ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) :ಅಮೆಜಾನ್ ಪ್ರೈಮ್ ಹೊಸ ಫೀಚರ್ನ ಪರಿಚಯಿಸಿದೆ. ಇನ್ಮುಂದೆ ಪ್ರೈಮ್ ಸದಸ್ಯರು ಯಾವುದಾದರೊಂದು ಸಿನಿಮಾ ಅಥವಾ ಕಾರ್ಯಕ್ರಮವನ್ನು ಒಂದೇ ಬಾರಿಗೆ ಬೇರೆ ಸ್ಥಳದಲ್ಲಿರುವ ಸ್ನೇಹಿತರೊಂದಿಗೆ ಏಕಕಾಲದಲ್ಲಿ ವೀಕ್ಷಿಸಬಹುದಾಗಿದೆ.
ಅಮೆಜಾನ್ ಪ್ರೈಮ್ ಹೊಸ ಫೀಚರ್.. ಗರಿಷ್ಠ ನೂರು ಗೆಳೆಯರೊಂದಿಗೆ ವಾಚ್ ಪಾರ್ಟಿ ಮಾಡ್ಬೋದು.. - ಅಮೆಜಾನ್ ವಾಚ್ ಪಾರ್ಟಿ
ಈ ವಾಚ್ ಪಾರ್ಟಿಗಳು ಆ್ಯಪಲ್ನ ಸಫಾರಿ ಹೊರತುಪಡಿಸಿ ಡೆಸ್ಕ್ಟಾಪ್ ಬ್ರೌಸರ್ಗಳಲ್ಲಿ ಲಭ್ಯವಿರುತ್ತದೆ. ಫೈರ್ ಟಿವಿ, ಸ್ಮಾರ್ಟ್ ಟಿವಿ, ಆನ್ಲೈನ್ ವಿಡಿಯೋ ಗೇಮ್ಗಳ ಗ್ಯಾಜೆಟ್ಗಳು, ಮೊಬೈಲ್ ಫೋನ್ಗಳು, ಟ್ಯಾಬ್ಲೆಟ್ಗಳು ಸದ್ಯಕ್ಕೆ ಈ ಫೀಚರ್ಗೆ ಸಹಕರಿಸೋದಿಲ್ಲ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ..
ಸುಮಾರು ನೂರು ಸದಸ್ಯರು ಏಕಕಾಲಕ್ಕೆ ಪ್ರೈಮ್ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಈ ಫೀಚರ್ ಈಗ ಕೇವಲ ಅಮೆರಿಕದಲ್ಲಿ ಮಾತ್ರ ಲಭ್ಯವಿದ್ದು, ವೆಬ್ ಬ್ರೌಸರ್ ಮೂಲಕ ವಾಚ್ ಪಾರ್ಟಿಗೆ ಸಂಪರ್ಕ ಪಡೆಯಬಹುದಾಗಿದೆ ಎಂದು ಅಮೆಜಾನ್ ಹೇಳಿದೆ.
ಈ ವಾಚ್ ಪಾರ್ಟಿಗಳು ಆ್ಯಪಲ್ನ ಸಫಾರಿ ಹೊರತುಪಡಿಸಿ ಡೆಸ್ಕ್ಟಾಪ್ ಬ್ರೌಸರ್ಗಳಲ್ಲಿ ಲಭ್ಯವಿರುತ್ತದೆ. ಫೈರ್ ಟಿವಿ, ಸ್ಮಾರ್ಟ್ ಟಿವಿ, ಆನ್ಲೈನ್ ವಿಡಿಯೋ ಗೇಮ್ಗಳ ಗ್ಯಾಜೆಟ್ಗಳು, ಮೊಬೈಲ್ ಫೋನ್ಗಳು, ಟ್ಯಾಬ್ಲೆಟ್ಗಳು ಸದ್ಯಕ್ಕೆ ಈ ಫೀಚರ್ಗೆ ಸಹಕರಿಸೋದಿಲ್ಲ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ.
ಈ ಹೊಸ ಫೀಚರ್ಗೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದೂ ಕೂಡಾ ಅಮೆಜಾನ್ ಪ್ರೈಮ್ ಹೇಳಿಕೊಂಡಿದೆ.