ನವದೆಹಲಿ: ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಭಾರತದ 20 ಸೈನಿಕರನ್ನು ಹತ್ಯೆಗೈದ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಸೈನಿಕರನ್ನು ನಿರಾಯುಧವಾಗಿ ಏಕೆ ಕಳುಹಿಸಲಾಗಿತ್ತು?: ರಾಹುಲ್ ಗಾಂಧಿ - Rajnath Singh
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಗುಡುಗಿರುವ ರಾಹುಲ್ ಗಾಂಧಿ, ಭಾರತೀಯ ಸೈನಿಕರನ್ನು ನಿರಾಯುಧವಾಗಿ ಏಕೆ ಕಳುಹಿಸಬೇಕಾಯಿತು ಎಂದು ಕೇಳಿದ್ದಾರೆ.
ಸಂಸದ ರಾಹುಲ್ ಗಾಂಧಿ
ಚೀನಾ ಸೈನಿಕರು ನಮ್ಮ 20 ಯೋಧರನ್ನು ಅಮಾನೀಯವಾಗಿ ಹತ್ಯೆಗೈದಿದ್ದಾರೆ. ಸೈನಿಕರನ್ನು ಗಡಿಗೆ ನಿರಾಯುಧವಾಗಿ ಕಳುಹಿಸಿದ್ದು ಏಕೆ? ಅವರ ಸಾವಿನ ಹೊಣೆಗಾರಿಕೆಯನ್ನು ಹೊರುವವರು ಯಾರು? ಎಂದು ವಿಡಿಯೋ ಮೂಲಕ ರಾಹುಲ್, ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.