ಇಟಾವಾ, (ಯುಪಿ) : ಕೇಂದ್ರದಲ್ಲೂ ನಮ್ದೇ, ರಾಜ್ಯದಲ್ಲಿರೋದೂ ನಮ್ ಬಿಜೆಪಿ ಸರ್ಕಾರ. ಒಂದು ವೇಳೆ, ನಮ್ಮ ಮೇಲೆ ಯಾರಾದರೂ ಬೆರಳು ತೋರಿಸಿದರೂ, ಅಂಥವರ ಬೆರಳನ್ನೇ ಕಟ್ ಮಾಡ್ತೀವಿ ಅಂತಾ ಉತ್ತರಪ್ರದೇಶ ಇಟಾವಾ ಸಂಸತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ ಶಂಕರ್ ಕಟೇರಿಯಾ ನಾಲಿಗೆ ಹರಿಬಿಟ್ಟಿದ್ದಾರೆ.
ಈಗ ನಮ್ದೇ ಅಧಿಕಾರ.. ನಮ್ಮತ್ತ ಬೊಟ್ಟು ಮಾಡಿದ್ರೇ ಆ ಬೊಟ್ಟು ಕತ್ತರಿಸ್ತೀವಿ.. ಬಿಜೆಪಿ ಅಭ್ಯರ್ಥಿ ಧಮ್ಕಿ - ಬಿಜೆಪಿ ಅಭ್ಯರ್ಥಿ ರಾಮ ಶಂಕರ್ ಕಟೇರಿಯಾ
ನಮ್ಮತ್ತ ಬೊಟ್ಟು ಮಾಡಿದ್ರೇ ಆ ಬೊಟ್ಟು ಕತ್ತರಿಸ್ತೀವಿ ಎಂದು ಇಟಾವಾ ಸಂಸತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ ಶಂಕರ್ ಕಟೇರಿಯಾ ಧಮ್ಕಿ ಹಾಕಿದ್ದಾರೆ
ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಅವರು, ಈ ಹಿಂದೆ ಇದೇ ಉತ್ತರಪ್ರದೇಶದಲ್ಲಿ ಬಿಎಸ್‌ಪಿಯ ಮಾಯಾವತಿ ಸರ್ಕಾರ ನಡೆಸಿದ್ದರು. ಆಗ ನನ್ನ ಮೇಲೆ ಸಾಕಷ್ಟು ಕೇಸ್‌ಗಳನ್ನ ಹಾಕಿದ್ದರು. ಆದರೆ, ಆ ಎಲ್ಲ ಕೇಸ್‌ಗಳ ವಿರುದ್ಧವೂ ನಾನು ಹೋರಾಟ ನಡೆಸಿದ್ದೆನು. ಆದರೂ ನನ್ನ ಜೈಲಿಗೆ ಹಾಕೋದಕ್ಕೆ ಮಾಯಾವತಿಗೆ ಸಾಧ್ಯವಾಗಿರಲೇ ಇಲ್ಲ. ಈಗ ಕೇಂದ್ರದಲ್ಲಿ ಮತ್ತು ಯುಪಿಯಲ್ಲೂ ನಾವೇ (ಬಿಜೆಪಿ) ಅಧಿಕಾರದಲ್ಲಿದೆ. ಈಗ ನಮ್ಮನ್ನು ಯಾರೂ ಏನೂ ಮಾಡಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಹಾಗೇನಾದರೂ ನಮ್ಮ ವಿರುದ್ಧ ಬೊಟ್ಟು ಮಾಡಿ ತೋರಿಸಿದರೇ, ಅಂಥವರ ಬೊಟ್ಟು ಕಟ್ ಮಾಡ್ತೇವೆ ಅಂತಾ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ ಬಿಜೆಪಿ ಅಭ್ಯರ್ಥಿ ರಾಮ ಶಂಕರ್ ಕಟೇರಿಯಾ.