ಕರ್ನಾಟಕ

karnataka

ETV Bharat / bharat

ವಿಶೇಷ ಲೇಖನ: ರೈತರ ಬದುಕಿನಲ್ಲಿ ಹಬ್ಬದ ದಿನ ಬರುವುದೆಂದು?

ಸುರಕ್ಷಿತ ಕೃಷಿ ತಂತ್ರಗಳೆಂದರೆ ಹವಾಮಾನ ಅಡಚಣೆಗಳು ಮತ್ತು ಕೀಟಗಳ ದಾಳಿಯಂತಹ ನೈಸರ್ಗಿಕ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಬಲವಾದ ಗುರಾಣಿಗಳನ್ನು ರಚಿಸುವುದನ್ನು ಒಳಗೊಂಡಿರಬೇಕು. ಜೊತೆಗೆ ಯಶಸ್ವಿ ಕಾರ್ಯಾಚರಣೆಯ ಕಾರ್ಯತಂತ್ರಗಳ ಲಾಭಗಳು ಸರಾಸರಿ ರೈತನಿಗೆ ಕೈಗೆಟುಕುವಿಕೆ ಮತ್ತು ಲಾಭದಾಯಕತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ನಂತರ ಅವನು ತನ್ನ ಕೊಯ್ಲಿನ ದಿನವನ್ನು ಸುಗ್ಗಿ ಹಬ್ಬದ ರೀತಿಯಲ್ಲಿ ಆಚರಿಸಬಹುದು.

farmer
ಕೃಷಿ

By

Published : Aug 13, 2020, 5:41 PM IST

ರೈತರ ಜೀವನ ಭದ್ರತೆ ಮತ್ತು ಮಾನವ ಜನಾಂಗದ ಆಹಾರ ಭದ್ರತೆಯ ನಡುವೆ ಅವಿನಾಭಾವವಾದ ಸಂಬಂಧವಿದೆ. ಈ ಮೂಲಭೂತ ಸತ್ಯವನ್ನು ನಿರ್ಲಕ್ಷಿಸಿ ದೇಶದ ರೈತರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುವುದು ವ್ಯರ್ಥ ಪ್ರಯತ್ನವಾಗಿದೆ. ಡಾಕ್ಟರ್ ಸ್ವಾಮಿನಾಥನ್ ಅವರ ಅಮೂಲ್ಯವಾದ ಸಲಹಾ ವರದಿಯೊಂದಿಗೆ ಈ ಮೂಲಭೂತ ಸತ್ಯವನ್ನು ನಿರ್ಲಕ್ಷಿಸಲಾಗಿರುವುದು ದುರದೃಷ್ಟಕರ.

ರೈತ ಹಿತಾಸಕ್ತಿಗಳು, ಕೃಷಿ ಪ್ರಗತಿ ಮತ್ತು ಗ್ರಾಮೀಣಾಭಿವೃದ್ಧಿಯನ್ನು ವಿಭಿನ್ನವಾಗಿ ಪರಿಗಣಿಸುವವರೆಗೂ ನಿವ್ವಳ ಪ್ರಗತಿಯು ಮರೀಚಿಕೆಯಾಗಿ ಉಳಿಯುತ್ತದೆ ಎಂದು ಗ್ರಹಿಸಿರುವ ಕೇಂದ್ರದ ಮೋದಿ ಸರ್ಕಾರವು ಇತ್ತೀಚೆಗೆ ಒಂದು ಲಕ್ಷ ಕೋಟಿ ರೂ. ಮೌಲ್ಯದ ಕೃಷಿ ಮೂಲಸೌಕರ್ಯ ನಿಧಿಯನ್ನು ಪ್ರಾರಂಭಿಸಿದೆ. ಭಾರತವನ್ನು ಕೃಷಿರಂಗದಲ್ಲಿ ಸ್ವಾವಲಂಬಿಯಾಗಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯು ಸರಣಿ ಪೂರೈಕೆ ಸೇವೆಗಳು, ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು, ಗೋದಾಮುಗಳು, ಗೊಬ್ಬರ ಗೋದಾಮುಗಳು, ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು, ಮೌಲ್ಯವರ್ಧನೆ ಕೇಂದ್ರಗಳು ಮತ್ತು ಕೊಯ್ಲಿನಿಂದ ಮಾರ್ಕೆಟಿಂಗ್ ತನಕದ ಮೌಲ್ಯವರ್ಧನೆ ಮುಂತಾದ ವ್ಯಾಪಕ ಮೂಲಸೌಕರ್ಯಗಳನ್ನು ಒದಗಿಸುತ್ತದೆ. ರೈತರು, ಅವರ ಉತ್ಪಾದಕ ಸಂಘಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಮಹತ್ವಾಕಾಂಕ್ಷಿ ಕೃಷಿ ಉದ್ಯಮಿಗಳು, ಸ್ಟಾರ್ಟ್ ಅಪ್​ಗಳು, ಮಾರ್ಕೆಟಿಂಗ್ ಮತ್ತು ಸಹಕಾರ ಸಂಘಗಳಿಗೆ ಬಡ್ಡಿರಹಿತ ಸಾಲವನ್ನು ವಿತರಿಸುವ ಮೂಲಕ ಈ ಮಹತ್ವದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಕೇಂದ್ರ ಸರ್ಕಾರದ ಪ್ರಸಕ್ತ ಯೋಜನೆಯ ಸಂಕಲ್ಪವಾಗಿದೆ. ರೈತರಿಗೆ ಸಮಂಜಸವಾದ ಬೆಲೆ ಸಿಗುವ ತನಕ ಬೆಳೆಯನ್ನು ಸಂಗ್ರಹಿಸುವ ಸೌಲಭ್ಯವು ಮೌಲ್ಯವರ್ಧನೆಯನ್ನು ತರಲಿದ್ದು, ಕೃಷಿ ಆಧಾರಿತ ಕೈಗಾರಿಕೆಗಳಿಂದ ಉದ್ಯೋಗ ಲಭ್ಯತೆ ಮತ್ತು ಆಹಾರ ಪದಾರ್ಥ ವ್ಯರ್ಥವಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸರ್ಕಾರ ಆಶಿಸಿದೆ.

ಆಯಾ ರಾಜ್ಯಗಳಲ್ಲಿನ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಒಟ್ಟು ಮೌಲ್ಯದ ಆಧಾರದ ಮೇಲೆ ಮೂಲಸೌಕರ್ಯ ನಿಧಿಯಲ್ಲಿನ ಸಾಲ ವಿತರಣೆಯ ಪಾಲನ್ನು ಅಂತಿಮಗೊಳಿಸಿದ ಕೇಂದ್ರ ಸರ್ಕಾರ, ಕೃಷಿ ಕ್ಷೇತ್ರದ ಪುನರುಜ್ಜೀವನದತ್ತ ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಈ ಬೃಹತ್ ಯೋಜನೆಯ ಯಶಸ್ಸನ್ನು ಅಳೆಯಲು ಇದು ರೈತರ ಕಲ್ಯಾಣಕ್ಕೆ ಎಷ್ಟರ ಮಟ್ಟಿಗೆ ಕೊಡುಗೆ ನೀಡುತ್ತದೆ ಎಂಬುದಕ್ಕೆ ಸ್ವತಃ ಒಂದು ಅಳತೆಗೋಲಾಗಲಿದೆ!

ರೈತರ ಉತ್ಪಾದನೆಯಲ್ಲಿ ಸಾಕಷ್ಟು ಕೈಗೆಟುಕದಂತೆ ಮಾಡುವಲ್ಲಿ ಖಳನಾಯಕ ಪಾತ್ರವನ್ನು ವಹಿಸುವ ಹಲವು ಅಂಶಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳ ಕೊರತೆ ಕೂಡಾ ಒಂದಾಗಿದೆ. ಒಮ್ಮೊಮ್ಮೆ ಟೊಮೆಟೋ ಬೆಲೆ ಬೆಂಬಲ ಬೆಲೆಗಿಂತ ಕೆಳಗಿಳಿದು ಅವರು ತಮ್ಮ ಫಸಲನ್ನು ರಸ್ತೆಗೆಸೆದು ಪ್ರತಿಭಟಿಸುವುದು ಒಂದೆಡೆಯಾದರೆ, ಇನ್ನೊಂದೆಡೆಯಲ್ಲಿ ಒಮ್ಮೆಗೆ ಆಕಾಶಕ್ಕೇರಿ ನಿಲ್ಲುವ ಬೆಲೆ ಬಳಕೆದಾರರನ್ನು ಕಂಗೆಡಿಸುವುದು ರೈತರಿಗೆ ಸರಿಯಾದ ಮೂಲಭೂತ ಸೌಲಭ್ಯಗಳ ಲಭ್ಯತೆಯಿಲ್ಲದಿರುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಇಂತಹ ಸಂದರ್ಭದಲ್ಲಿ ಉಂಟಾಗುವ ರಾಷ್ಟ್ರೀಯ ನಷ್ಟದ ಮೊತ್ತ ಪ್ರತಿ ವರ್ಷವೊಂದಕ್ಕೆ 44 ಸಾವಿರ ಕೋಟಿಗಳು! ಮಾರುಕಟ್ಟೆಯ ಅಂಗಳಕ್ಕೆ ಬೆಳೆಯನ್ನು ತಲುಪಿಸಿದರೂ, ಅಲ್ಲಿ ಯಾವುದೇ ಟಾರ್ಪಾಲಿನ್ ಇಲ್ಲದೆ, ಮತ್ತು ಧಾನ್ಯದ ಕಳಪೆ ಬೆಲೆಯ ಸಮಸ್ಯೆಯನ್ನು ಎದುರಿಸುವ ಅಮಾಯಕ ರೈತನ ಪಾಲಿಗೆ ಇತ್ತೀಚಿನ ಮೂಲಸೌಕರ್ಯ ನಿಧಿಯು ಹೇಗೆ ಸೂಕ್ತವಾಗಿ ಸಹಾಯಕ್ಕೆ ಬರುತ್ತದೆ ಎಂಬುದನ್ನು ನೋಡಬೇಕಾಗಿದೆ. ಪೂರ್ಣ ಅಸಂಬದ್ಧವಾಗಿರುವ ಕನಿಷ್ಠ ಬೆಂಬಲ ಬೆಲೆಯು ರೈತನ ಜೀವನೋಪಾಯವನ್ನು ನಾಶ ಮಾಡುತ್ತಿದೆ ಎಂಬ ನೆಲ ಮಟ್ಟದ ಸತ್ಯವನ್ನು ರಾಷ್ಟ್ರೀಯ ಮಾದರಿ ಅಧ್ಯಯನಗಳು ದೃಢಪಡಿಸಿವೆ.

ಸರಾಸರಿ ರೈತನ ಕುಟುಂಬದ ಆದಾಯವು ತಿಂಗಳಿಗೆ ರೂ .6,000 ಕ್ಕಿಂತ ಕಡಿಮೆಯಿದೆ ಎಂದು ಬಹಿರಂಗವಾಗಿದ್ದರೂ, ಡಾ. ಸ್ವಾಮಿನಾಥನ್ ಅವರ ವರದಿಯು ರೈತನ ಸರಾಸರಿ ಬೆಂಬಲ ಬೆಲೆ ಅರ್ಹತೆಯನ್ನು ಆ ಸಮಯದ ವೆಚ್ಚಗಳು, ಗುತ್ತಿಗೆ ವೆಚ್ಚ ಭೂಮಿ ಮತ್ತು ನಂತರ ಅಂತಹ ವೆಚ್ಚಗಳ 50% ದಷ್ಟು ಮೊತ್ತವನ್ನು ಒಟ್ಟು ಖರ್ಚಿಗೆ ಸೇರಿಸಿ ಗಣನೆಗೆ ತೆಗೆದುಕೊಂಡ ನಂತರ ಬೆಲೆ ನಿರ್ಧಾರಕ್ಕೆ ಎಂದು ಸೂಚಿಸುತ್ತದೆ. ಆದರೂ ಕೂಡ, ಈ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ. ಇದು ಸಾಮಾನ್ಯ ರೈತನ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಮೂಲಸೌಕರ್ಯ ನಿಧಿಯ ಅನುಷ್ಠಾನವನ್ನು ಲೆಕ್ಕಿಸದೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ಕೃಷಿ ಕ್ಷೇತ್ರದ ಕಡೆಗಿನ ನಾಯಕತ್ವದ ಆಲೋಚನಾ ವಿಧಾನಗಳಲ್ಲಿ ಮೂಲಭೂತ ಬದಲಾವಣೆ ಬರಬೇಕು.

ಸುರಕ್ಷಿತ ಕೃಷಿ ತಂತ್ರಗಳೆಂದರೆ ಹವಾಮಾನ ಅಡಚಣೆಗಳು ಮತ್ತು ಕೀಟಗಳ ದಾಳಿಯಂತಹ ನೈಸರ್ಗಿಕ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಬಲವಾದ ಗುರಾಣಿಗಳನ್ನು ರಚಿಸುವುದನ್ನು ಒಳಗೊಂಡಿರಬೇಕು. ಜೊತೆಗೆ ಯಶಸ್ವಿ ಕಾರ್ಯಾಚರಣೆಯ ಕಾರ್ಯತಂತ್ರಗಳ ಲಾಭಗಳು ಸರಾಸರಿ ರೈತನಿಗೆ ಕೈಗೆಟುಕುವಿಕೆ ಮತ್ತು ಲಾಭದಾಯಕತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ನಂತರ ಅವನು ತನ್ನ ಕೊಯ್ಲಿನ ದಿನವನ್ನು ಸುಗ್ಗಿ ಹಬ್ಬದ ರೀತಿಯಲ್ಲಿ ಆಚರಿಸಬಹುದು!

ABOUT THE AUTHOR

...view details