ನವದೆಹಲಿ:ಗಣರಾಜೋತ್ಸವ ದಿನ ಕೆಂಪುಕೋಟೆಯಲ್ಲಿ ಜನರಿಗೆ ಏಕೆ ಅವಕಾಶ ನೀಡಲಾಯಿತು? ಪ್ರತಿಭಟನೆಯನ್ನು ಗೃಹ ಸಚಿವರು ಯಾಕೆ ನಿಲ್ಲಿಸಲಿಲ್ಲ? ಅವರನ್ನು ಅಲ್ಲಿ ಬಿಡುವುದರ ಉದ್ದೇಶ ಏನು ಎಂದು ಅಮಿತ್ ಶಾ ಅವರನ್ನು ಕೇಳಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೆಂಪುಕೋಟೆ ಪ್ರವೇಶಿಸಲು ಅವಕಾಶ ನೀಡಿದ್ಯಾರು? ಗೃಹ ಸಚಿವರನ್ನು ಕೇಳಿ: ರಾಹುಲ್ ಗಾಂಧಿ
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರೈತರಿಗೆ ಮಾರಕವಾಗಿದ್ದು, ತಕ್ಷಣವೇ ಇವುಗಳನ್ನ ಹಿಂಪಡೆದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಜನವರಿ 26ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನು ತಕ್ಷಣವೇ ಹಿಂಪಡೆದುಕೊಳ್ಳಬೇಕು. ಕಳೆದ ಅನೇಕ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈವರೆಗೆ ಸರ್ಕಾರ ಅವರೊಂದಿಗೆ ಮಾತನಾಡಿಲ್ಲ. ಅವರ ಮೇಲೆ ಹಲ್ಲೆ ನಡೆಸುವ ಕೆಲಸ ಮಾಡ್ತಿದೆ. ಇಂದು ಕೂಡ ಸಿಂಘು ಗಡಿಯಲ್ಲಿ ರೈತರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ತಕ್ಷಣವೇ ರೈತರೊಂದಿಗೆ ಮಾತುಕತೆ ನಡೆಸಿ ಅದಕ್ಕೆ ಪರಿಹಾರ ನೀಡಬೇಕು. ಇಂತಹ ಪರಿಸ್ಥಿತಿಯಲ್ಲಿ ರೈತರು ಮನೆಗೆ ಹೋಗುತ್ತಾರೆಂದು ಅವರು ಭಾವಿಸಬಾರದು. ಅವರಿಗೆ ಬೇಕಾಗಿರುವುದು ಪರಿಹಾರ ಎಂದರು.