ವಿಜಯವಾಡ:ಆಂಧ್ರ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ನಡೆದಿದೆ. ವ್ಯಕ್ತಿವೋರ್ವ ತನ್ನ ಪತ್ನಿಯ ರುಂಡವನ್ನು ಕತ್ತರಿಸಿ ಕೈಯಲ್ಲಿ ಹಿಡಿದು ನಡು ರಸ್ತೆಯಲ್ಲೇ ಓಡಾಡಿದ ಘಟನೆ ಇಲ್ಲಿನ ಸತ್ಯನಾರಾಯಣಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರದೀಪ್ ಕುಮಾರ ಐದು ವರ್ಷದ ಹಿಂದೆ ಮಣಿಕ್ರಾಂತಿಯನ್ನು (23) ಪ್ರೀತಿಸಿ ಮದುವೆಯಾಗಿದ್ದ. ಕೆಲ ತಿಂಗಳಿಂದಲೂ ಇಬ್ಬರ ಮಧ್ಯೆ ಕಲಹಗಳು ನಡಿಯುತ್ತಿದ್ದವು. ಪ್ರದೀಪ್ ಮೇಲೆ ಮಣಿಕ್ರಾಂತಿ ಕಿರುಕುಳ ಕೇಸ್ ದಾಖಲಿಸಿದ್ದಳು. ಇದರಿಂದಾಗಿ ಪ್ರದೀಪನು ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ್ದ. ಆದ್ರೆ ಪೊಲೀಸರು ಕಿರುಕುಳ ಕೇಸ್ನಲ್ಲಿ ಪ್ರದೀಪ್ನನ್ನು ಬಂಧಿಸಿದ್ದರು.
ಬಂಧನದ ಬಳಿಕ ಪ್ರದೀಪ್ ಜಾಮೀನು ಪಡೆದು ಹೊರಬಂದಿದ್ದ. ಮಾರ್ಕೆಟ್ಗೆ ಹೋಗಿ ಬರುತ್ತಿದ್ದ ಮಣಿಕ್ರಾಂತಿಯನ್ನು ಪ್ರದೀಪ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ನಡುರಸ್ತೆಯಲ್ಲೇ ಓಡಾಡಿದ್ದಾನೆ. ಜನ ಭಯಭೀತರಾಗಿ ಕಿರುಚಿಕೊಂಡಾಗ ಪತ್ನಿಯ ರುಂಡವನ್ನು ಅಲ್ಲೇ ಬಿಸಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಹೆಂಡ್ತಿ ರುಂಡವನ್ನ ಕೈಯಲ್ಲೇ ಹಿಡಿದು ನಡು ರಸ್ತೆಯಲ್ಲೇ ಓಡಾಡಿದ ಗಂಡ! ಸುದ್ದಿ ತಿಳಿದ ಪೊಲೀಸರು ನೇರ ಘಟನಾಸ್ಥಳಕ್ಕೆ ತೆರಳಿದ್ದಾರೆ. ಅಷ್ಟೊತ್ತಿಗಾಗಲೇ ಮಣಿಕ್ರಾಂತಿ ಸಂಬಂಧಿಗಳು ಅಲ್ಲಿ ನೆರೆದಿದ್ದರು. ಆರೋಪಿ ಪ್ರದೀಪ್ನನ್ನು ತಮಗೆ ಒಪ್ಪಿಸುವಂತೆ ಮಣಿಕ್ರಾಂತಿ ಕುಟುಂಬಸ್ಥರು ಪ್ರತಿಭಟಿಸಿದರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಮಣಿಕ್ರಾಂತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.