ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಪಟ್ಟಂತೆ ಇಬ್ಬರು ಸಚಿವರು ಗೊಂದಲದ ಹೇಳಿಕೆ ನೀಡುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರಶ್ನೆ ಮಾಡಿದ್ದಾರೆ.
ಸಾಲ ನೀಡುವವರು ಯಾರು..? ಸಾಲಗಾರರು ಯಾರು..? ಕೇಂದ್ರಕ್ಕೆ ಚಿದಂಬರಂ ಪ್ರಶ್ನೆ - ಪಿ.ಚಿದಂಬರಂ ಲೇಟೆಸ್ಟ್ ನ್ಯೂಸ್
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸರ್ಕಾರಕ್ಕೆ ಬಾಕಿ ನೀಡಬೇಕು, ಆದರೆ ಸರ್ಕಾರ ಮತ್ತೆ ಈ ಉದ್ಯಮಗಳಿಗೆ ಸಾಲ ನೀಡಲು ಹೊರಟಿರುವ ಬಗ್ಗೆ ಚಿದಂಪರಂ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಪಿ.ಚಿದಂಬರಂ
ಈ ಬಗ್ಗೆ ಟ್ವೀಟ್ ಮಾಡಿರುವ ಚಿದಂಬರಂ, ಸರ್ಕಾರ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಒಡೆತನದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಒಟ್ಟು 5 ಲಕ್ಷ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳುತ್ತಾರೆ.
ಆದರೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (45 ಲಕ್ಷ ಸಂಖ್ಯೆಯ) ಯಾವುದೇ ಮೇಲಾಧಾರ ಭದ್ರತೆ ಇಲ್ಲದೆ 3 ಲಕ್ಷ ಕೋಟಿ ರೂಪಾಯಿಯಷ್ಟು ಸಾಲ ನೀಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಹಾಗಾದರೆ ಸಾಲ ಕೊಡುವವರು ಯಾರು? ಮತ್ತು ಸಾಲಗಾರರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.