ಕರ್ನಾಟಕ

karnataka

ETV Bharat / bharat

ಒಂದೂವರೆ ದಿನದಲ್ಲಿ ರಷ್ಯಾ, 4 ದಿನದಲ್ಲಿ ಅಮೆರಿಕ; ಭಾರತದ ಚಂದ್ರಯಾನಕ್ಕೆ 48 ದಿನ! ಕಾರಣ? - ಇಸ್ರೋ ಚಂದ್ರಯಾನ

ಆರು ದಶಕಕ್ಕೂ ಮುಂಚೆಯೇ ರಷ್ಯಾ ಹಾಗೂ ಅಮೆರಿಕ ಕೇವಲ ಕೆಲ ದಿನಗಳಲ್ಲೇ ಗುರಿಯನ್ನು ತಲುಪಿತ್ತು. ಆ ಎರಡು ರಾಷ್ಟ್ರಗಳಿಗೆ ಸಾಧ್ಯವಾದ ವೇಗ ಭಾರತಕ್ಕೆ ಯಾಕೆ ಸಾಧ್ಯವಾಗಿಲ್ಲ ಅನ್ನೋದೇ ಆಸಕ್ತಿಕರ ವಿಚಾರ.

ಚಂದ್ರಯಾನ-2

By

Published : Sep 6, 2019, 11:31 AM IST

Updated : Sep 6, 2019, 12:52 PM IST

ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ನಿಗದಿತ ಗುರಿ ತಲುಪಲು ಇನ್ನೂ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಉಡಾವಣೆಯ ಬಳಿಕ ಸರಿಯಾಗಿ 48 ದಿನದ ಬಳಿಕ ಚಂದ್ರಯಾನ-2 ರಾಕೆಟ್ ಚಂದಿರನ ಅಂಗಳಕ್ಕೆ ಕಾಲಿಡುತ್ತಿದೆ.

ಆದರೆ ಒಂದು ವಿಚಾರ ಇಲ್ಲಿ ಅಚ್ಚರಿ ಮೂಡಿಸುವಂತಿದೆ. ಆರು ದಶಕಕ್ಕೂ ಮುಂಚೆಯೇ ರಷ್ಯಾ ಹಾಗೂ ಅಮೆರಿಕ ಕೇವಲ ಕೆಲ ದಿನಗಳಲ್ಲೇ ಗುರಿ ತಲುಪಿತ್ತು. ಆ ಎರಡು ರಾಷ್ಟ್ರಗಳಿಗೆ ಸಾಧ್ಯವಾದ ವೇಗ ಭಾರತಕ್ಕೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ದಕ್ಷಿಣ ಧ್ರುವದ ಆಯ್ಕೆಯ ಹಿಂದಿದೆ ಈ ಕಾರಣ! ನಾಸಾಗೂ ಅಗತ್ಯ ಚಂದ್ರಯಾನ-2 ಯಶಸ್ಸು

1959ರಲ್ಲಿ ಯುಎಸ್​ಎಸ್​ಆರ್​(ಈಗಿನ ರಷ್ಯಾ) ಲುನಾ-2 ಹೆಸರಿನ ರಾಕೆಟನ್ನು​ ಚಂದ್ರನ ಬಳಿಗೆ ಕೇವಲ 34 ಗಂಟೆಗಳಲ್ಲಿ ಕಳುಹಿಸಿತ್ತು. ಇದಾದ ಹತ್ತು ವರ್ಷದ ಬಳಿಕ ಅಮೆರಿಕದ ನಾಸಾ ಅಪೋಲೊ-11 ಹೆಸರಿನ ಮಾನವ ಸಹಿತ ರಾಕೆಟನ್ನು ನಾಲ್ಕು ದಿನ ಆರು ಗಂಟೆ ಹಾಗೂ 25 ನಿಮಿಷದಲ್ಲಿ ಸುರಕ್ಷಿತವಾಗಿ ಚಂದ್ರನಲ್ಲಿ ಇಳಿಸಿತ್ತು.

ಲುನಾ-2(ರಷ್ಯಾ)

ಭಾರತದ 2ನೇ ಚಂದ್ರಯಾನ ನಿಗದಿತ ಗುರಿಯನ್ನು ತಲುಪಲು ಕಾರಣವಾಗುತ್ತಿರೋದು ರಾಕೆಟ್ ನಿರ್ಮಾಣ ಮತ್ತು ಇಂಧನದ ಪ್ರಮಾಣ. ಅಪೋಲೊ-11 ರಾಕೆಟನ್ನು​ ಸಟರ್ನ್-ವಿ ಎನ್ನುವ ಭಾರವಾದ ಲಿಫ್ಟ್ ಲಾಂಚರ್ ಮೂಲಕ ನಿರ್ಮಾಣ ಮಾಡಲಾಗಿತ್ತು ಮತ್ತು ಈ ಯೋಜನೆಗೆ ಸಾಕಷ್ಟು ಹಣವನ್ನು ಸುರಿಯಲಾಗಿತ್ತು. ಪರಿಣಾಮ ರಾಕೆಟ್ ಗಂಟೆಗೆ 39,000ಕಿ.ಮೀ. ವೇಗದಲ್ಲಿ ಸಾಗಿತ್ತು. ಈ ರಾಕೆಟ್ 43 ಟನ್​​ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು. ಜೊತೆಗೆ ನೇರವಾಗಿ ಚಂದ್ರನ ಬಳಿಗೆ ಈ ರಾಕೆಟ್ ಸಾಗಿತ್ತು.

ಚಂದ್ರಯಾನ-2 ಅಪೋಲೋ ಮಿಷನ್‌ಗಿಂತ ಹೇಗೆ ಭಿನ್ನ?

ಸದ್ಯ ಎರಡನೇ ಬಾರಿಗೆ ಚಂದ್ರನ ಬಳಿಗೆ ತೆರಳುತ್ತಿರುವ ಭಾರತದ ಬಳಿ ಇಷ್ಟೊಂದು ಸದೃಢ ರಾಕೆಟ್ ಇಲ್ಲ. ಜೊತೆಗೆ ಕಡಿಮೆ ಖರ್ಚಿಗೆ ಹೆಚ್ಚಿನ ಒತ್ತು ನೀಡಿರುವ ಇಸ್ರೋ ಅಷ್ಟೊಂದು ಪ್ರಮಾಣದಲ್ಲಿ ಇಂಧನವನ್ನು ರಾಕೆಟ್​​ನಲ್ಲಿ ತುಂಬಿಸಿಲ್ಲ. ಪ್ರತಿಬಾರಿಯೂ ಕಕ್ಷೆಯ ಬಳಿ ಬರುತ್ತಿದ್ದಂತೆ ಎಂಜಿನ್ ಆನ್ ಮಾಡಿ ವೇಗ ಹೆಚ್ಚಿಸಿ ಮುಂದಕ್ಕೆ ತಳ್ಳಲಾಗುತ್ತದೆ. ಈ ಪ್ರಕ್ರಿಯೆಯಿಂದ ಇಸ್ರೋದ ಸದ್ಯದ ಯೋಜನೆ ಕೊಂಚ ನಿಧಾನವಾಗಿ ಚಂದಿರನ ಅಂಗಳಕ್ಕೆ ತಲುಪುತ್ತಿದೆ.

ಅಪೋಲೊ-11(ಅಮೆರಿಕಾ)

ಚಂದ್ರಯಾನ-2ರ ರಾಕೆಟ್​ ಅನ್ನು 'ಬಾಹುಬಲಿ' ಎಂದು ಕರೆಯಲಾಗಿದ್ದರೂ ಅಮೆರಿಕದ ಅಪೋಲೊ-11 ಹೋಲಿಕೆ ಮಾಡಿದರೆ ಇಸ್ರೋ ರಾಕೆಟ್ ಅಷ್ಟೊಂದು ಭಾರವಾಗಿಲ್ಲ. ಅಪೋಲೋ-11 ಸಾಮರ್ಥ್ಯ 43 ಟನ್ ಭಾರ ಇದ್ದರೆ ಭಾರತ ಚಂದ್ರಯಾನ-2ರ ಭಾರ 4 ಟನ್ ಮಾತ್ರ..!

Last Updated : Sep 6, 2019, 12:52 PM IST

ABOUT THE AUTHOR

...view details