ಕರ್ನಾಟಕ

karnataka

ETV Bharat / bharat

ಚುನಾವಣಾ ಆಯೋಗ ಏನು ಮಾಡುತ್ತಿದೆ? ಅರವಿಂದ್ ಕೇಜ್ರಿವಾಲ್ ಪ್ರಶ್ನೆ

ನವದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿ ಹಲವು ಗಂಟೆಗಳು ಕಳೆದರೂ ಮತದಾನ ಪ್ರಮಾಣದ ಅಂಕಿಅಂಶ ನೀಡದ ಚುನಾವಣಾ ಆಯೋಗದ ಕ್ರಮವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

Why is EC not yet releasing final poll percentage,ಅರವಿಂದ್ ಕೇಜ್ರಿವಾಲ್ ಪ್ರಶ್ನೆ
ಅರವಿಂದ್ ಕೇಜ್ರಿವಾಲ್

By

Published : Feb 9, 2020, 5:36 PM IST

ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾದರೂ ಇಲ್ಲಿಯವರೆಗೂ ಚುನಾವಣಾ ಆಯೋಗ ಏಕೆ ಮತದಾನದ ಪ್ರಮಾಣದ ಬಗ್ಗೆ ಮಾಹಿತಿ ನೀಡುತ್ತಿಲ್ಲ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ನಿಜವಾಗಿಯೂ ಇದು ಆಘಾತಕಾರಿ ವಿಚಾರ. ಚುನಾವಣಾ ಆಯೋಗ ಏನು ಮಾಡುತ್ತಿದೆ? ಮತದಾನ ಮುಗಿದು ಹಲವು ಗಂಟೆಗಳೇ ಕಳೆದಿವೆ. ಆದರೂ ಆಯೋಗ ಮತದಾನದ ಅಂಕಿಅಂಶಗಳನ್ನೇಕೆ ಬಿಡುಗಡೆ ಮಾಡುತ್ತಿಲ್ಲ?' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ನವದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಚುನಾವಣಾ ಆಯೋಗದ ಮತದಾನದ ಆ್ಯಪ್ ಪ್ರಕಾರ, ಶನಿವಾರ ರಾತ್ರಿ 10.26 ಕ್ಕೆ ಶೇ 61.67 ಮತದಾನ ನಡೆದಿದೆ. ಆದರೆ ಆಯೋಗ ಇಲ್ಲಿಯವರೆಗೆ ಅಧಿಕೃತವಾದ ಮಾಹಿತಿ ನೀಡಿಲ್ಲ.

2015ರಲ್ಲಿ ನಡೆದ ಚುನಾವಣೆಯಲ್ಲಿ ಶೇ.67.12ರಷ್ಟು ಮತದಾನ ನಡೆದಿತ್ತು. ಆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ABOUT THE AUTHOR

...view details