ಕರ್ನಾಟಕ

karnataka

ETV Bharat / bharat

ಮೋದಿ ಸರ್ಕಾರ ಪ್ರಾದೇಶಿಕ ಪಕ್ಷಗಳ ಮೇಲೆ ಅವಲಂಬಿತವಾಗಿಲ್ಲ: ಜಗನ್ ಮೋಹನ್

74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಮೋದಿ ಸರ್ಕಾರವು ಉಳಿವಿಗಾಗಿ ಇತರ ರಾಜಕೀಯ ಪಕ್ಷಗಳ ಮೇಲೆ ಅವಲಂಬಿತವಾಗಿಲ್ಲ. ಆದರೂ ವಿಶೇಷ ವರ್ಗದ ಸ್ಥಾನಮಾನವನ್ನು ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿ, ಮೂರು ರಾಜಧಾನಿಗಳ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

Andhra CM
ಆಂಧ್ರ ಸಿಎಂ

By

Published : Aug 15, 2020, 7:49 PM IST

ವಿಜಯವಾಡ: ಸಂಸತ್ತಿನಲ್ಲಿ ಭರವಸೆ ನೀಡಿದಂತೆ ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ಕೋರುವುದನ್ನು ಮುಂದುವರಿಸುತ್ತೇನೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಶನಿವಾರ ಪ್ರತಿಪಾದಿಸಿದರು.

74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರವು ಉಳಿವಿಗಾಗಿ ಇತರ ರಾಜಕೀಯ ಪಕ್ಷಗಳ ಮೇಲೆ ಅವಲಂಬಿತವಾಗಿಲ್ಲ. ಆದರೂ ವಿಶೇಷ ವರ್ಗದ ಸ್ಥಾನಮಾನವನ್ನು ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿ, ಮೂರು ರಾಜಧಾನಿಗಳ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಈಗ ಸಾಧ್ಯವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಶೇಷ ವರ್ಗದ ಸ್ಥಾನಮಾನ ನೀಡುವಂತೆ ನಾವು ಕೇಂದ್ರದ ಮುಂದಿನ ನಮ್ಮ ಬೇಡಿಕೆಯನ್ನು ಮುಂದುವರಿಸುತ್ತೇವೆ ಎಂದರು.

ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಭಾಷಣದಲ್ಲಿ ಮೂರು ರಾಜ್ಯ ರಾಜಧಾನಿ ಹೊಂದುವ ನಡೆಯನ್ನು ಸಮರ್ಥಿಸಿಕೊಂಡು, ಆಂಧ್ರಪ್ರದೇಶದ ಎಲ್ಲಾ ಪ್ರದೇಶಗಳ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ವಿಕೇಂದ್ರೀಕರಣದತ್ತ ಕೆಲಸ ಮಾಡುತ್ತಿದೆ ಎಂದರು.

ಎಲ್ಲಾ ಮೂರು ಪ್ರದೇಶಗಳ ಸಮಾನ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ಆಂಧ್ರಪ್ರದೇಶವು ಭವಿಷ್ಯದಲ್ಲಿ ವಿಭಜನೆಯಂತಹ ಗಾಯದಿಂದ ತಪ್ಪಿಸಲು ರಾಜ್ಯ ಸರ್ಕಾರವು ವಿಕೇಂದ್ರೀಕರಣ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಹೇಳಿದರು.

ಸಮಾನ ಅಭಿವೃದ್ಧಿಗೆ ಮೂರು ರಾಜಧಾನಿಗಳನ್ನು ಅಭಿವೃದ್ಧಿಪಡಿಸಲು ಎರಡು ಮಸೂದೆಗಳನ್ನು ಕಾಯಿದೆಗಳಾಗಿ ಮಾಡಲಾಗಿದೆ. ಶೀಘ್ರದಲ್ಲೇ ವಿಶಾಖಪಟ್ಟಣಂಗೆ ಕಾರ್ಯಾಂಗ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿಯಾಗಿ ಸ್ಥಾಪಿಸುತ್ತೇವೆ ಎಂದು ಜಗನ್ ಮೋಹನ್ ಹೇಳಿದರು.

ಅಮರಾವತಿಯನ್ನು ಏಕೈಕ ರಾಜ್ಯ ರಾಜಧಾನಿಯಾಗಿ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿ ಅಮರಾವತಿಯಲ್ಲಿ ರೈತರ ನಿರಂತರ ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಮೂರು ರಾಜಧಾನಿಗಳನ್ನು ಅಭಿವೃದ್ಧಿಪಡಿಸುವ ತನ್ನ ಸರ್ಕಾರದ ಕ್ರಮವನ್ನು ಜಗನ್ ಸಮರ್ಥಿಸಿಕೊಂಡರು.

ABOUT THE AUTHOR

...view details