ಹೈದರಾಬಾದ್:ಅವರಿಬ್ಬರೂ ಪ್ರೀತಿಸಿ, ಹಿರಿಯರನ್ನು ಒಪ್ಪಿಸಿಯೇ ಮದುವೆಯಾದ್ರು. ವಿದೇಶದಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಸುಖವಾಗಿಯೇ ಸಂಸಾರ ಸಾಗುತ್ತಿತ್ತು. ಆದರೆ, ಸಣ್ಣದೊಂದು ಕಲಹಕ್ಕೆ ಇವರ ಜೀವನದ ಅಧ್ಯಾಯವೇ ಮುಗಿಸಿಸಿದ್ದಾರೆ.
ಪ್ರಕಾಶಂ ಜಿಲ್ಲೆಯ ಜೊನ್ನತಾಳಿ ಗ್ರಾಮದ ಶಿವರಾತ್ರಿ ರಮಾದೇವಿ, ಮೆಟ್ಟಲ ಗಂಗಯ್ಯ ವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿ ಮುಗಿಸಿದ್ದಾರೆ. ವಿಶ್ವವಿದ್ಯಾಯಲದಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ಇಬ್ಬರೂ ಪರಸ್ಪರ ಪ್ರೀತಿಸಿದ್ದರು. ಮೂರು ವರ್ಷಗಳ ಹಿಂದೆ ಹಿರಿಯರನ್ನು ಒಪ್ಪಿಸಿ ಮದುವೆಯಾದರು. ಇಬ್ಬರೂ ಸೌದಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.
ಒಂದೂವರೆ ವರ್ಷದ ಹಿಂದೆ ರಮಾದೇವಿ ಗರ್ಭಿಣಿಯಾಗಿದ್ದರಿಂದ ಸ್ವಗ್ರಾಮಕ್ಕೆ ಬಂದು ನೆಲೆಸಿದ್ದರು. ಬಳಿಕ ಗಂಗಯ್ಯಗೆ ಲಂಡನ್ನಲ್ಲಿ ಉದ್ಯೋಗಾವಕಾಶ ದೊರೆಯಿತು. ರಮಾದೇವಿಗೆ ಮಗಳು ಜನಿಸಿದ್ದು, ಗಂಗಯ್ಯ ತಿಂಗಳಿಗೊಮ್ಮೆ ಹೆಂಡ್ತಿ, ಮಗುವನ್ನು ನೋಡಲು ಬರುತ್ತಿದ್ದರು. ರಮಾದೇವಿಗೆ ಪಿಹೆಚ್ಡಿ ಮಾಡುವಂತೆ ಗಂಗಯ್ಯ ಬಲವಂತ ಪಡಿಸುತ್ತಿದ್ದ. ಇದಕ್ಕೆ ರಮಾದೇವಿ ಇಷ್ಟವಿಲ್ಲವೆಂದು ಹೇಳಿದ್ದರು. ಪಿಹೆಚ್ಡಿ ಮಾಡಿದಲ್ಲಿ ಲಂಡನ್ಗೆ ಕರೆದೊಯ್ಯುವುದಾಗಿ ಗಂಗಯ್ಯ ಹೆಂಡ್ತಿ ರಮಾದೇವಿಗೆ ಹೇಳುತ್ತಿದ್ದರು.
ಪಿಹೆಚ್ಡಿ ಓದುವ ಸಂಬಂಧವೇ ಇಬ್ಬರ ಮಧ್ಯೆ ಕಲಹಗಳು ನಡೆಯುತ್ತಿದ್ದವು. ಇತ್ತೀಚೆಗೆ ಅಗಸ್ಟ್ 29ರಂದು ಗಂಗಯ್ಯ ವಾಪಸ್ ಲಂಡನ್ಗೆ ತೆರಳಿದ್ದರು. ಅತ್ತ ಹೆಂಡ್ತಿ ರಮಾದೇವಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದರು. ಸುದ್ದಿ ತಿಳಿದ ತಕ್ಷಣವೇ ಗಂಗಯ್ಯ ಮರಳಿ ಫ್ಲೈಟ್ ಹತ್ತಿ ಹೈದರಾಬಾದ್ಗೆ ಬಂದಿದ್ದಾರೆ. ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಗೆ ಮನನೊಂದು ಸ್ವಗ್ರಾಮಕ್ಕೆ ತೆರಳದೇ ಘಟೆಕೇಸರ್-ಬಿಬಿನಗರ್ ರೈಲ್ವೇ ನಿಲ್ದಾಣಗಳ ಮಧ್ಯೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊನೆಯ ಬಾರಿ ಹೆಂಡ್ತಿ ನೋಡಲು ಗಂಗಯ್ಯ ಬರುತ್ತಾನೆಂದು ತಿಳಿದಿದ್ದ ಕುಟಂಬಕ್ಕೆ ಮತ್ತು ಸಂಬಂಧಿಕರಿಗೆ ನಿಜಕ್ಕೂ ಶಾಕ್ ಆಗಿತ್ತು. ಪ್ರೀತಿಸಿ ಮದುವೆಯಾದ ಹೆಂಡ್ತಿ ಮೇಲೆ ಗಂಗಯ್ಯ ಪ್ರಾಣ ಬಿಡುವಷ್ಟು ಪ್ರೀತಿ ಇಟ್ಟಿದ್ದನು. ಆಕೆ ಇರದ ಜೀವನ ತನಗೂ ಬೇಡವೆಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಗ್ರಾಮಸ್ಥರ ಮಾತಾಗಿತ್ತು. ಮಗು ಅನಾಥವಾಗಿದ್ದು, ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಇಬ್ಬರನ್ನು ಒಟ್ಟಿಗೆ ಅಂತ್ಯಸಂಸ್ಕಾರ ನೆರವೇರಿಸಿದರು.