ನವದೆಹಲಿ:ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿರುವಕೇಂದ್ರದಮಾಜಿ ಪಿ. ಚಿದಂಬರಂ ತಮ್ಮ ಪರವಾಗಿ ಕುಟುಂಬಸ್ಥರ ಮೂಲಕ ಭಾನುವಾರ ಟ್ವೀಟ್ ಮಾಡಿ ಸಿಬಿಐ ವಿರುದ್ಧ ಕಿಡಿಕಾರಿದ್ದಾರೆ.
ಚಿನ್ನದ ರೆಕ್ಕೆ ಮತ್ತು ಚಂದ್ರನತ್ತ ಪಯಣ... ಟ್ವೀಟ್ ಮೂಲಕ ಸಿಬಿಐಗೆ ಚಿದು ಗುದ್ದು..! - ತಿಹಾರ್ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ
ಕೆಲವರ ಪ್ರಕಾರ ನಾನು ಚಿನ್ನದ ರೆಕ್ಕೆಯನ್ನು ಬೆಳೆಸಲಿದ್ದೇನೆ ಮತ್ತು ಅದರ ಮೂಲಕ ಚಂದ್ರನತ್ತ ಹಾರಲಿದ್ದೇನೆ. ಚಂದ್ರನಲ್ಲಿ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದ್ದೇನೆ ಎನ್ನುವ ನಂಬಿಕೆ ಇದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಚಿದಂಬರಂ
ಕೆಲವರ ಪ್ರಕಾರ ನಾನು ಚಿನ್ನದ ರೆಕ್ಕೆಯನ್ನು ಬೆಳೆಸಲಿದ್ದೇನೆ ಮತ್ತು ಅದರ ಮೂಲಕ ಚಂದ್ರನತ್ತ ಹಾರಲಿದ್ದೇನೆ. ಚಂದ್ರನಲ್ಲಿ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದ್ದೇನೆ ಎನ್ನುವ ನಂಬಿಕೆ ಇದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಬೇಲ್ ವಿಚಾರಣೆಗೂ ಮುನ್ನ ಪ್ರಕರಣದ ಆರೋಪಿ ದೇಶವನ್ನು ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಚಿದಂಬರಂ ಟ್ವೀಟ್ ಮಾಡಿ ಸಿಬಿಐಗೆ ಗುದ್ದು ನೀಡಿದ್ದಾರೆ. ಗುರುವಾರದಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್ ಅ.3ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.