ಕರ್ನಾಟಕ

karnataka

ETV Bharat / bharat

ಅಜಂ ಖಾನ್​ಗೆ ಮುಳುವಾಗುತ್ತಾ 'ಖಾಕಿ' ಕಾಮೆಂಟ್​...ವಿಜಯ ಸಾಧಿಸಲಿದ್ದಾರಾ ಜಯಪ್ರದಾ ? - ರಾಂಪುರ್​ ಲೋಕಸಭಾ

ಉತ್ತರ ಪ್ರದೇಶದ ರಾಂಪುರ್​ ಲೋಕಸಭಾ ಕ್ಷೇತ್ರದಲ್ಲಿ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಹಿಂದೆ ಒಂದೇ ಪಕ್ಷದಲ್ಲಿದ್ದ ಅಜಂ ಖಾನ್ ಹಾಗೂ ಚಿತ್ರನಟಿ ಜಯಪ್ರದಾ ಪರಸ್ಪರ ಎದುರಾಳಿಗಳಾಗಿದ್ದಾರೆ.

ಅಜಂ ಖಾನ್​

By

Published : May 22, 2019, 12:59 PM IST

ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಜಂ ಖಾನ್ ಕಣದಲ್ಲಿದ್ದು, ಇವರಿಗೆ ಸೋಲುಣಿಸುವ ಪಣ ತೊಟ್ಟು ಬಿಜೆಪಿಯಿಂದ ಜಯಪ್ರದಾ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ರಾಂಪುರ್​ ಕ್ಷೇತ್ರ ರಾಜಕೀಯ ನಾಯಕರ ಮಾತಿನ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಪ್ರತಿಸ್ಪರ್ಧಿ ಜಯಪ್ರದಾ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಅಜಂ ಖಾನ್ ಏಕವಚನದಲ್ಲಿ ಅವರನ್ನು ಟೀಕಿಸಿದ್ರು. ರಾಂಪುರಕ್ಕೆ ಜಯಪ್ರದಾಳನ್ನು ಕರೆತಂದಿದ್ದು ನಾನೆ. ಅವಳನ್ನು ಯಾರೂ ಮುಟ್ಟದಂತೆ ನಾನು ನೋಡಿಕೊಂಡಿದ್ದಕ್ಕೆ ನೀವೆ ಸಾಕ್ಷಿ. ಆದರೆ 17 ವರ್ಷಗಳ ಬಳಿಕ ಆಕೆಯ ನಿಜವಾದ ಮುಖ ತಿಳಿಯಿತು. ಆಕೆ ಖಾಕಿ ಒಳಉಡುಪು ಧರಿಸುತ್ತಾರೆ ಎಂದು ಕಳೆದ 17 ದಿನಗಳಲ್ಲಿ ತಿಳಿಯಿತು ಎಂದು ವಿವಾದಿತ ಹೇಳಿಕೆ ನೀಡಿ ಸಾಕಷ್ಟು ಟೀಕೆ ಎದುರಿಸಿದ್ದರು.

ಮೂಲತಃ ಆಂಧ್ರಪ್ರದೇಶದವರಾಗಿರುವ ಜಯಪ್ರದಾ, ಕನ್ನಡ, ತೆಲುಗು, ಹಿಂದಿ ಮತ್ತಿತರ ಭಾಷೆಗಳ 70ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಬಳಿಕ 1990ರ ದಶಕದಲ್ಲಿ ಅವರು ರಾಜಕೀಯ ಪ್ರವೇಶಿಸಿದ್ದು, 2014ರಲ್ಲಿ ರಾಷ್ಟ್ರೀಯ ಲೋಕದಳ ಟಿಕೆಟ್‌ನಲ್ಲಿ ಬಿಜ್ನೂರ್‌ನಿಂದ ಸ್ಫರ್ಧಿಸಿ ಬಿಜೆಪಿ ಅಭ್ಯರ್ಥಿಯೆದುರು ಸೋತಿದ್ದರು. ಅದಕ್ಕೂ ಮೊದಲು ಎನ್‌ಟಿ ರಾಮರಾವ್, ಚಂದ್ರಬಾಬು ನಾಯ್ಡು ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಜತೆಗೂ ರಾಜಕೀಯದಲ್ಲಿ ಕೆಲಸ ಮಾಡಿದ್ದರು. ಇದೀಗ ಬಿಜೆಪಿ ಪಾಳಯಕ್ಕೆ ಹಾರಿ ಚುನಾವಣೆ ಎದುರಿಸುತ್ತಿದ್ದಾರೆ.

ಇತ್ತ ರಾಂಪುರ್ ಕ್ಷೇತ್ರದಲ್ಲಿ ಹಲವು ಪಕ್ಷಗಳಿಂದ ಸ್ಪರ್ಧಿಸಿ ಒಂಭತ್ತು ಬಾರಿ ಎಂಎಲ್​​ಎ ಆಗಿ ಆಯ್ಕೆಯಾಗಿರುವ ಅಜಂ ಖಾನ್​, 2010 ರಲ್ಲಿ ಮತ್ತೆ ಸಮಾಜವಾದಿ ಪಾರ್ಟಿ ಸೇರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಂಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿದ್ದ ಅಜಂ, ಈ ಬಾರಿ ಗೆಲುವಿನ ನಗೆ ಬೀರಲು ಹವಣಿಸುತ್ತಿದ್ದಾರೆ. ಇತ್ತ ಜಯಪ್ರದಾ ಕೂಡ ಅಜಂ ಖಾನ್​ಗೆ ತೀವ್ರ ಸ್ಪರ್ಧೆಯೊಡ್ಡಿ ಗೆಲುವಿನ ಗಾದಿ ಏರಲು ಎದುರು ನೋಡುತ್ತಿದ್ದಾರೆ. ಈ ಉಭಯ ಸ್ಪರ್ಧಿಗಳಲ್ಲಿ ಯಾರು ಸಂಸತ್​ಗೆ ಹೋಗಲಿದ್ದಾರೆ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

ABOUT THE AUTHOR

...view details