ಕರ್ನಾಟಕ

karnataka

ETV Bharat / bharat

ಲಾಕ್​ ಡೌನ್​ಗೆ ಸಹಕರಿಸದಿದ್ರೆ​ ಶೂಟ್​ ಅಟ್​ ಸೈಟ್: ತೆಲಂಗಾಣ ಸಿಎಂ ಎಚ್ಚರಿಕೆ - ಕೋವಿಡ್​ 19

ಕೊರೊನಾ ವೈರಸ್ ಸರಪಳಿ ಮುರಿಯಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಲಾಕ್​ ಡೌನ್ ಗೆ ಸಹಕರಿಸದಿದ್ದರೆ ಕಂಡಲ್ಲಿ ಗುಂಡು ಜಾರಿಗೊಳಿಸುವುದಾಗಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಎಚ್ಚರಿಸಿದ್ದಾರೆ.

telangana cm chandrashekar rao
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್​

By

Published : Mar 25, 2020, 7:44 AM IST

ಹೈದರಾಬಾದ್​: ಕೊರೊನಾ ಹಾವಳಿಯಿಂದ ಎಲ್ಲ ರಾಜ್ಯಗಳು 21 ದಿನಗಳ ಕಾಲ ಲಾಕ್​ಡೌನ್​ ಆಗಿವೆ. ಆದರೂ ಕೂಡಾ ಕೆಲವೊಂದು ಕಡೆಗಳಲ್ಲಿ ಸಾರ್ವಜನಿಕರು ಲಾಕ್​ಡೌನ್​​ಗೆ ಸಹಕರಿಸುತ್ತಿಲ್ಲ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರಾಜ್ಯದಲ್ಲಿ ಶೂಟ್​ ಅಟ್​ ಸೈಟ್​ (ಕಂಡಲ್ಲಿ ಗುಂಡು) ಜಾರಿ ಮಾಡಲಾಗುತ್ತದೆ ಎಂದು ತೆಲಂಗಾಣ ಸಿಎಂ ಚಂದ್ರಶೇಖರ್​ ರಾವ್​ ಎಚ್ಚರಿಕೆ ನೀಡಿದ್ದಾರೆ.

ಲಾಕ್​ಡೌನ್​ ಕುರಿತಂತೆ ಮಾತನಾಡಿದ ಸಿಎಂ ಚಂದ್ರಶೇಖರ ರಾವ್​ ಈ ರೀತಿಯ ವಾತಾವರಣ ಸೃಷ್ಟಿಯಾಗಲು ಜನತೆ ಖಂಡಿತಾ ಆಸ್ಪದ ಮಾಡಿಕೊಡಬಾರದು. ಸಾರ್ವಜನಿಕರು ಲಾಕ್​ಡೌನ್​ಗೆ ಸಹಕಾರ ನೀಡದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ತೀವ್ರವಾಗಲಿದೆ. ಹೀಗಾಗಿ ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details