ನವದೆಹಲಿ:ಮತ್ತೊಂದು ಅವಧಿಗೆ ತಾವು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ್ರೆ ದೆಹಲಿಯಲ್ಲಿ ಲಂಡನ್, ಟೊಕಿಯೋ ರೀತಿಯ ರಸ್ತೆ ನಿರ್ಮಾಣ ಮಾಡುವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಸೆ ಹುಟ್ಟಿಸಿದ್ದಾರೆ.
ದೆಹಲಿಯಲ್ಲಿ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ದೆಹಲಿ ಸೌಂದರ್ಯ ಹೆಚ್ಚಿಸಲು 40 ರೋಡ್ಗಳನ್ನ ವಿದೇಶಿ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ.
ಯಾವ ಯಾವ ಪ್ರದೇಶಗಳಲ್ಲಿ ಹೆಚ್ಚಿನ ಟ್ರಾಫಿಕ್ ತೊಂದರೆ ಆಗುತ್ತಿದೆಯೋ ಆಯಾ ಸ್ಥಳದ ಮಾಹಿತಿ ನೀಡಲು ಈಗಾಗಲೇ ಸಲಹೆಗಾರರ ನೇಮಕ ಮಾಡಿದ್ದೇವೆ. ಮುಂದಿನ ಎರಡು ತಿಂಗಳಲ್ಲಿ ಅವರು ತಮ್ಮ ಯೋಜನೆ ಲಿಸ್ಟ್ ನಮಗೆ ನೀಡಲಿದ್ದು, ಸಂಚಾರ ದಟ್ಟನೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. ದೆಹಲಿಯಲ್ಲಿ ಇನ್ನು ತುಂಬಾ ಕೆಲಸ ಆಗುವುದು ಬಾಕಿ ಉಳಿದಿದೆ. ಯುಮುನಾ,ದೆಹಲಿ ಸ್ವಚ್ಛಗೊಳ್ಳಬೇಕಾಗಿದ್ದು, ಟ್ರಾನ್ಸ್ಪೋರ್ಟ್ ಸರಿಪಡಿಸಬೇಕಾಗಿದೆ ಎಂದಿದ್ದಾರೆ.
ದೆಹಲಿಯಲ್ಲಿ ಈಗಾಗಲೇ 300 ಮೊಹಲ್ಲಾ ಕ್ಲಿನಿಕ್ ಓಪನ್ ಮಾಡಲು ನಿರ್ಧರಿಸಲಾಗಿದ್ದು, ಅದರಲ್ಲಿ 150 ಕ್ಲಿನಿಕ್ ನಾಳೆ ತಮ್ಮ ಕಾರ್ಯ ಆರಂಭಿಸಲಿವೆ ಎಂದಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.