ಹೈದರಾಬಾದ್:ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಜನರು ಅನುಭವಿಸುತ್ತಿರುವ ಭಾವನೆಗಳು ಹಾಗೂ ಕ್ಷಣಗಳನ್ನು ಪ್ರತಿಬಿಂಬಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ವಾಟ್ಸಾಪ್ ‘ಟುಗೆದರ್ ಅಟ್ ಹೋಮ್’ ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ರಚಿಸಿದೆ.
'ಟುಗೆದರ್ ಅಟ್ ಹೋಮ್' ಸ್ಟಿಕ್ಕರ್ ರಚಿಸಿದ ವಾಟ್ಸಾಪ್ - 'ಟುಗೆದರ್ ಅಟ್ ಹೋಮ್' ಸ್ಟಿಕ್ಕರ್ ಪ್ಯಾಕ್
ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ವಾಟ್ಸಾಪ್ ‘ಟುಗೆದರ್ ಅಟ್ ಹೋಮ್’ ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ರಚಿಸಿದೆ.
sticker
ಜನರು ಸಂಪರ್ಕದಲ್ಲಿರಲು ಸಹಾಯ ಮಾಡಲು ನಾವು ಡಬ್ಲ್ಯೂಎಚ್ಒ ಜೊತೆಗೂಡಿ ಹೊಸ 'ಟುಗೆದರ್ ಅಟ್ ಹೋಮ್' ಸ್ಟಿಕ್ಕರ್ ಪ್ಯಾಕ್ ರಚಿಸವ ಕೆಲಸ ಮಾಡಿದ್ದೇವೆ ಎಂದು ವಾಟ್ಸಾಪ್ ಟ್ವೀಟ್ ಮಾಡಿದೆ.
ಅರೇಬಿಕ್, ಫ್ರೆಂಚ್, ಜರ್ಮನ್, ಹಿಂದಿ, ಇಂಡೋನೇಷಿಯನ್, ಇಟಾಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪ್ಯಾನಿಷ್ ಮತ್ತು ಟರ್ಕಿಶ್ ಭಾಷೆಗಳಲ್ಲಿ ‘ಟುಗೆದರ್ ಅಟ್ ಹೋಮ್’ ಸ್ಟಿಕ್ಕರ್ ಪ್ಯಾಕ್ ವಾಟ್ಸಾಪ್ನಲ್ಲಿ ಲಭ್ಯವಿದೆ.