ಕೋವಿಡ್-19 ಪ್ರಪಂಚದಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿದೆ. ನಮ್ಮ ದೇಶ ಈಗ ಅನ್‌ಲಾಕ್ ಆಗಿದ್ದರೂ, ಜನರು ವೈರಸ್ ಕುರಿತು ಭಯವನ್ನು ಹೊಂದಿದ್ದಾರೆ. ಇನ್ನು ಕೆಲವರು ಸೋಂಕಿಗೆ ಒಳಗಾದ್ರೆ ಅದನ್ನು ಹೇಗೆ ಮತ್ತು ಎಲ್ಲಿ ವ್ಯಕ್ತಪಡಿಸಬೇಕು ಎಂಬುದನ್ನು ತಿಳಿದಿಲ್ಲ. ಈ ಸಂಬಂಧ ಹೈದರಾಬಾದ್‌ನ ವಿಐಎನ್ಎನ್ ಆಸ್ಪತ್ರೆಯ ವೈದ್ಯರಾದ ಡಾ. ರಾಜೇಶ್ ವುಕ್ಕಲಾ ಅವರನ್ನು ಕೇಳಿದಾಗ ಅವರು, ಈ ವೈರಸ್ ನಮ್ಮ ದೇಹದಲ್ಲಿ ಎಲ್ಲಿಯಾದರೂ ಹರಡಬಹುದು, ಹಾಗಾಗಿಯೇ ನಾವು ದೇಹದಾದ್ಯಂತ ವಿವಿಧ ರೋಗಲಕ್ಷಣಗಳನ್ನು ಹೊಂದುತ್ತಿದ್ದೇವೆ ಎಂದರು.
ಕೊರೊನಾ ಸೋಂಕಿತರ ಲಕ್ಷಣಗಳು:
ಡಾ. ರಾಜೇಶ್ ಸೂಚಿಸಿದಂತೆ ಜ್ವರ ಮತ್ತು ಕೆಮ್ಮಿನ ಹೊರತಾಗಿ ಕೆಲವು ಲಕ್ಷಣಗಳನ್ನು ನಾವು ಇಲ್ಲಿ ನೋಡಬಹುದಾಗಿದೆ.
- ಯಾವುದೇ ವಾಸನೆ ತಿಳಿಯದಿರುವುದು
- ಆಹಾರದ ರುಚಿ ಗೊತ್ತಾಗದೆ ಇರುವುದು
- ತುಂಬಾ ಆಯಾಸ
- ಸ್ನಾಯುಗಳ ನೋವು
- ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು ಅಸಮರ್ಥತೆ
- ಉಸಿರಾಟದ ತೊಂದರೆ
- ತಲೆನೋವು
- ತಲೆತಿರುಗುವಿಕೆ
- ಯಾವುದೇ ಜ್ವರವಿಲ್ಲದೆ ಅತಿಸಾರವಾಗುವುದು
- ಹೊಟ್ಟೆ ನೋವು
- ಕಾಲು ನೋವು
ಮೆದುಳಿನ ದಾಳಿ, ಹೃದಯಾಘಾತ, ಮೆನಿಂಜೈಟಿಸ್, ಬೆನ್ನುಹುರಿಯ ನೋವು ಮುಂತಾದ ಕೆಲವು ಲಕ್ಷಣಗಳಿದ್ದು, ಇವು ಅಪರೂಪವಾಗಿವೆ.
ನೀವು ಈ ರೋಗಲಕ್ಷಣಗಳನ್ನು ಹೊಂದಿದ್ದರೆ ಏನು ಮಾಡಬೇಕು?
“ಕೊರೊನಾ ವೈರಸ್ ಬಹಳ ವೇಗವಾಗಿ ಹರಡುತ್ತಿದ್ದರೂ, ಇತರ ವೈರಸ್‌ಗಳಿಗಿಂತ ಭಿನ್ನವಾಗಿ ಶೇ. 80ರಷ್ಟು ಜನರು ಲಕ್ಷಣರಹಿತರಾಗಿದ್ದಾರೆ ಅಥವಾ ತುಂಬಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಶೇ. 20ರಷ್ಟು ಜನರು ವೈರಸ್ನ ಗಂಭೀರ ಪರಿಣಾಮವನ್ನು ಹೊಂದಿದ್ದಾರೆ, ಅದರಲ್ಲಿ ಕೇವಲ ಶೇ. 5ರಷ್ಟು ಜನರು ಮಾತ್ರ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ, ಅಂತವರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುತ್ತದೆ” ಎನ್ನುತ್ತಾರೆ ಡಾ. ರಾಜೇಶ್ ವುಕ್ಕಲಾ.