ವಯನಾಡು: ಆರ್ಥಿಕತೆಯೇ ಭಾರತದ ಅತಿದೊಡ್ಡ ಶಕ್ತಿ ಆದರೆ, ಅದನ್ನೇ ಪ್ರಧಾನಿ ಮೋದಿ ಇಲ್ಲದಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನಿರುದ್ಯೋಗ ಪ್ರಮಾಣ ಹೆಚ್ಚಾಗಲು ಕಾರಣವೇನು? ಮೋದಿಗೆ ರಾಹುಲ್ ಪ್ರಶ್ನೆ - ಪ್ರಧಾನಿ ಮೋದಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ
ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರ ಈ ದೇಶದ ಆರ್ಥಿಕತೆಯನ್ನ ಹಾಳುಗೆಡವಿದ್ದಾರೆ. ಯಾಕಾಗಿ ಹೀಗೆ ಮಾಡಿದ್ರಿ, ಇಷ್ಟೊಂದು ಪ್ರಮಾಣದ ನಿರುದ್ಯೋಗಿಗಳನ್ನ ಏಕೆ ಸೃಷ್ಟಿಮಾಡಿದ್ರಿ? ಇದರ ಬಗ್ಗೆ ಪ್ರಧಾನಿ ಮೋದಿ ಚರ್ಚೆ ಮಾಡಬೇಕು ಎಂದಿದ್ದಾರೆ.
ಇದಕ್ಕೂ ಮೊದಲು ಬಂಡೀಪುರ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದರು.