ಕರ್ನಾಟಕ

karnataka

ETV Bharat / bharat

ಸಹೋದರನಿಗೆ ರಾಖಿ ಕಟ್ಟಲು ತೆರಳಿದ ಪತ್ನಿ: ವಾಪಸ್​ ಬರುವುದರೊಳಗೆ ಇನ್ನೊಬ್ಬಳನ್ನು ವರಿಸಿದ ಪತಿ! - ಪತಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಮಹಿಳೆ ತವರು ಮನೆಗೆ ಹೋಗಿ ಬರುವುದರೊಳಗೆ ಆಕೆಯ ಪತಿ ಇನ್ನೊಬ್ಬಳನ್ನು ಮದುವೆಯಾದ ಘಟನೆ ನವದೆಹಲಿಯಲ್ಲಿ ನಡೆದಿದೆ.

Wife complains to dabari police station on husband second marriage
ಪತಿಯೊಂದಿಗೆ ವಾಗ್ವಾದಕ್ಕಿಳಿದ ಪತ್ನಿ

By

Published : Aug 13, 2020, 12:13 PM IST

ನವದೆಹಲಿ: ಮಹಿಳೆಯೊಬ್ಬಳು ಸಹೋದರನಿಗೆ ರಾಖಿ ಕಟ್ಟಲು ತವರು ಮನೆಗೆ ಹೋಗಿ ವಾಪಸ್ ಬರುವುದರೊಳಗೆ ಆಕೆಯ ಪತಿ ಇನ್ನೊಂದು ಮದುವೆಯಾಗಿರುವ ಘಟನೆ ನಗರದ ದಾಬ್ರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನ ವಿರುದ್ಧ ನೊಂದ ಮಹಿಳೆಯು ಪೊಲೀಸ್​ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.

18 ವರ್ಷದ ಹಿಂದೆ ವಿವಾಹವಾಗಿದ್ದ ಸುನಿತಾ ಎಂಬ ಮಹಿಳೆ ರಕ್ಷಾ ಬಂಧನ ಪ್ರಯುಕ್ತ ತನ್ನ ಸಹೋದರನಿಗೆ ರಾಖಿ ಕಟ್ಟಲು ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಉತ್ತರ ಪ್ರದೇಶದ ಬಾದೂನ್​ನಲ್ಲಿರುವ ತವರು ಮನೆಗೆ ತೆರಳಿದ್ದಳು. ಆಕೆ ಹಿಂದಿರುಗಿ ಬಂದಾಗ ಮನೆಯಲ್ಲಿ ಗಂಡನೊಂದಿಗೆ ಇನ್ನೊಬ್ಬ ಮಹಿಳೆಯಿದ್ದಳು. ಆಕೆಯ ಬಗ್ಗೆ ವಿಚಾರಿಸಿದಾಗ, ಈಕೆ ನನ್ನ ಎರಡನೇ ಪತ್ನಿ ಎಂದು ಗಂಡ ಹೇಳಿದ್ದ. ಅಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳಿಗೆ ಮನೆ ಬಿಟ್ಟು ಹೋಗುವಂತೆ ಹೇಳಿದ್ದನಂತೆ.

ಪತಿಯೊಂದಿಗೆ ವಾಗ್ವಾದಕ್ಕಿಳಿದ ಪತ್ನಿ

ಪೊಲೀಸರ ವಿರುದ್ಧ ಆರೋಪ:

ಗಂಡ ಎರಡನೇ ಮದುವೆಯಾಗಿ ಮೋಸ ಮಾಡಿರುವ ಬಗ್ಗೆ ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದೇನೆ. ಆದರೆ, ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುನಿತಾ ಆರೋಪಿಸಿದ್ದಾಳೆ. ಈ ನಡುವೆ ಪತ್ನಿಯ ವಿರುದ್ಧ ಈ ಮೊದಲೇ ನಾನು ಪೊಲೀಸರಿಗೆ ದೂರು ನೀಡಿದ್ದೆ ಎಂದು ಸುನಿತಾಳ ಪತಿ ಹೇಳಿದ್ದಾನೆ.

ABOUT THE AUTHOR

...view details