ಕರ್ನಾಟಕ

karnataka

ETV Bharat / bharat

ಕೃಷಿ ಮಸೂದೆ ವಿರೋಧಿಸಿ ರೈತರೊಂದಿಗೆ ಹೋರಾಟ : ರಾಹುಲ್‌ ಗಾಂಧಿ ವಿಡಿಯೋ ಬಿಡುಗಡೆ - ರೈತರ ಹೋರಾಟಕ್ಕೆ ರಾಹುಲ್‌ ಗಾಂಧಿ ಬೆಂಬಲ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಗಳಿಗೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದು, ರೈತರಿಗೆ ಬೆಂಬಲ ನೀಡುವ ಸಲುವಾಗಿ #SpeakUpForFarmers ಎಂಬ ಅಭಿಯಾನವನ್ನು ಆರಂಭಿಸಿದೆ. ಇದೇ ವಿಚಾರಕ್ಕೆ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.

will-fight-farm-bill-together-says-rahul-gandhi-in-video
ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರೊಂದಿಗೆ ಹೋರಾಟ : ರಾಹುಲ್‌ ಗಾಂಧಿ ವಿಡಿಯೋ ಬಿಡುಗಡೆ

By

Published : Sep 26, 2020, 8:04 PM IST

ನವದೆಹಲಿ: ದೇಶದ ಹಲವೆಡೆ ಕೃಷಿ ಮಸೂದೆಗಳಿಗೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೃಷಿ ಮಸೂದೆಗಳನ್ನು ವಾಪಸ್‌ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ರಾಹುಲ್‌, ರೈತರು ಕಾನೂನುಬದ್ದ ಬೇಡಿಕೆಗಳನ್ನು ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಧ್ವನಿಯನ್ನು ಕೇಳಬೇಕು ಎಂದಿದ್ದಾರೆ.

ನೀವು ನಿರಂತರವಾಗಿ ದಾಳಿಗಳನ್ನು ಮಾಡುತ್ತಿದ್ದೀರಿ. ಮೊದಲ ನೋಟು ಅಮಾನ್ಯೀಕರಣ ಮಾಡಿದ್ದೀರಿ, ಆ ನಂತರ ಜಿಎಸ್‌ಟಿ ಜಾರಿ, ಇದೀಗ ಕೋವಿಡ್‌ ಸಮಯದಲ್ಲಿ ನಿಮಗೆ ಆರ್ಥಿಕ ನೆರವು ನೀಡಿದ್ದಾರೆ. ಕಾರ್ಪೋರೇಟರ್‌ಗಳ ಗುಲಾಮಗಿರಿಯಾಗಿ ರೈತರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೃಷಿಯನ್ನು ಖಾಸಗೀಕರಣ ಮಾಡಲು ಈ ಮೂವರು ಕೃಷಿ ಮಸೂದೆಗಳನ್ನು ಜಾರಿಗೆ ತರುತ್ತಿದ್ದೀರಿ. ನಾವು ಸೈನಿಕರಂತೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ರೈತರಿಗೆ ಅಭಯ ನೀಡಿದ್ದಾರೆ. ಮಸೂದೆಗಳನ್ನು ತಡೆಯಲು ಒಟ್ಟಾಗಿ ಹೋರಾಡೋಣ ಎಂದಿದ್ದಾರೆ.

ಕಾಂಗ್ರೆಸ್ ಇಂದು‌ #SpeakUpForFarmers ಎಂಬ ಅಭಿಯಾನವನ್ನು ಆರಂಭಿಸಿದ್ದು, ಅದರ ಭಾಗವಾಗಿ ರಾಹುಲ್‌ ಗಾಂಧಿ ಮಾತನಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.

ABOUT THE AUTHOR

...view details