ನವದೆಹಲಿ: ಗಾಲ್ವಾನ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ಜೊತೆಗಿನ ಸಂಬಂಧವನ್ನು ಯಥಾಸ್ಥಿತಿಗೆ ತರಲು ಸರ್ಕಾರ ಏಕೆ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸಿ ಉಭಯ ದೇಶಗಳ ಸಂಬಂಧವನ್ನು ಯಥಾಸ್ಥಿತಿಗೆ ತರುವುದು ಕೇಂದ್ರ ಸರ್ಕಾರದ ಹೊಣೆ. ಗಾಲ್ವಾನ್ನಲ್ಲಿ ಉಂಟಾದ ಘರ್ಷಣೆ ಬಗ್ಗೆ ಪ್ರಶ್ನಿಸಿದ ರಾಗಾ, ಈ ಘಟನೆ ನಡೆದ ನಂತರ ಪ್ರಧಾನಿ ಮೋದಿ ಚೀನಾದೊಂದಿಗೆ ಮಾತುಕತೆ ನಡೆಸಿ ಈ ಹಿಂದೆ ಅಸ್ತಿತ್ವದಲ್ಲಿರುವ ವ್ಯವಹಾರಗಳ ಪುನಃಸ್ಥಾಪನೆ ಮಾಡಬಹುದಿತ್ತು. ಆದರೆ ಈ ಕಾರ್ಯವನ್ನು ಪ್ರಧಾನಿ ಮಾಡಲಿಲ್ಲ. ಇದರ ಹಿಂದಿನ ಕಾರಣವಾದರೂ ಏನಿರಬಹುದು ಎಂದು ಪ್ರಶ್ನಿಸಿದ್ದಾರೆ.