ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂಸತ್ ಆವರಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ದೇಶ ಕಾಯುತ್ತಿರುವ ನಮ್ಮ ಯೋಧರ ಜತೆ ಇಡಿ ದೇಶವೇ ನಿಂತಿದೆ ಎಂಬುದನ್ನು ಸಂಸತ್ತು ಒಗ್ಗಟ್ಟಾಗಿ ಸಂದೇಶವನ್ನು ಕಳುಹಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಗಡಿಯಲ್ಲಿದೆ ನಮ್ಮ ಸೈನ್ಯ, ಒಂದೇ ಧ್ವನಿಯಲ್ಲಿ ಸಂಸತ್ ನೀಡಲಿದೆ ಒಗ್ಗಟ್ಟಿನ ಸಂದೇಶ: ಪ್ರಧಾನಿ - ಪ್ರಧಾನಿ ನರೇಂದ್ರ ಮೋದಿ ಮಾತು
ಒಂದು ಕಡೆ ಕೊರೊನಾ ಕಾಟ ಇನ್ನೊಂದು ಕಡೆ ಕೆಲಸದ ಜವಾಬ್ದಾರಿ. ಸಂಸದರು ಕೆಲಸದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಒಂದು ಕಡೆ ಕೊರೊನಾ ಕಾಟ ಇನ್ನೊಂದು ಕಡೆ ಕೆಲಸದ ಜವಾಬ್ದಾರಿ. ಸಂಸದರು ಕೆಲಸದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಸಂಸದರ ಈ ನಡೆಗೆ ನಾನು ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈ ಬಾರಿ ಲೋಕಸಭಾ ಕಲಾಪ ಮತ್ತು ರಾಜ್ಯಸಭಾ ಕಲಾಪ ಬೇರೆ ಬೇರೆ ಸಮಯದಲ್ಲಿ ನಡೆಯಲಿದೆ. ಶನಿವಾರ ಮತ್ತು ಭಾನುವಾರವೂ ಕಲಾಪ ನಡೆಯಲಿದೆ ಎಂದು ಪ್ರಧಾನಿ ಹೇಳಿದರು.
ಇಡೀ ವಿಶ್ವವನ್ನೇ ವ್ಯಾಪಿಸಿರುವ ಕೋವಿಡ್19 ಸೋಂಕಿನ ಬಗ್ಗೆಯೂ ಮೋದಿ ಮಾತನಾಡಿದರು. ವಿಶ್ವದ ಯಾವ ಮೂಲೆಯಲ್ಲಾದರೂ ಸರಿ, ಕೊರೊನಾವೆ ಲಸಿಕೆ ಕಂಡುಹಿಡಿಯಲೇಬೇಕು. ನಮ್ಮ ವಿಜ್ಞಾನಿಗಳ ಜತೆ ನಾವೂ ಸೇರಿಕೊಂಡು, ಈ ಸಮಸ್ಯೆಯಿಂದ ಪ್ರತಿಯೊಬ್ಬರನ್ನೂ ಹೊರಬರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಪಿಎಂ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.