ಕರ್ನಾಟಕ

karnataka

ETV Bharat / bharat

ಪರಿಸ್ಥಿತಿ ಎದುರಿಸಲು ಸೇನೆ ಸನ್ನದ್ಧ; ವೀರ ಯೋಧರ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ

ಪೂರ್ವ ಲಡಾಖ್‌ನ ಗಾಲ್ವನ್‌ನಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ. ಅವರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್‌.ಕೆ.ಎಸ್.ಭದೌರಿಯಾ ಹೇಳಿದರು.

IAF Chief Air Chief Marshal RKS Bhadauria
ವಾಯುಪಡೆ ಮುಖ್ಯಸ್ಥ ಭದೌರಿಯಾ

By

Published : Jun 20, 2020, 10:04 AM IST

ಹೈದರಾಬಾದ್​:ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ದಿಟ್ಟತನದಿಂದ ಎದುರಿಸಲು ನಮ್ಮ ಸೇನೆ ಸದಾ ಸಿದ್ಧವಿರುತ್ತದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್‌.ಕೆ.ಎಸ್.ಭದೌರಿಯಾ ಹೇಳಿದರು.

ತೆಲಂಗಾಣದ ಹೈದರಾಬಾದ್​ನ ವಾಯುಪಡೆಯ ಅಕಾಡೆಮಿಯಲ್ಲಿ ನಡೆದ ಸಂಯೋಜಿತ ಪದವಿ ಪರೇಡ್ (ಸಿಜಿಪಿ) ಬಳಿಕ ನಡೆದ ಬಳಿಕ ಮಾತನಾಡಿದ ಅವರು, ಪೂರ್ವ ಲಡಾಖ್‌ನ ಗಾಲ್ವನ್‌ನಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ. ಅವರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ ಎಂದರು.

ಎಲ್ಲಾ ರೀತಿಯ ಮಿಲಿಟರಿ ಒಪ್ಪಂದಗಳು, ಮಾತುಕತೆಗಳ ಬಳಿಕವೂ ಕೂಡ ಚೀನಾ ದಾಳಿ ನಡೆಸಿ ನಮ್ಮ ಸೈನಿಕರನ್ನು ಬಲಿ ಪಡೆದಿದೆ. ಪರಿಸ್ಥಿತಿ ಹೀಗಿದ್ದರೂ ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ಪರಿಸ್ಥಿತಿಯನ್ನು ಶಾಂತಿಯುತಗೊಳಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ಆದರೆ ಯಾವುದೇ ಸನ್ನಿವೇಶ ಬಂದರೂ ಅದನ್ನು ಎದುರಿಸುತ್ತೇವೆಂಬ ದೃಢಸಂಕಲ್ಪವನ್ನು ನಮ್ಮ ಭದ್ರತಾ ಪಡೆಗಳು ಹೊಂದಿದ್ದು, ಜಾಗರೂಕರಾಗಿದ್ದೇವೆ ಎಂದು ಭದೌರಿಯಾ ತಿಳಿಸಿದರು.

ABOUT THE AUTHOR

...view details