ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿವಸೇನೆ ನಡುವೆ ನಡೆಯುತ್ತಿರುವ ಮಾತಿನ ಯುದ್ಧದ ಮಧ್ಯೆ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ವಿನಾಯಕ್ ದಾಮೋದರ್ (ವೀರ) ಸಾವರ್ಕರ್ ಅವರಿಗೆ ಭಾರತ್ ರತ್ನ ಏಕೆ ನೀಡಲಿಲ್ಲ ಎಂದು ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ವೀರ ಸಾವರ್ಕರ್‌ಗೆ ಭಾರತ ರತ್ನ ಏಕೆ ನೀಡಿಲ್ಲ: ಬಿಜೆಪಿಗೆ ಸಂಜಯ್ ರಾವತ್ ಪ್ರಶ್ನೆ - ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾಷಣ
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ವೀರ ಸಾವರ್ಕರ್ ಅವರಿಗೆ ಭಾರತ್ ರತ್ನ ಏಕೆ ನೀಡಲಿಲ್ಲ ಎಂದು ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ದಸರಾ ರ‍್ಯಾಲಿಯಲ್ಲಿ ವೀರ ಸಾವರ್ಕರ್ ಕುರಿತು ಏನೂ ಹೇಳಲಿಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ಹೆದರುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ರಾಮ್ ಕದಮ್ ಹೇಳಿಕೆ ನೀಡಿದ ಬಳಿಕ ಸಂಜಯ್ ರಾವತ್ ಈ ರೀತಿಯಾಗಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್,"ಶಿವಸೇನೆ ವೀರ್ ಸಾವರ್ಕರ್ ಕುರಿತು ತನ್ನ ನಿಲುವು ಎಂದಿಗೂ ಬದಲಾಯಿಸಿಲ್ಲ. ನಾವು ಅವರೊಂದಿಗೆ ಯಾವಾಗಲೂ ಭಾವನಾತ್ಮಕ ಸಂಪರ್ಕ ಹೊಂದಿದ್ದೇವೆ. ನಮ್ಮನ್ನು ಟೀಕಿಸುವ ಬಿಜೆಪಿ ಅವರಿಗೆ ಭಾರತ ರತ್ನ ಏಕೆ ನೀಡಲಿಲ್ಲ ಎಂದು ಉತ್ತರಿಸಬೇಕು" ಎಂದು ರಾವತ್ ಪ್ರಶ್ನಿಸಿದ್ದಾರೆ.