ಗುಂಟೂರು:ಸತ್ತೇನಪಲ್ಲಿ ತಾಲೂಕಿನ ಯುವಕ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಏಳು ವರ್ಷಗಳ ಹಿಂದೆ ತಮ್ಮದೇ ಗ್ರಾಮದ ಯುವತಿಯೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಚೆನ್ನಾಗಿ ನಡೆಯುತ್ತಿದ್ದ ಸಂಸಾರದಲ್ಲಿ ಮನೆ ಪಕ್ಕದಲ್ಲಿರುವ ವ್ಯಕ್ತಿ ಎಂಟ್ರಿ ಕೊಟ್ಟಿದ್ದಾನೆ.
ಮದುವೆಯಾಗಿ ಮಕ್ಕಳಾದ್ರೂ ಆ ಗೃಹಿಣಿ ಮನೆ ಪಕ್ಕದ ವ್ಯಕ್ತಿಯ ಮಾಯದ ಬಲೆಗೆ ಬಿದ್ದು ಲವ್ ಮಾಡುತ್ತಿದ್ದಳು. ಗಪ್ಚುಪ್ ಆಗಿಯೇ ಲಾಡ್ಜ್, ಪಾರ್ಕ್ ಸುತ್ತಿದ್ದಳು. ಹೆಂಡ್ತಿಯ ನಡುವಳಿಕೆ ಮೇಲೆ ಅನುಮಾನಗೊಂಡ ಗಂಡ ಆಕೆಯನ್ನು ಹಿಂಬಾಲಿಸಲು ಶುರು ಮಾಡಿದ್ದಾನೆ.