ಹೈದರಾಬಾದ್: ಮಿರಾಜ್ 2000 ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಸ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಪತ್ನಿ ಗರಿಮಾ ಅಬ್ರೋಲ್ ಭಾರತೀಯ ವಾಯುಪಡೆ ಸೇರ್ಪಡೆಗೊಳ್ಳಲಿದ್ದಾರೆ.
ಮಿರಾಜ್ 2000 ಪತನದಿಂದ ಹುತಾತ್ಮನಾದ ಪತಿ... ವೀರನ ಸ್ಥಾನ ತುಂಬಲಿದ್ದಾರೆ ಪತ್ನಿ! - undefined
ಮಿರಾಜ್ 2000 ಪತನದಿಂದ ಸಾವಿಗೀಡಾಗಿದ್ದ ಪೈಲಟ್ ಪತ್ನಿ ಭಾರತೀಯ ಏರ್ಫೋರ್ಸ್ ಸೇರಲು ಸಿದ್ಧರಾಗಿದ್ದಾರೆ.
![ಮಿರಾಜ್ 2000 ಪತನದಿಂದ ಹುತಾತ್ಮನಾದ ಪತಿ... ವೀರನ ಸ್ಥಾನ ತುಂಬಲಿದ್ದಾರೆ ಪತ್ನಿ!](https://etvbharatimages.akamaized.net/etvbharat/prod-images/768-512-3849977-thumbnail-3x2-brm.jpg)
ಗಂಡನ ಹಾದಿಯಲ್ಲೇ ಏರ್ಫೋರ್ಸ್ಗೆ ಪತ್ನಿ!
ಇದೇ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟದ ವೇಳೆ ಮಿರಾಜ್ 2000 ಜೆಟ್ ಪಥನಗೊಂಡಿತ್ತು. ಘಟನೆಯಲ್ಲಿ ಸದ್ದಾರ್ಥ್ ನೇಗಿ ಮತ್ತು ಸಮೀರ್ ಅಬ್ರೋಲ್ ಎಂಬ ಇಬ್ಬರು ಪೈಲಟ್ಗಳು ಸಾವಿಗೀಡಾಗಿದ್ದರು.
ಪತಿ ಸಮೀರ್ ಅಬ್ರೋಲ್ ಸಾವಿನಿಂದ ಧೃತಿಗೆಡದ ಪತ್ನಿ ಗರಿಮಾ ಅಬ್ರೋಸ್, ಏರ್ಫೋರ್ಸ್ಗೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಸಧ್ಯ ತರಬೇತಿ ಪಡಯುತ್ತಿರುವ ಗರಿಮಾ ಅಬ್ರೋಸ್, ತೆಲಂಗಾಣ ಏರ್ ಫೋರ್ಸ್ ಅಕಾಡಮಿ ಸೇರಿಕೊಳ್ಳಲಿದ್ದು, 2020 ಜನವರಿ ವೇಳೆಗೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿದ್ದಾರೆ.