ಕರ್ನಾಟಕ

karnataka

ETV Bharat / bharat

ಕೋವಿಡ್ ದೃಢಪಟ್ಟ ಬೆನ್ನಲ್ಲೆ ಆತ್ಮಹತ್ಯೆಗೆ ಶರಣಾದ ದಂಪತಿ - ಜಗ್ತಿಗಲ್ ಜಿಲ್ಲೆಯ ದಂಪತಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ

ಲಾವಣ್ಯ ದಂಪತಿ 10 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನೆಲೆಸಿದ್ದು, ಕಳೆದ 10 ತಿಂಗಳ ಹಿಂದಷ್ಟೇ ಜಗ್ತಿಗಲ್​​​ಗೆ ಆಗಮಿಸಿದ್ದರು. ಆದರೆ, ಲಾಕ್​ಡೌನ್ ಜಾರಿಯಾಗಿದ್ದ ಪರಿಣಾಮ ಮರಳಿ ಮಹಾರಾಷ್ಟ್ರಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ..

wife-and-husband-committed-suicide-after-they-tested-for-corona-positive-in-jagtial-district
ಕೋವಿಡ್ ದೃಢಪಟ್ಟ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ದಂಪತಿ

By

Published : Nov 13, 2020, 6:32 PM IST

ಜಗ್ತಿಯಲ್​​​ (ತೆಲಂಗಾಣ):ಇಲ್ಲಿನ ಜಗ್ತಿಗಲ್ ಜಿಲ್ಲೆಯ ದಂಪತಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. 45 ವರ್ಷದ ಗಂಜಿ ರಾಂಬಾಬು 40 ವರ್ಷದ ಪತ್ನಿ ಲಾವಣ್ಯ ಆತ್ಮಹತ್ಯೆ ಶರಣಾಗಿರುವ ದುರ್ದೈವಿಗಳಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ತನ್ನ ಪೋಷಕರಿಗೆ ಕರೆ ಮಾಡಿ ಇಲ್ಲಿನ ಕರೀಂನಗರ ಆಸ್ಪತ್ರೆಗೆ ತೆರವುದಾಗಿ ತಿಳಿಸಿದ್ದಾರೆ. ಕರೀಂನಗರ ಆಸ್ಪತ್ರೆಗೆ ಬಂದ ಪೋಷಕರಿಗೆ ಇವರಿಬ್ಬರ ಸುಳಿವೇ ಸಿಗಲಿಲ್ಲ. ಬಳಿಕ ಮೊಬೈಲ್ ನಂಬರ್​ಗೆ ಕರೆ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಈ ಹಿನ್ನೆಲೆ ಅವರ ಮನೆಗೆ ಆಗಮಿಸುವ ಮುನ್ನವೇ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಲಾವಣ್ಯ ದಂಪತಿ 10 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ನೆಲೆಸಿದ್ದು, ಕಳೆದ 10 ತಿಂಗಳ ಹಿಂದಷ್ಟೇ ಜಗ್ತಿಯಲ್​​​ಗೆ ಆಗಮಿಸಿದ್ದರು. ಆದರೆ ಲಾಕ್​ಡೌನ್ ಜಾರಿಯಾಗಿದ್ದ ಪರಿಣಾಮ ಮರಳಿ ಮಹಾರಾಷ್ಟ್ರಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ.

ABOUT THE AUTHOR

...view details