ಕರ್ನಾಟಕ

karnataka

ETV Bharat / bharat

ಯುವಕನನ್ನು ಕೊನೆಯಾಗಿಸಿದ ವಾಟ್ಸ್​ಆ್ಯಪ್​​ ​ ಡಿಪಿ​ - ಗೋದಾವರಿ ಜಿಲ್ಲೆಯ ಗೋಪಾಲಪುರಂ

ವಾಟ್ಸ್ಆ್ಯಪ್​​ ಸ್ಟೇಟಸ್​ನಿಂದಾಗಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಗೋಪಾಲಪುರಂ ನಲ್ಲಿ ನಡೆದಿದೆ.

Whats aap dp killed a young man in Andrapradesh
ಯುವಕನನ್ನು ಕೊನೆಯಾಗಿಸಿದ ವಾಟ್ಸ್​ ಆಪ್​ ಡಿಪಿ​

By

Published : Feb 1, 2020, 9:17 AM IST

ಪಶ್ಚಿಮ ಗೋದಾವರಿ(ಆಂದ್ರಪ್ರದೇಶ): ವಾಟ್ಸ್ಆ್ಯಪ್​​ ​ ಸ್ಟೇಟಸ್​ನಿಂದಾಗಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಗೋಪಾಲಪುರಂ ನಲ್ಲಿ ನಡೆದಿದೆ.

ಯುವಕನನ್ನು ಕೊನೆಯಾಗಿಸಿದ ವಾಟ್ಸ್​ ಆಪ್​ ಡಿಪಿ​

ಗೋಪಾಲಪುರಂ ಮಂಡಲದ ಗೋಪಾವರಂನ ಗೌರು ಶ್ರೀನು ಎಂಬ ಯುವಕ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಶ್ರೀನು ಸಾವಿಗೂ ಮುನ್ನ ತನ್ನ ಸಾವಿನ ಕಾರಣವನ್ನು ಹಾಗೂ ವಿಷ ಸೇವಿಸುವುದನ್ನು ವೀಡಿಯೋ ಮಾಡಿ ವಾಟ್ಸ್ಆ್ಯಪ್​ ​ ಸ್ಟೇಟಸ್​ ಹಾಕಿಕೊಂಡಿದ್ದ.

ವೀಡಿಯೋದಲ್ಲಿ ಏನಿದೆ:ಶ್ರೀನು ನಲ್ಲಜಾರ್ಲಾದ ದುರ್ಗಾ ಪ್ರಸಾದ್ ಎಂಬುವವನಿಂದ ಒಂದಿಷ್ಟು ಸಾಲ ಪಡೆದಿದ್ದ. ಸಾಲ ಹಿಂತಿರುಗಿಸುವಲ್ಲಿ ಕೊಂಚ ತಡವಾದ ಹಿನ್ನೆಲೆ ದುರ್ಗಾಪ್ರಸಾದ್​ ಶ್ರೀನು ಫೋಟೋವನ್ನು ವಾಟ್ಸ್​ಆ್ಯಪ್​​ ಡಿಪಿಯನ್ನಾಗಿ ಹಾಕಿ ಮಾನಸಿಕ ಕಿರುಕುಳ ನೀಡಿದ್ದಾನೆ. ಸಾಲ ತೀರಿಸಲು ಕೊಂಚ ಕಾಲಾವಕಾಶ ಕೇಳಿಕೊಂಡರೂ ಕರುಣೆ ದುರ್ಗಾಪ್ರಸಾದ್​ ಕರುಣೆ ತೋರಿಲ್ಲ. ಸಾಲದ್ದಕ್ಕೆ ತಾನು ಕೊಡೊ ಮಾನಸಿಕ ಕಿರುಕುಳದಿಂದಲೇ ನೀನು ಸಾಯಲಿದ್ದೀಯಾ ಅಂತ ಕೂಡ ಹೇಳಿದ್ದ ಎಂದು ಶ್ರೀನು ನೋವಿನಿಂದಲೇ ಹೇಳಿದ್ದಾರೆ. ಜೊತೆಗೆ ತನ್ನ ಸಾವಿಗೆ ದುರ್ಗಾ ಪ್ರಸಾದ್ ಮತ್ತು ಅವನ ಕುಟುಂಬವೇ ಕಾರಣ ಎಂದು ಶ್ರೀನು ವಿಡಿಯೋದಲ್ಲಿ ಆರೋಪಿಸಿದ್ದಾರೆ.

ABOUT THE AUTHOR

...view details