ಕರ್ನಾಟಕ

karnataka

ETV Bharat / bharat

ಮೋಸ್ಟ್‌ ವಾಂಟೆಡ್‌ ಉಗ್ರ ರಿಯಾಜ್​ ನೈಕೂ ಯಾರು, ಈತನ ಹಿನ್ನೆಲೆ ಏನು? - ಭಯೋತ್ಪಾದಕರು

ಹಿಜ್ಬುಲ್​ ಮುಜಾಹಿದ್ದೀನ್​ನ ಕಮಾಂಡರ್​​​​ ರಿಯಾಜ್ ನೈಕೂನನ್ನು ಇಂದು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದೆ. ಯಾರಿದು ನೈಕೂ ಇಲ್ಲಿದೆ ಪೂರ್ಣ ಮಾಹಿತಿ.

riyaz naikoo
ರಿಯಾಜ್​ ನೈಕೂ

By

Published : May 6, 2020, 4:52 PM IST

ಶ್ರೀನಗರ (ಜಮ್ಮು ಕಾಶ್ಮೀರ):ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಮತ್ತು ಹಿಜ್ಬುಲ್ ಮುಖ್ಯಸ್ಥ ರಿಯಾಜ್ ನೈಕೂ ಪುಲ್ವಾಮಾ ಜಿಲ್ಲೆಯ ತಾನು ವಾಸಿಸುತ್ತಿದ್ದ ಬಿಗ್ಫೋರಾ ಗ್ರಾಮದಲ್ಲಿ ಹತ್ಯೆಯಾಗಿದ್ದಾನೆ. ಸೇನಾಧಿಕಾರಿಗಳು ಇನ್ನೂ ಹತ್ಯೆಯನ್ನು ದೃಢಿಕರೀಸಿಲ್ಲವಾದರೂ ಕೂಡಾ ಮೇ 5ರ ತಡರಾತ್ರಿ ನೈಕೂ ತನ್ನ ಗ್ರಾಮಕ್ಕೆ ಬಂದಿದ್ದ ವೇಳೆ ಎನ್​ಕೌಂಟರ್​ ವೇಳೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆ, ರಾಷ್ಟ್ರೀಯ ರೈಫಲ್ಸ್, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಎಸ್‌ಒಜಿ ಜಂಟಿ ಕಾರ್ಯಾಚರಣೆ ನಡೆಸಿ ರಿಯಾಜ್ ನೈಕೂನನ್ನ ಎನ್​ಕೌಂಟರ್​ ಮಾಡಿ ಕೊಂದಿದೆ.

ಯಾರಿದು ರಿಯಾಜ್ ನೈಕೂ? :ರಿಯಾಜ್​ ನೈಕೂ ಹಿಜ್ಬುಲ್​ ಮುಜಾಹಿದ್ದೀನ್​ನ ಹಿರಿಯ ಸದಸ್ಯ, 1985ರಲ್ಲಿ ಬಿಗ್ಫೋರಾ ಗ್ರಾಮದ ಅಸಾದುಲ್ಲಾ ಹಾಗೂ ಬೇಗಂ ಝೇಜಾ ಎಂಬ ದಂಪತಿಗೆ ಈತ ಜನಿಸಿದ್ದ. ಅಸಾದುಲ್ಲಾ ಒಂದು ಸಣ್ಣ ಟೈಲರ್ ಅಂಗಡಿಯನ್ನು ನಡೆಸುತ್ತಿದ್ದನು. ಇವನ ಜೊತೆಗೆ ಓರ್ವ ಸಹೋದರಿ ಹಾಗೂ ಮೂವರು ಸಹೋದರೂ ಇದ್ದರು.

ಹಿಜ್ಬುಲ್​ ಮುಜಾಹಿದ್ದೀನ್​ನ ಎ++ ಕೆಟಗರಿಗೆ ಸೇರಿದ್ದ ಈತನನ್ನು ಹಿಡಿದುಕೊಟ್ಟವರಿಗೆ 12 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. ಹಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ ಭದ್ರತಾ ಸಿಬ್ಬಂದಿಯ ಹತ್ಯೆಯಲ್ಲೂ ಈತ ಪಾಲ್ಗೊಂಡಿದ್ದನು. 2016ರ ಜುಲೈನಲ್ಲಿ ಅನಂತ್‌ನಾಗ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕ ಬುರ್ಹಾನ್ ವಾನಿ ಜೊತೆಯಲ್ಲಿಯೂ ನೈಕೂ ಗುರ್ತಿಸಿಕೊಂಡಿದ್ದನು. 2016ರಲ್ಲಿ ಎನ್​ಕೌಂಟರ್​ನಲ್ಲಿ ಮೃತಪಟ್ಟ ಭಯೋತ್ಪಾದಕ ಶಾರೀಕ್​ ಅಹ್ಮದ್​ ಭಟ್​ಗೆ ಗನ್​ ಸೆಲ್ಯೂಟ್​ ಕೂಡಾ ಮಾಡಿದ್ದನು. ಈ ಘಟನೆಯಿಂದಾಗಿಯೇ ಉಗ್ರರಿಗೆ ಗೌರವ ಸಲ್ಲಿಸೋದು ಜಮ್ಮು ಕಾಶ್ಮೀರದಲ್ಲಿ ಮತ್ತೆ ಶುರುವಾಯ್ತು.

2017ರಲ್ಲಿ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ವಾಪಸಾಗಿ ನಾವು ನಿಮ್ಮ ಶತ್ರುಗಳಲ್ಲ, ಮಿತ್ರರು ಎಂದು ನೈಕೂ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದನು. ಉಗ್ರರ ಜೊತೆಗೂಡುವ ಮೊದಲು ಸ್ಥಳೀಯ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಜೊತೆಗೆ ಅಮರನಾಥ ಯಾತ್ರಿಗಳಿಗೂ ಕೂಡಾ ಯಾವುದೇ ಕಾರಣಕ್ಕೂ ಭಯಪಡಬಾರದೆಂದು ತನ್ನಿಂದ ಯಾವುದೇ ತೊಂದರೆಯಿಲ್ಲವೆಂದು ಕೂಡಾ ಭರವಸೆ ನೀಡಿದ್ದನು.

ABOUT THE AUTHOR

...view details