳಸದೇ ಪ್ರಚಾರ ಮಾಡಿ ಎಂದು ಅಸಾದುದ್ದೀನ್ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ.

ABOUT THE AUTHOR

...view details