ರಾಜಸ್ಥಾನ:ಸಿಕಾರ್ ಜಿಲ್ಲೆಯ ಧೋದ್ ಪಟ್ಟಣದಲ್ಲಿ ತುಂಬು ಗರ್ಭಿಣಿಯೊಬ್ಬಳು ತನ್ನ ಗಂಡನನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ.
ಗಂಡನನ್ನು ಕೊಂದು ಶವವನ್ನು ನೆಲದಲ್ಲಿ ಹೂತ ತುಂಬು ಗರ್ಭಿಣಿ ಭೈರಂಪುರ ಜಾಗೀರ್ ನಿವಾಸಿ ಸರೋಜಾ ಎಂಬ ತುಂಬು ಗರ್ಭಿಣಿ ತನ್ನ ಗಂಡ ಮಹಾವೀರ್ ಬಾಲೈ ಅನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾಳೆ. ಮೃತ ವ್ಯಕ್ತಿಯು ತನ್ನ ಹೆಂಡತಿಯ ತಂಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಘಟನೆ ಬೆಳಕಿಗೆ ಬಂದ ಹಿನ್ನೆಲೆ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಗಂಡನನ್ನು ಕೊಂದ ಆರೋಪಿ ಆತನ ಮೃತದೇಹವನ್ನು ಮನೆಯ ಹಿಂದಿನ ಜಾಗದಲ್ಲಿ ಹೂತು ಹಾಕಿದ್ದಾಳೆ. ನಂತರ ಸ್ವತಃ ತಾನೇ ಖುದ್ದು ಪೊಲೀಸ್ ಠಾಣೆಗೆ ಬಂದು ಗಂಡನನ್ನು ತಾನೇ ಕೊಲೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾಳೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಗಂಡನ ಶವವನ್ನು ನೆಲದಿಂದ ತೆಗೆದಿದ್ದಾರೆ. ನಂತರ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಆರೋಪಿ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ:ಆರೋಪಿ ಗರ್ಭಿಣಿಯಾಗಿದ್ದ ಹಿನ್ನೆಲೆ ಸಹಾಯಕ್ಕೆ ಎಂದು ಸಹೋದರಿಯನ್ನು 20 ದಿನಗಳ ಹಿಂದೆ ಮನೆಗೆ ಕರೆಯಿಸಿಕೊಂಡಿದ್ದಳು ಎನ್ನಲಾಗಿದೆ. ಈ ವೇಳೆ ತನ್ನ ಪತಿ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ಬೆಳಕಿಗೆ ಬಂದಿದ್ದು, ಇದರಿಂದ ಕುಪಿತಳಾದ ಆರೋಪಿ ಸರೋಜಾ ನಿನ್ನೆ ತಡರಾತ್ರಿ ಕೊಡಲಿಯಿಂದ ಕೊಚ್ಚಿ ಗಂಡನನ್ನು ಕೊಲೆ ಮಾಡಿದ್ದಾಳೆ.