ಕರ್ನಾಟಕ

karnataka

ETV Bharat / bharat

‘ಹಿಂದುತ್ವ ಎಂದರೆ ರಾಷ್ಟ್ರೀಯತೆ’.. ಕೇಂದ್ರ ಸರ್ಕಾರಕ್ಕೆ ಶಿವಸೇನೆ ಪಾಠ

ಶ್ರೀನಗರದ ಲಾಲ್​ ಚೌಕ್​ನಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದ ಮೂವರನ್ನು ಪೊಲೀಸರು ಏಕೆ ಬಂಧಿಸಿದ್ದಾರೆ ಎಂದು ಶಿವಸೇನೆ ಪ್ರಶ್ನಿಸಿದೆ. ಇದರರ್ಥ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿ ಬಳಿಕವೂ ಅಲ್ಲಿನ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ..

Shiv Sena
ಶಿವಸೇನೆ ಗುಡುಗು

By

Published : Oct 28, 2020, 2:00 PM IST

ಮುಂಬೈ:ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ ಮೇಲೂ ಶ್ರೀನಗರದ ಲಾಲ್ ​ಚೌಕ್​ನಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದ ಮೂವರನ್ನು ಪೊಲೀಸರು ಏಕೆ ಬಂಧಿಸಿದ್ದಾರೆ ಎಂದು ಶಿವಸೇನೆ ಪ್ರಶ್ನಿಸಿದೆ.

ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದಿದ್ದು, 370ನೇ ವಿಧಿ ರದ್ಧತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ಏನು ಬದಲಾಗಿದೆ? ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡದಿರುವ ಬಗ್ಗೆ ನಟಿ ಕೋಪಗೊಳ್ಳಬೇಕು ಎಂದು ಹೆಸರು ಉಲ್ಲೇಖಿಸದೆ ನಟಿ ಕಂಗನಾ ರನೌತ್ ವಿರುದ್ಧ ಹರಿಹಾಯ್ದಿದ್ದಾರೆ.

ಕೆಲ ದಿನಗಳ ಹಿಂದೆ ನಟಿ ಕಂಗನಾ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಇದರಿಂದ ಶಿವಸೇನೆ ಹಾಗೂ ಕಂಗನಾ ನಡುವೆ ವಾಗ್ಯುದ್ಧ ನಡೆದಿತ್ತು. ಲಾಲ್​ಚೌಕ್​ನಲ್ಲಿ ರಾಷ್ಟ್ರಧ್ವಜ ಹಾರಿಸಲು ಯುವಕರಿಗೆ ಯಾಕೆ ಅವಕಾಶ ನೀಡಲಿಲ್ಲ ಅನ್ನೋದು ರಾಷ್ಟ್ರದ ಜನತೆಗೆ ತಿಳಿಸಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡದಿದ್ದಲ್ಲಿ ಕಾಶ್ಮೀರದ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂಬರ್ಥ ಬರುತ್ತದೆ. ಹಿಂದುತ್ವ ಎಂದರೆ ರಾಷ್ಟ್ರೀಯತೆ ಎಂದು ಬಿಜೆಪಿ ವಿರುದ್ಧ ಶಿವಸೇನೆ ಗುಡುಗಿದೆ.

ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿ ಮತ್ತೆ ಜಾರಿಗೆ ತರಲು ಚೀನಾದ ಸಹಾಯ ಪಡೆದುಕೊಳ್ಳಲಾಗುವುದು ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರುಕ್ ಅಬ್ದಲ್ಲಾ ಹೇಳಿದ್ದಾರೆ. ಕಳೆದ ವಾರವಷ್ಟೇ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ರಾಜ್ಯದಲ್ಲಿ ಹೊಸದಾಗಿ ಜಾರಿಗೊಳಿಸಲಾದ ಸಾಂವಿಧಾನಿಕ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಆವರೆಗೂ ಚುನಾವಣೆ ನಡೆಯಲು ನಾವು ಅವಕಾಶ ಕೊಡಲ್ಲ ಎಂದಿದ್ದಾರೆಂದು ಮುಖವಾಣಿಯಲ್ಲಿ ಬರೆಯಲಾಗಿದೆ.

370 ನೇ ವಿಧಿ ರದ್ದುಪಡಿಸಿ ವರ್ಷ ಕಳೆದರೂ, ಕಾಶ್ಮೀರಕ್ಕೆ ಒಂದು ರೂಪಾಯಿ ಹೂಡಿಕೆ ಬಂದಿಲ್ಲ. ನಿರುದ್ಯೋಗಿ ಯುವಕರು ಹಾದಿ ತಪ್ಪುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಹರಿಹಾಯ್ದಿದೆ.

ABOUT THE AUTHOR

...view details