ಕರ್ನಾಟಕ

karnataka

ETV Bharat / bharat

ರಾಜ್ಯಪಾಲರು, ಕೇಂದ್ರದ ಆದೇಶ ಪಾಲನೆ ಮಾಡಲು ಸಿದ್ಧ: ಸಿಎಂ ಕೇಜ್ರಿವಾಲ್​ - ದೆಹಲಿಯಲ್ಲಿ ಕೋವಿಡ್​

ಲೆಫ್ಟಿನೆಂಟ್​ ಗವರ್ನರ್​ ಆದೇಶ ಪಾಲನೆ ಮಾಡಲು ನಾವು ಸಿದ್ಧವಿದ್ದು, ಇದರಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

Kejriwal
Kejriwal

By

Published : Jun 10, 2020, 2:55 PM IST

ನವದೆಹಲಿ: ದೆಹಲಿಯಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯನ್ನು ಸ್ಥಳೀಯರಿಗೆ ಮಾತ್ರ ಮೀಸಲಿಡಬೇಕು ಎಂದು ಆದೇಶ ಹೊರಡಿಸಿದ್ದ ದೆಹಲಿ ಎಎಪಿ ಸರ್ಕಾರದ ನಿರ್ಧಾರವನ್ನ ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಬೈಜಲ್​​​​​ ರದ್ಧುಗೊಳಿಸಿದ್ದರು. ಇದೀಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್​ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ.

ಕೇಜ್ರಿವಾಲ್​ ಸುದ್ದಿಗೋಷ್ಠಿ

ಲೆಫ್ಟಿನೆಂಟ್​ ಗವರ್ನರ್​ ಹಾಗೂ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಪಾಲನೆ ಮಾಡಲು ನಾವು ಸಿದ್ಧ. ಆದೇಶ ಪಾಲನೆ ಮಾಡದೇ ಇರುವುದು. ವಾದ ಮಾಡಲು ಇದು ಸೂಕ್ತ ಸಮಯವಲ್ಲ ಎಂದಿರುವ ಅವರ ಎಲ್ಲ ಆದೇಶ ಪಾಲನೆ ಮಾಡಲಾಗುವುದು ಎಂದು ತಿಳಿಸಿದರು.

ಕೇಜ್ರಿ ಹೊರಡಿಸಿದ್ದ ಆದೇಶ ರದ್ಧುಗೊಳಿಸಿದ ಲೆಫ್ಟಿನೆಂಟ್​ ಗವರ್ನರ್​: ಅಸಮಾಧಾನ ಹೊರಹಾಕಿದ ಸಿಎಂ

ದೆಹಲಿಯಲ್ಲಿ ಸದ್ಯ 80 ಸಾವಿರ ಬೆಡ್​ಗಳ ಅವಶ್ಯಕತೆ ಇದ್ದು, ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನಿತ್ಯ ದೆಹಲಿಯಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಗಣನೀಯ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ಜುಲೈ 31ರೊಳಗೆ ದೆಹಲಿಯಲ್ಲಿ 1.5 ಲಕ್ಷ ಬೆಡ್​​ ಅವಶ್ಯಕತೆ ಬೀಳಲಿದೆ ಎಂದಿರುವ ಅವರು ಇದು ಸರ್ಕಾರಕ್ಕೆ ಅತಿ ದೊಡ್ಡ ಸವಾಲು ಎಂದಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಪರಿಸ್ಥಿತಿ ರಾಜಕೀಯಗೊಳಿಸುವ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಪಾಲನೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ. ದೆಹಲಿಯಲ್ಲಿ ಸದ್ಯ 31 ಸಾವಿರ ಕೇಸ್​ಗಳ ಪೈಕಿ 18 ಸಾವಿರ ಆ್ಯಕ್ಟಿವ್​ ಕೇಸ್​ಗಳಿವೆ.

ಕಳೆದ ಭಾನುವಾರ ಸುದ್ದಿಗೋಷ್ಠಿ ನಡೆಸಿದ್ದ ಕೇಜ್ರಿವಾಲ್​, ದೆಹಲಿಯಲ್ಲಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಕೇವಲ ಇಲ್ಲಿನ ಜನರಿಗೆ ಮಾತ್ರ ಚಿಕಿತ್ಸೆ ನೀಡಲು ಮೀಸಲು ಎಂದು ಘೋಷಣೆ ಹೊರಡಿಸಿದ್ದರು. ಇಲ್ಲಿನ ಆಸ್ಪತ್ರೆಗಳು ಹೊರ ರಾಜ್ಯದ ಜನರಿಂದ ತುಂಬಿ ತುಳುಕುವುದನ್ನ ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದರು.

ABOUT THE AUTHOR

...view details