ಹೈದರಾಬಾದ್: ಕಷ್ಟ ಪಟ್ಟು ಕೃಷಿ ಮಾಡುವ ರೈತ ತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ಮತ್ತು ನಿರಂತರ ಆದಾಯವನ್ನು ಪಡೆಯಬೇಕು. ಇದಕ್ಕಾಗಿ ಮಾರುಕಟ್ಟೆ ನೀತಿ ನಿಯಮಗಳಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ. ವೈಭವೀಕರಿಸಿದ ಗುರಿಗಳನ್ನು ನಿಗದಿಪಡಿಸುವ ಬದಲು, ರೈತರಿಗೆ ಅನುಕೂಲಕರವಾಗುವ ರೀತಿ ಆ ಗುರಿಗಳನ್ನು ಸಾಧಿಸಲು ಕ್ರಿಯಾ ಯೋಜನೆಯನ್ನು ರೂಪಿಸಬೇಕು ಮತ್ತು ಅನುಸರಿಸಬೇಕು.
ದುರಾದೃಷ್ಟಕರ ಸಂಗತಿಯೆಂದರೆ, ನಮ್ಮ ಸಮಾಜದಲ್ಲಿ ಬೇರೂರಿನ ಪುರಾತನ ಕಾಲದ ಲಾಭದಾಯಕವಲ್ಲದ ಹಳೆಯ ಪದ್ದತಿಗಳನ್ನ ಸರಿ ಹೊಂದಿಸಲು ಸಮಗ್ರ ಆರ್ಥಿಕ ನೀತಿ ರೂಪಿಸಲು ಇಲ್ಲಿಯವರೆಗೆ ನಮಗೆ ಸಾಧ್ಯವಾಗಿಲ್ಲ. ರೈತ ಸ್ನೇಹಿ ಆಹಾರ ಉತ್ಪಾದನೆ, ಪೂರೈಕೆ, ಮಾರುಕಟ್ಟೆ, ವಿತರಣೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳನ್ನು ಬಲಪಡಿಸುವುದರಿಂದ ಬೆವರು ಸುರಿಸಿ ದುಡಿಯುವ ರೈತರ ವಿಶ್ವಾಸ ಹೆಚ್ಚಾಗುತ್ತದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆಯನ್ನು ಒದಗಿಸುವ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರವು ಸಮಗ್ರ ಕೃಷಿ ನೀತಿಯ ಹಾದಿಯಲ್ಲಿರುವ ಈ ಸಮಯದಲ್ಲಿ, ಕೇಂದ್ರ ಸರ್ಕಾರವು ದೇಶಾದ್ಯತ್ ಕೃಷಿ ಸಮುದಾಯಕ್ಕೆ ಅನುಕೂಲವಾಗುವಂತೆ ಕೃಷಿಯಲ್ಲಿ ಹೊಸ ಸುಧಾರಣೆಗಳನ್ನು ಅನಾವರಣಗೊಳಿಸಬೇಕು.
ಸ್ಟೀರಿಯೋಟೈಪ್ ಬೇಡ!
ಯಾವುದನ್ನು ಉತ್ಪಾದಿಸಬೇಕು, ಎಷ್ಟು ಉತ್ಪಾದಿಸಬೇಕು, ಜನರ ಅಗತ್ಯಗಳು ಮತ್ತು ರಫ್ತು ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಸಮಗ್ರ ಕೃಷಿ ಪದ್ಧತಿ ಇನ್ನೂ ವಿಕಸನಗೊಂಡಿಲ್ಲ. ಸಾಂಪ್ರದಾಯಿಕ ಮತ್ತು ಹಳೆ ಮಾದರಿಯ ಕೃಷಿ ಪದ್ದತಿಯು ಬೇಡಿಕೆ ಮತ್ತು ಪೂರೈಕೆ ಮತ್ತು ಬೆಲೆಗಳಲ್ಲಿನ ಅಸ್ಥಿರತೆಯ ನಡುವಿನ ಅಂತರವನ್ನು ಬಹಳಷ್ಟು ಹೆಚ್ಚಿಸಿದೆ. ಒಂದು ಪಕ್ಷ ಮಾರುಕಟ್ಟೆ ಸೂಚ್ಯಂಕಗಳ ಆಧಾರದ ಮೇಲೆ ವ್ಯಾಪಾರಿಗಳು ಬೆಲೆ ಏರಿಳಿತ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದರೆ ಅದನ್ನು ನಿಯಂತ್ರಿಸಲು ಕೆಲಸಕ್ಕೆ ನಿಯಂತ್ರಕರು ಮುಂದಾಗುತ್ತಿಲ್ಲ. ಬೇಡಿಕೆ ಮತ್ತು ಆದಾಯವು ಹೆಚ್ಚಿರುವ ಸೂಕ್ತ ಸಂದರ್ಭದಲ್ಲಿ ಬೆಲೆ ಕುಗ್ಗಿಸುವ ಕೆಲಸದಲ್ಲಿ ನಿರತವಾಗುವ ಮಾರುಕಟ್ಟೆ ಶಕ್ತಿಗಳನ್ನ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. .
ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್) ವ್ಯವಸ್ಥೆಯನ್ನು ತರಲಾಗಿದ್ದರೂ ಸಹ ಅದರಲ್ಲಿ ಹಲವು ನ್ಯೂನತೆಗಳಿವೆ. ಆ ನ್ಯೂನತೆಗಳನ್ನು ಸರಿಪಡಿಸುವ ಮೂಲಕ ರೈತರ ಹಿತದೃಷ್ಟಿಯಿಂದ ಅದನ್ನು ಬಲಪಡಿಸುವ ಅಗತ್ಯವಿದೆ. ರೈತರ ಬೆಲೆ ಕಟಾವಿನ ಸಂದರ್ಭ ಮಾರುಕಟ್ಟೆ ಬೆಲೆಗಳಲ್ಲಿನ ಏರಿಳಿತದ ಬಗ್ಗೆ ಆಡಳಿತದಲ್ಲಿರುವ ಸರ್ಕಾರಕ್ಕೆ ಚೆನ್ನಾಗಿ ತಿಳಿದಿರುತ್ತದೆ. ಕಷ್ಟಪಟ್ಟು ರೈತರು ಬೆಳೆದ ಬೆಳೆ ಸ್ಥಳೀಯವಾಗಿ ಬಳಕೆಯಾಗುವುದನ್ನು ಖಾತ್ರಿಪಡಿಸಿಕೊಳ್ಳುವಿಕೆ ಮತ್ತು ರಫ್ತು ಉತ್ತೇಜಿಸಲು ವಿಶೇಷ ಸಮೂಹಗಳನ್ನು ಗುರುತಿಸಿ ಉತ್ತೇಜಿಸುವ ಮೂಲಕ ಗ್ರಾಹಕರು ಮತ್ತು ರೈತರು ಹೆಚ್ಚಿನ ಲಾಭ ಪಡೆಯುತ್ತಾರೆ. ನಿಜವಾದ ಕೃಷಿ ವೆಚ್ಚದ ಆಧಾರದ ಮೇಲೆ ಬೆಳೆದ ಬೆಳೆಗೆ ಸೂಕ್ತ ಬೆಲೆಗಳನ್ನು ನಿಗದಿಪಡಿಸುವುದು ಮತ್ತು ಆಯಾ ರಾಜ್ಯಗಳಲ್ಲಿ ಸ್ಥಳೀಯವಾಗಿ ಅವುಗಳನ್ನು ಖರೀದಿಸುವ ಸರ್ಕಾರಗಳು ಉತ್ತಮ ಫಲಿತಾಂಶವನ್ನು ರೈತರಿಗೆ ನೀಡಲು ಸಾಧ್ಯವಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು, ಮಣ್ಣಿನ ಸ್ವರೂಪ, ನೀರಿನ ಲಭ್ಯತೆ ಮತ್ತು ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ರೈತರು ತಮ್ಮ ಭೂಮಿಯಲ್ಲಿ ಬೆಳೆಯುವ ಬೆಳೆ ವಿಧಾನವನ್ನು ಬದಲಾಯಿಸಬೇಕು.
ಈ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರ ಕೃಷಿ ಮತ್ತು ಕೃಷಿಕರ ಅಭಿವೃದ್ದಿಗಾಗಿ ನಿಯಂತ್ರಿತ ವಿಧಾನದಿಂದ ಮುಂದುವರಿಯಲು ಉದ್ದೇಶಿಸಿದೆ. ಈ ಹೊಸ ನಿಯಮದ ಬಗ್ಗೆ ವ್ಯಾಪಕ ಚರ್ಚೆಯ ನಂತರ ಸಮಗ್ರ ಕೃಷಿ ನೀತಿಯನ್ನು ಪರಿಚಯಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದು ಕೃಷಿಕರ ಏಳಿಗೆ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಬೇಸಾಯಗಾರರು ಬೆಳೆಯುವ ಬೆಳೆಗಳ ಆಯ್ಕೆಯ ವ್ಯವಸ್ಥಿತ ಯೋಜನೆ ಮತ್ತು ವಿವಿಧ ಋತುಮಾನಗಳಲ್ಲಿ ಇರುವ ಬೇಡಿಕೆಯ ಆಧಾರದ ಮೇಲೆ ತಕ್ಕ ಬೆಲೆ ಬೆಳೆದಾಗ ಬೆಲೆಗಳು ನಿಯಂತ್ರಣದಲ್ಲಿರುತ್ತವೆ ಎಂಬುದು ಈ ನೀತಿಯ ಮೂಲವಾಗಿದೆ.
ಕಾರ್ಯಸಾಧ್ಯವಾದ ಬೆಲೆ ನಿಗದಿ ಅತ್ಯಂತ ನಿರ್ಣಾಯಕ!
ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದನ್ನ ಮರೆಯದಿರಿ, ಅದಕ್ಕೆ ತಕ್ಕಂತೆ ದೇಶದ ರೈತರು ತಮ್ಮ ಶಕ್ತಿಯನ್ನು ತೋರಿಸುತ್ತಾರೆ. ಬೆಲೆ ಬೆಳೆಯುವ ಕೃಷಿಕರೇ ಇಲ್ಲದಿದ್ದರೆ ನಮ್ಮ ದೇಶದ ಭವಿಷ್ಯವೇನು ಎಂದು ಆಡಳಿತ ನಡೆಸುವ ಸರ್ಕಾರಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಮಹಾಮಾರಿ ಕರೋನಾ ಸೋಂಕು ಹಬ್ಬುತ್ತಿರುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವನ್ನು ಅಕ್ಷರಶಃ ಉಳಿಸಿಕೊಂಡಿರುವುದು ನಮ್ಮ ಕೃಷಿ ಕ್ಷೇತ್ರ. ಇದನ್ನ ಇಂದಿಗೂ ಮರೆಯಬಾರದು. ದೇಶದಳ್ಳಿ ಇರುವ ಪ್ರತಿ ಜಿಲ್ಲೆಗೆ ಕನಿಷ್ಠ ಐದು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು ಮತ್ತು ರಫ್ತು ಆಧಾರಿತ ಕ್ಲಸ್ಟರ್‌ಗಳನ್ನು ಅವುಗಳೊಂದಿಗೆ ಸಂಯೋಜಿಸಬೇಕು. ನಮ್ಮಲ್ಲಿ ಈಗ ಕೃಷಿ ಮ್ಯಾಪಿಂಗ್ ತಂತ್ರಜ್ಞಾನ ಇದೆ. ಆದರೆ, ಇಷ್ಟಾದರೂ ರೈತನ ಬೆಳೆಗೆ ಬೆಳೆ ವಿಮೆಯ ಭರವಸೆ ನೀಡಲು ನಮ್ಮನ್ನಾಳುವ ಸರ್ಕಾರಗಳಿಗೆ ಸಾಧ್ಯವಾಗಿಲ್ಲ.
ತೆಲಂಗಾಣದಲ್ಲಿ ಕೃಷಿಕರು ಸರ್ಕಾರ ರೂಪಿಸಲು ಉದ್ದೇಶಿಸುತ್ತಿರುವ ನಿಯಂತ್ರಣ ಬೆಳೆಗಳ ನೀತಿಗೆ ಅನುಕೂಲಕರವಾಗಿದ್ದಾರೆ ಮತ್ತು ಅವರು ಸರ್ಕಾರ ಈ ಕುರಿತು ನೀಡುವ ಸೂಕ್ತ ಸಲಹೆಯನ್ನು ಅನುಸರಿಸಲು ಸಿದ್ಧರಿದ್ದಾರೆ. ಮಾರುಕಟ್ಟೆ ಏರಿಳಿತದಿಂದ ಬೆಳೆದ ಉತ್ಪನ್ನದ ಬೆಲೆಗಳು ಕುಸಿದರೆ ಯಾರು ನಮ್ಮ ನೆರವಿಗೆ ಬರುತ್ತಾರೆ. ತೆಲಂಗಾಣ ಸರ್ಕಾರವು ಅವರ ರಕ್ಷಣೆಗೆ ಬರುತ್ತದೆಯೇ ಎಂಬುದು ಅವರ ಚಿಂತೆ. ತೆಲಂಗಾಣ ರೈತರ ಆತಂಕ ಅರ್ಥವಾಗುವಂತದ್ದಾಗಿದೆ. ಸರ್ಕಾರದ ಸಕಾರಾತ್ಮಕ ಕ್ರಮ ಮತ್ತು ಶ್ರಮಿಕ ವರ್ಗಕ್ಕೆ ಧೈರ್ಯ ತುಂಬುವ ವಿಧಾನ ಮಾತ್ರ ರೈತರನ್ನು ರಕ್ಷಿಸುತ್ತದೆ. ರೈತರ ರಕ್ಷಣೆಗೆ ಬೆಳೆಗೆ ಸೂಕ್ತ ಬೆಂಬಲ ಬೆಲೆಗಳನ್ನು ಕೊಡುವುದು, ರೈತರು ಬೆಳೆದಿರುವ ಬೆಳೆ ಪೂರ್ಣ ಪ್ರಮಾಣದ ಖರೀದಿಯನ್ನು ಕೈಗೊಳ್ಳುವುದು ತೆಲಂಗಾಣ ಸರ್ಕಾರದ ಮುಂದಿರುವ ಏಕೈಕ ಮಾರ್ಗವಾಗಿದೆ. ಕೇಂದ್ರ ಸರ್ಕಾರವು ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ವ್ಯಾಪಕ ಶ್ರೇಣಿಯ ಪ್ರೋತ್ಸಾಹಕಗಳನ್ನು ನೀಡಲು ಯೋಜಿಸುತ್ತಿದೆ.
ಆದರೆ, ಆ ಯೋಜನೆಗಳಲ್ಲಿ ಅನುಷ್ಠಾನದ ಮೇಲ್ವಿಚಾರಣೆಯ ಕೊರತೆ ಎದ್ದು ಕಾಣುತ್ತಿದೆ. ಗುಣಮಟ್ಟದ ಉತ್ಪನ್ನಗಳ ಪೂರೈಕೆ, ಎಲ್ಲಾ ಬೆಳೆಗಾರರಿಗೆ ಬೆಳೆ ಸಾಲ, ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು. ಡೈರಿ ಮತ್ತು ಕೋಳಿ ಇನ್ನು ಮುಂತಾದ ಬಹಳಷ್ಟು ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಬೆಂಬಲ, ಸ್ಥಳೀಯವಾಗಿ ರೈತರು ಬೆಳೆದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವುದು, ಬೆಳೆ ವಿಮಾ ಸೌಲಭ್ಯಗಳನ್ನು ಒದಗಿಸುವುದು, ಅವರ ಉತ್ಪನ್ನಗಳಿಗೆ ವಾಣಿಜ್ಯ ಮೌಲ್ಯ ಇತ್ಯಾದಿ ರೈತರಿಗೆ ಉತ್ತಮ ಅವಕಾಶಗಳನ್ನು ತೋರಿಸುವುದು, ಇವೇ ಮುಂತಾದ ಕ್ರಮಗಳಿಂದ ದೇಶೀಯ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಹೊಸ ಪುಟವನ್ನು ತೆರೆಯಲು ಸಾಧ್ಯವಾಗುತ್ತದೆ. ಒಂದು ಪಕ್ಷ ಈ ಅಂಶಗಳನ್ನ ಒಳಗೊಂಡ ಹೊಸ ಕೃಷಿ ನೀತಿ ಹೊರಬಿದ್ದರೆ ಪ್ರತಿ ಹಳ್ಳಿ ಹಳ್ಳಿಯು ಸಮೃದ್ಧವಾಗುತ್ತದೆ. ಎಷ್ಟು ಯೋಜನೆಗಳು ಜಾರಿಗೊಂಡಿವೆ ಎಂಬುದು ಮುಖ್ಯವಲ್ಲ.
ಅಂತಿಮವಾಗಿ ಯೋಜನೆಗಳ ಅಸಮರ್ಥತೆಯಿಂದಾಗಿ ಕೃಷಿಕರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಸೋಲುತ್ತಿರುವುದು ಎಲ್ಲರಿಗು ಗೊತ್ತಿರುವ ಸಾಮಾನ್ಯ ಸಂಗತಿಯಾಗಿದೆ. ಇದನ್ನು ನಿರ್ಲಕ್ಷಿಸುವ ಯಾವುದೇ ಪ್ರಯತ್ನವು ಫಲಿತಾಂಶವನ್ನು ನೀಡುವುದಿಲ್ಲ ಎಂಬುದನ್ನ ಸರ್ಕಾರಗಳು ಗಮನಿಸಬೇಕು. ಒಳ್ಳೆಯ ವಿಚಾರಗಳನ್ನು ಸ್ವಾಗತಿಸುವುದು ಮತ್ತು ಅವುಗಳನ್ನ ಕಾರ್ಯಗತಗೊಳಿಸುವುದು ಅತ್ಯಂತ ಮುಖ್ಯ, ಆದರೆ, ಅದಕ್ಕಿಂತ ಹೆಚ್ಚು ಮುಖ್ಯವಾದುದು ಅವುಗಳಿಂದ ಎಷ್ಟು ಅನುಕೂಲವಾಗಲಿದೆ ಎಂಬುದೇ ಆಗಿದೆ. ಇಲ್ಲವಾದರೆ. ಯಾವುದೇ ನೀತಿ ಅನುಪಯೋಗವಾಗುತ್ತದೆ. ಇವೆಲ್ಲವೂ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಆಡಳಿತ ವರ್ಗದ ನಿಷ್ಠೆ ಮತ್ತು ಪ್ರಾಮಾಣಿಕತೆಯ ಮೇಲೆ ಅವಲಂಬಿತವಾಗಿರುತ್ತದೆ.
ಯೋಚನೆ ಬದಲಾಗಬೇಕು
ಪ್ರತಿ ಬಾರಿ ವರ್ಷಗಳ ಕಾಲ ಒಂದೇ ರೀತಿಯ ಬೆಳೆ ಬೆಳೆಯುವುದು ಮತ್ತು ಬೇಡಿಕೆ ಅಗತ್ಯಕ್ಕೆ ತಕ್ಕಂತೆ ಬೆಲೆ ಬೆಳೆಯುವುದರಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳದಿರುವುದು ಇವೆ ಮುಂತಾದ ನ್ಯೂನ್ಯತೆಗಳು ರೈತರ ಬೆಲೆ ಇಳುವರಿಯ ಮೇಲೆ ಪರಿಣಾಮ ಬೀರುತ್ತವೆ. ಏಕತಾನತೆಯ ಕೃಷಿಯು ಸಹ ಭೂಮಿಯ ಮಣ್ಣನ್ನು ಅತ್ಯಂತ ದುರ್ಬಲಗೊಳಿಸುತ್ತದೆ ಮತ್ತು ಇದರ ಪರಿಣಾಮವಾಗಿ ಕಡಿಮೆ ಇಳುವರಿ ಮತ್ತು ಅತಿ ಕೆಳಮಟ್ಟದ ಗುಣಮಟ್ಟದ ಉತ್ಪನ್ನಗಳು, ಇದರಿಂದ ನಷ್ಟ ಖಂಡಿತಾ ಆಗುತ್ತದೆ. ಅಗತ್ಯವಿರುವ ಬೆಲೆ ಬೆಳೆಯಲು ಪ್ರೇರೇಪಣೆ ಕೊಡಲೇಬೇಕು. ಕಾಟೇಜ್ ಉದ್ಯಮವಾಗಿ ಹಳ್ಳಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಉದ್ಯಮವನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸಿದರೆ, ರೈತರಿಗೆ ಉತ್ತಮ ಲಾಭ ಸಿಗುತ್ತದೆ. ಹೀಗಾಗಿ, ಬೆಳೆ ಬೆಳೆಯುವ ಪದ್ದತಿಯಲ್ಲಿ ಮತ್ತು ರೈತರು ಯೋಚಿಸುವ ರೀತಿಯಲ್ಲಿ ಬದಲಾವಣೆ ಆಗಲೇಬೇಕಾದ ಅಗತ್ಯ ಎದ್ದು ಕಾಣುತ್ತಿದೆ.
ಬೇಸಿಗೆ ಆರಂಭದಲ್ಲಿ ಭತ್ತ ಬೆಳೆಯುತ್ತಿದ್ದಾರೆ, ಆ ಜಾಗದಲ್ಲಿ ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ರೈತರಿಗೆ ಹಣ ಕೊಡುವ ಹೆಸರುಕಾಳು, ಜೋಳ, ಬಾರ್ಲಿ ಮುಂತಾದ ಬೆಳೆಗಳನ್ನ ಬೆಳೆಯಲು ಪ್ರೋತ್ಸಾಹ ನೀಡಬೇಕಾಗಿದೆ. ಇದರಿಂದಾಗಿ, ಪರ್ಯಾಯ ಬೆಲೆಯೂ ಮಣ್ಣನ್ನು ಶಕ್ತಿಯುತಗೊಳಿಸುತ್ತದೆ ಮತ್ತು ಹೆಚ್ಚಿನ ಆದಾಯವನ್ನು ಪಡೆಯಲು ರೈತರಿಗೆ ಅನುಕೂಲವಾಗುತ್ತದೆ. ಆದರೆ, ಎರಡು ಭತ್ತದ ಬೆಳೆಗಳಿಗೆ ಮಣ್ಣು ಸೂಕ್ತವಾಗಿರುವ ಗದ್ದೆಗಳಲ್ಲಿ ಪರ್ಯಾಯ ಬೆಳೆ ಬೆಳೆಯುವುದು ಕಷ್ಟ. ನಮ್ಮ ಮಣ್ಣಿನ ಸ್ವರೂಪ, ನೀರಿನ ಕಾರ್ಯಸಾಧ್ಯತೆ, ಹವಾಮಾನ ಪರಿಸ್ಥಿತಿಗಳು ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಿದ ನಂತರ ಸರಿಯಾದ ರೀತಿಯ ಬೆಳೆಗಳಿಗೆ ವಿಜ್ಞಾನಿಗಳು ಮತ್ತು ಸರ್ಕಾರದ ಸಲಹೆಯನ್ನು ಪಡೆದು ಮುಂದುವರೆಯುವುದು ಅತ್ಯಂತ ಉತ್ತಮ ಮಾರ್ಗವಾಗಿದೆ.ಲಾಭದಾಯಕ ಬೆಳೆಗಳಿಗಾಗಿ ದೇಶದಲ್ಲಿ ಹೊಸ ಬಲಿಷ್ಠ ಕೃಷಿ ನೀತಿಯನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ.