ನವದೆಹಲಿ: ಭಾರತ-ಚೀನಾ ಸೈನಿಕರ ಸಂಘರ್ಷದ ವಿಚಾರದಲ್ಲಿ ಕೇಂದ್ರದ ವಿರುದ್ಧ ಕಿಡಿ ಕಾರುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮತ್ತೊಮ್ಮೆ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾ ಪತ್ರಿಕೆಗಳು ಪ್ರಧಾನಿ ಮೋದಿಯನ್ನು ಹೊಗಳಿವೆ ಎಂಬ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಚೀನಾ ನಮ್ಮ ಸೈನಿಕರನ್ನು ಕೊಂದಿದೆ. ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಹಾಗಾದರೆ, ಈ ಸಂಘರ್ಷದ ಸಂದರ್ಭದಲ್ಲಿ ಚೀನಾ ಮೋದಿಯನ್ನು ಏಕೆ ಹೊಗಳುತ್ತಿದೆ?' ಎಂದು ಪ್ರಶ್ನೆ ಮಾಡಿದ್ದಾರೆ.