ಕರ್ನಾಟಕ

karnataka

ಚಾರ್​ಮಿನಾರ್​ನಲ್ಲಿ ಮಾತ್ರ ಧ್ವಜ ಮೆರವಣಿಗೆ ಯಾಕೆ..? ಓವೈಸಿ

By

Published : Feb 29, 2020, 8:21 PM IST

ಹೈದರಾಬಾದ್ ಸಿಟಿ ಪೊಲೀಸರ ಟ್ವೀಟ್​​ಗೆ ಉತ್ತರಿಸಿರುವ ಎಐಎಂ ಅಧ್ಯಕ್ಷ ಓವೈಸಿ, ಚಾರ್ಮಿನಾರ್‌ನಲ್ಲಿ ಮಾತ್ರ ಧ್ವಜ ಮೆರವಣಿಗೆ ಯಾಕೆ..?, ಸಿಕಂದರಾಬಾದ್ ರೈಲ್ವೆ ನಿಲ್ದಾಣ, ಹೈಟೆಕ್ ಸಿಟಿ ಹಾಗೂ ಯುಎಸ್ ಸಾಫ್ಟ್‌ವೇರ್ ಕಂಪನಿಯ ಮುಂದೆ ಏಕೆ ಧ್ವಜ ಮೆರವಣಿಗೆ ಇರಬಾರದು?" ಮರು ಟ್ವೀಟ್​ ಮಾಡಿದ್ದಾರೆ.

why-police-flag-march-only-at-charminar-asks-owaisi
ಚಾರ್​ಮಿನಾರ್​ನಲ್ಲಿ ಮಾತ್ರ ಧ್ವಜ ಮೆರವಣಿಗೆ ಯಾಕೆ..? ಓವೈಸಿ

ಹೈದರಾಬಾದ್ : ಚಾರ್​ಮಿನಾರ್‌ನಲ್ಲಿ ಮಾತ್ರ ಪೊಲೀಸರು ಯಾಕೆ ಧ್ವಜ - ಮೆರವಣಿಗೆ ನಡೆಸುತ್ತಿದ್ದಾರೆ ಎಂದು ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಟ್ವೀಟ್​ ಮೂಲಕ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

"ಚಾರ್ಮಿನಾರ್‌ನಲ್ಲಿ ಮಾತ್ರ ಧ್ವಜ ಮೆರವಣಿಗೆ ಯಾಕೆ..?, ಸಿಕಂದರಾಬಾದ್ ರೈಲ್ವೆ ನಿಲ್ದಾಣ, ಹೈಟೆಕ್ ಸಿಟಿ ಹಾಗೂ ಯುಎಸ್ ಸಾಫ್ಟ್‌ವೇರ್ ಕಂಪನಿಯ ಮುಂದೆ ಏಕೆ ಧ್ವಜ ಮೆರವಣಿಗೆ ಇರಬಾರದು?" ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಸಿಬ್ಬಂದಿ ಚಾರ್​ಮಿನಾರ್ ಬಳಿ ಧ್ವಜ ಮೆರವಣಿಗೆ ನಡೆಸುತ್ತಿರುವ ಚಿತ್ರವನ್ನು ಪೊಲೀಸರು ಪೋಸ್ಟ್ ಮಾಡಿದ್ದರು, ಧ್ವಜ - ಮೆರವಣಿಗೆಗೆ ಅನುಮತಿ ನೀಡಿದ ಚಾರ್​ಮಿನಾರ್​ ಪ್ರದೇಶದ ಪರಿಸ್ಥಿತಿ ಮುಂದೇನು ಎಂದು ಕೆಲವರು ಕೇಳಿದ್ದರು.

ಕೋಮು ಗಲಭೆಗಳಿಂದ ದೆಹಲಿಯು ನಡುಗಿದ ನಂತರ ಹೈದರಾಬಾದ್ ಪೊಲೀಸರು ಎಚ್ಚರಿಕೆ ವಹಿಸಿ ಧ್ವಜ - ಮೆರವಣಿಗೆ ಮಾಡಿದ್ರು. ದೆಹಲಿ ಪೊಲೀಸರು ಗಲಭೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಿ ನಗರದ ಕೆಲವು ಭಾಗಗಳಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಚಾರ್​ಮಿನಾರ್​ ಬಳಿಯ ಐತಿಹಾಸಿಕ ಮೆಕ್ಕಾ ಮಸೀದಿಯ ಹೊರಗೆ ಕೂಡ ಪ್ರತಿಭಟನೆ ನಡೆಯಿತು. ಶುಕ್ರವಾರ ಪ್ರಾರ್ಥನೆಯ ನಂತರ ಯುವಕರು ದೆಹಲಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ನಾಗರಿಕರಿಗೆ ಜಾಗರೂಕರಾಗಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕೆಂದು ಮನವಿ ಮಾಡಿದರು.

ABOUT THE AUTHOR

...view details