ಕರ್ನಾಟಕ

karnataka

ETV Bharat / bharat

ಬ್ರೇಕಿಂಗ್​​: ಸಂಸಾರಕ್ಕೆ ಕರೆಯಲು ಹೋದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ! - ಗಂಡನ ಮರ್ಮಾಂಗ ಕತ್ತರಿಸಿದ ಹೆಂಡ್ತಿ

ಆಂಧ್ರ ಪ್ರದೇಶದಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಸಂಸಾರ ಮಾಡೋಣಾ ಬಾ ಎಂದು ಪತ್ನಿಗೆ ಪತಿ ಕರೆದಿದ್ದಾನೆ. ಆದ್ರೆ ಆ ಮಹಿಳೆ ಸಂಸಾರಕ್ಕೆ ತೆರಳದೇ ಆತನ ಮರ್ಮಾಂಗವನ್ನೆ ಕತ್ತರಿಸಿ ಹಾಕಿದ್ದಾಳೆ.

ಸಾಂದರ್ಭಿಕ ಚಿತ್ರ

By

Published : Sep 19, 2019, 2:11 PM IST

ಕರ್ನೂಲ್​:ಸಂಸಾರಕ್ಕೆ ಬಾ ಎಂದು ಕರೆದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿರುವ ಘಟನೆ ಕರ್ನೂಲ್​ ಜಿಲ್ಲೆಯ ಗಡಿವೆಮುಲ ತಾಲೂಕಿನ ಸೋಮಾಪುರಂನಲ್ಲಿ ನಡೆದಿದೆ.

ಪಾಣ್ಯಂ ತಾಲೂಕಿನ ಎಸ್​ ಕೊಟ್ಟಾಲ ಗ್ರಾಮದ ಯೂನುಸ್​​ ಎರಡು ವರ್ಷಗಳ ಹಿಂದೆ ಸೋಮಾಪುರಂ ಗ್ರಾಮದ ಹಸೀನಾಳನ್ನು ಮದುವೆಯಾಗಿದ್ದ. ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡ - ಹೆಂಡ್ತಿ ಮಧ್ಯೆ ಜಗಳವಾಗಿದ್ದು, ಹಸೀನಾ ತವರು ಮನೆ ಸೇರಿದ್ದಳು.

ಎರಡು ವರ್ಷದಿಂದ ಹೆಂಡ್ತಿಯ ಬರುವಿಕೆಗೆ ಕಾದ ಯೂನುಸ್​​​​​​ ಪ್ರಯತ್ನ ಪ್ರಯೋಜನವಾಗಲಿಲ್ಲ. ಎರಡು ವರ್ಷದ ಬಳಿಕ ಸೋಮಾಪುರಂನಲ್ಲಿರುವ ಅತ್ತೆಯ ಮನೆಗೆ ತೆರಳಿ ಪತ್ನಿ ಹಸೀನಾಳನ್ನು ಸಂಸಾರ ಮಾಡೋಣಾ ಬಾ ಎಂದು ಕರೆದಿದ್ದಾನೆ.

ಗಂಡ ಯೂನುಸ್​ ಮಾತು ಕೇಳಿದ ಹಾಸೀನಾ ಕೋಪಗೊಂಡಿದ್ದಾಳೆ. ಹಸೀನಾ ಮತ್ತು ಆಕೆಯ ಕುಟುಂಬಸ್ಥರು ಯೂನುಸ್​ನನ್ನು ಕಂಬಕ್ಕೆ ಕಟ್ಟಿ ಹಾಕಿ ಮನ ಬಂದಂತೆ ಥಳಿಸಿದ್ದಾರೆ. ಈ ಕ್ರಮದಲ್ಲಿ ಉದ್ರಿಕ್ತಗೊಂಡ ಹಸೀನಾ ತನ್ನ ಗಂಡನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ. ಸ್ಥಳೀಯರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಯೂನುಸ್​ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details