ಕರ್ನಾಟಕ

karnataka

ETV Bharat / bharat

ಗಂಡನ ಪ್ರೇಯಸಿಯ ಖಾಸಗಿ ಭಾಗಗಳಿಗೆ ಖಾರದ ಪುಡಿ ಹಾಕಿದ ಪತ್ನಿ! - ಅಹಮದಾಬಾದ್​ನಲ್ಲಿ ಮಾಜಿ ಪ್ರೇಯಸಿ ಹೆಂಡ್ತಿಯಿಂದ ಖಾರದ ಪುಡಿ ದಾಳಿ

ಯುವತಿಯ ಗುಪ್ತಾಂಗಗಳಿಗೆ ಆಕೆಯ ಪ್ರಿಯಕರನ ಪತ್ನಿ ಖಾರದ ಪುಡಿ ಹಾಕಿದ್ದಲ್ಲದೆ ಪ್ರಾಣ ಬೆದಕರಿಕೆಯೊಡ್ಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

Wife of ex lover, Wife of ex lover puts chilli powder, Wife of ex lover puts chilli powder in her private parts, ಮಾಜಿ ಪ್ರೇಯಸಿ ಹೆಂಡ್ತಿ, ಮಾಜಿ ಪ್ರೇಯಸಿ ಹೆಂಡ್ತಿಯಿಂದ ಖಾರದ ಪುಡಿ ದಾಳಿ, ಯುವತಿಯ ಗುಪ್ತಾಂಗಕ್ಕೆ ಮಾಜಿ ಪ್ರೇಯಸಿ ಹೆಂಡ್ತಿಯಿಂದ ಖಾರದ ಪುಡಿ ದಾಳಿ, ಅಹಮದಾಬಾದ್​ನಲ್ಲಿ ಮಾಜಿ ಪ್ರೇಯಸಿ ಹೆಂಡ್ತಿಯಿಂದ ಖಾರದ ಪುಡಿ ದಾಳಿ,
ಸಾಂದರ್ಭಿಕ ಚಿತ್ರ

By

Published : Feb 4, 2020, 7:55 AM IST

Updated : Feb 4, 2020, 9:07 AM IST

ಅಹಮದಾಬಾದ್ :ಯುವತಿಯನ್ನು ಅಪಹರಿಸಿ ಆಕೆಯ ಗುಪ್ತಾಂಗಗಳಿಗೆ ಪ್ರಿಯಕರನ ಪತ್ನಿಯೊಬ್ಬಳು ಖಾರದ ಪುಡಿ ಎರಚಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.

ಗಿರೀಶ್​ ಗೋಸ್ವಾಮಿ ಎಂಬುವವರ ಗಾರ್ಮೆಂಟ್​ ಶಾಪ್​ನಲ್ಲಿ 22 ವರ್ಷದ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದು, ಇಬ್ಬರ ನಡುವೆ ಲವ್​ ಆಗಿತ್ತು. ಇವರ ನಡುವೆ ದೈಹಿಕ ಸಂಬಂಧವೂ ಇತ್ತು ಎನ್ನಲಾಗ್ತಿದೆ. ಈ ಆರೋಪದಿಂದ ಬೇಸತ್ತ ಯುವತಿ ಆ ಶಾಪ್​ನಲ್ಲಿ ಕೆಲಸ ಬಿಟ್ಟು ಬೇರೊಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಅವರಿಬ್ಬರ ನಡುವಿನ ಸಂಬಂಧಕ್ಕೆ ತಾತ್ಕಾಲಿಕ ತಡೆಯೂ ಬಿದ್ದಿತ್ತಂತೆ.

ಆದರೆ, 2 ತಿಂಗಳ ಹಿಂದೆ ಮತ್ತೆ ಫೋನ್ ಮಾಡಿದ್ದ ಗಿರೀಶ್​ ಆಕೆಯೊಂದಿಗೆ ಸಂಬಂಧ ಬೆಳೆಸಿದ್ದ. ಅದಾದ ನಂತರ ಇಬ್ಬರೂ ಸುತ್ತಾಡಲು ಆರಂಭಿಸಿದ್ದರು. ಈ ವಿಷಯ ಗಿರೀಶ್​ನ ಪತ್ನಿಗೆ ಗೊತ್ತಾಗಿದೆ, ಆತನ ಮನೆಯಲ್ಲಿ ದೊಡ್ಡ ಗಲಾಟೆಯೂ ನಡೆದಿದೆ. ತನ್ನ ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿರುವ ಯುವತಿಯ ಮೇಲೆ ಕೋಪಗೊಂಡಿದ್ದ ಜಾನು ಗೋಸ್ವಾಮಿ ಆಕೆಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದಳು.

ಗುರುವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಆ ಯುವತಿಯನ್ನು ರಸ್ತೆಯಲ್ಲಿ ಅಡ್ಡಹಾಕಿದ ಜಾನು ಗೋಸ್ವಾಮಿ ಆಕೆಯನ್ನು ಅಪಹರಿಸಿ, ಮನೆಯೊಂದಕ್ಕೆ ಕರೆದೊಯ್ದಳು. ಆಕೆಗೆ ಇನ್ನಿಬ್ಬರು ಮಹಿಳೆಯರು ಸಹಾಯ ಮಾಡಿದ್ದರು. ಮೂವರು ಮಹಿಳೆಯರು ಸೇರಿಕೊಂಡು ಆ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಕೆಯ ಗುಪ್ತಾಂಗದೊಳಗೆ ಖಾರದ ಪುಡಿ ಹಾಕಿದ್ದರು. ನಂತರ ಆಕೆಯ ಮೇಲೆ ಆ್ಯಸಿಡ್ ಎರಚಿ ಸಾಯಿಸುವ ಬೆದರಿಕೆಯನ್ನೂ ಹಾಕಿದ್ದರು ಎಂದು ಸಂತ್ರಸ್ತ ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆ ಮೂವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

Last Updated : Feb 4, 2020, 9:07 AM IST

ABOUT THE AUTHOR

...view details