ರಂಗಾರೆಡ್ಡಿ(ತೆಲಂಗಾಣ):ಬೇರೆ ಪುರುಷರೊಂದಿಗೆ ಸಲುಗೆಯಿಂದ ಇರುತ್ತಿದ್ದ ಮಹಿಳೆಯನ್ನು ಗಂಡನೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಜಲ್ಪಲ್ಲಿ ಪುರಸಭೆ ವ್ಯಾಪ್ತಿಯ ಶ್ರೀರಾಮ ನಗರದಲ್ಲಿ ನಡೆದಿದೆ.
ವಿವಾಹಿತಳ ಮೇಲೆ ಲವ್
ಆಂಧ್ರಪ್ರದೇಶದ ಕರ್ನೂಲ್ ನಿವಾಸಿ ನಾಗರಾಜು ಮೂರು ವರ್ಷಗಳಿಂದ ರಂಗಾರೆಡ್ಡಿ ಜಿಲ್ಲೆ ಜಲ್ಪಲ್ಲಿ ಪುರಸಭೆ ವ್ಯಾಪ್ತಿಯ ಶ್ರೀರಾಮ ನಗರದಲ್ಲಿ ವಾಸಿಸುತ್ತಿದ್ದಾರೆ. ಕ್ಯಾಬ್ ಡ್ರೈವರ್ ನಾಗರಾಜು ಸ್ಥಳೀಯ ನಿವಾಸಿಯಾದ ವರಲಕ್ಷ್ಮಿ (30) ಜೊತೆ ಪರಿಚಯವಾಗಿದೆ. ವರಲಕ್ಷ್ಮಿ ಇಲ್ಲಿನ ಪೆಟ್ರೋಲ್ ಬಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಗಲೇ ಅವಳಿಗೆ ಗಂಡ ಮತ್ತು ಮಗ ಇದ್ದನು. ನಾಗರಾಜು ಮತ್ತು ವರಲಕ್ಷ್ಮಿ ಮಧ್ಯೆ ಪರಿಚಯ ಪ್ರೇಮವಾಗಿ ಬದಲಾಗಿದೆ.
ಮಗು, ಗಂಡನಿದ್ರೂ ಮದುವೆ
ಎರಡು ವರ್ಷಗಳ ಹಿಂದೆ ನಾಗರಾಜು ಜೊತೆ ಗಂಡನನ್ನು ಬಿಟ್ಟ ವರಲಕ್ಷ್ಮಿ ಸಪ್ತಪದಿ ತುಳಿದಿದ್ದಳು. ಮದುವೆಯಾದ ಹೊಸತರಲ್ಲಿ ಇವರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಬಳಿಕ ವರಲಕ್ಷ್ಮಿ ಬೇರೆ ಪುರುಷರೊಂದಿಗೆ ಸನ್ನಿಹಿತವಾಗಿರಲು ಶುರು ಮಾಡಿಕೊಂಡಿದ್ದಾಳೆ.