ನವದೆಹಲಿ :ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಾಗರಿಕ ಸೇವೆಗಳ ರಾಷ್ಟ್ರೀಯ ಕಾರ್ಯಕ್ರಮ 'ಮಿಷನ್ ಕರ್ಮಯೋಗಿ'ಯನ್ನು ಘೋಷಿಸಲಾಗಿದೆ. ಈ ನೂತನ ಯೋಜನೆಯು ಭಾರತೀಯ ನಾಗರಿಕ ಸೇವಕ (ಸಿವಿಲ್ ಸರ್ವೆಂಟ್)ರನ್ನು ಸೃಜನಶೀಲ, ರಚನಾತ್ಮಕ, ನವೀನ, ವೃತ್ತಿಪರ, ಪ್ರಗತಿಪರ ಮತ್ತು ಶಕ್ತಿಯುತವಾಗಿ ಸಾಮಾಜಿಕ ಸವಾಲುಗಳನ್ನು ಎದುರಿಸುವವರನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ.
ನಾಗರಿಕ ಸೇವೆಗಳಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಕೇಂದ್ರದಿಂದ 'ಮಿಷನ್ ಕರ್ಮಯೋಗಿ' - ನಾಗರಿಕ ಸೇವೆಗಳಲ್ಲಿ ಬದಲಾವಣೆಗೆ ಚಿಂತನೆ
ಕೇಂದ್ರ ನಾಗರಿಕ ಸೇವೆಗಳಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತಂದು ಹೊಸ ಹುದ್ದೆಗಳನ್ನು ಸೃಷ್ಟಿಸುವುದು ಮತ್ತು ಉನ್ನತ ನಾಗರಿಕ ಸೇವಾ ಅಧಿಕಾರಿಗಳ ಕೌಶಲ್ಯ ವೃದ್ಧಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ಘೋಷಿಸಲು ಮುಂದಾಗಿದೆ..
ನಾಗರಿಕ ಸೇವೆಗಳ ರಾಷ್ಟ್ರೀಯ ಕಾರ್ಯಕ್ರಮ
ಮಿಷನ್ ಕರ್ಮಯೋಗಿಯ ಉದ್ದೇಶ:
- ಆಡಳಿತವನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ತಮ್ಮ ವೃತ್ತಿ ಕ್ಷೇತ್ರಕ್ಕೆ ಸಂಬಂಧಿತ ಜ್ಞಾನ ಪಡೆದುಕೊಳ್ಳಲು ಅಧಿಕಾರಿಗಳನ್ನು ಪ್ರೇರೇಪಿಸುವುದು.
- ನೇಮಕಾತಿ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಮತ್ತು ಸರಿಯಾದ ಕೆಲಸಕ್ಕೆ ಸರಿಯಾದ ಅಭ್ಯರ್ಥಿ ನಿಯುಕ್ತಿಗೊಳಿಸುವುದು
- ನೇಮಕಾತಿಯಿಂದ ಹಿಡಿದು, ಒಬ್ಬ ನಾಗರಿಕ ಸೇವಕನ ವೃತ್ತಿಯ ಅವಧಿಯಲ್ಲೂ ಹೆಚ್ಚಿನ ಕೌಶಲ್ಯ ವೃದ್ಧಿಸಲು ಉತ್ತೇಜಿಸುವುದು
- ದೇಶದ ಆರ್ಥಿಕತೆ ಬೆಳೆದಂತೆ ಉಂಟಾಗುವ ಸಂಕೀರ್ಣತೆಗಳನ್ನು ಸಮರ್ಥವಾಗಿ ನಿಭಾಯಿಸುವ ಅಧಿಕಾರಿಗಳನ್ನು ರೂಪಿಸುವುದು
- ದೇಶದ ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಸುಧಾರಣೆ ತರಲು ಇದು ಸೂಕ್ತ ಸಮಯ. ಈ ಉದ್ದೇಶದಿಂದ ಮಿಷನ್ ಕರ್ಮಯೋಗಿ ಪ್ರಮುಖವಾಗಿದೆ
ಇತರ ಉದ್ದೇಶಗಳು :
- ಜಂಟಿ ಕಾರ್ಯದರ್ಶಿ (ಜೆಎಸ್) ಮಟ್ಟದಲ್ಲಿ ನೇಮಕಾತಿಗಳಿಗೆ ಸಂಬಂಧಿಸಿದಂತೆ, ಉನ್ನತ ಆಡಳಿತಾಧಿಕಾರಿಗಳ ಕೇಡರ್ ಆಗಿರುವ ಭಾರತೀಯ ಆಡಳಿತ ಸೇವೆ (ಐಎಎಸ್)ಯ ಪ್ರಾಬಲ್ಯ ಕೊನೆಗೊಳಿಸುವುದು. ಈ ಹುದ್ದೆಗೆ, ಭಾರತೀಯ ಕಂದಾಯ ಸೇವೆ, ಭಾರತೀಯ ಖಾತೆಗಳು ಮತ್ತು ಲೆಕ್ಕಪರಿಶೋಧಕ ಸೇವೆ ಮತ್ತು ಭಾರತೀಯ ಆರ್ಥಿಕ ಸೇವೆಯಂತಹ ಇತರ ಕೇಡರ್ಗಳ ನೇಮಕ ಮಾಡುವುದು.
- ಜೆಎಸ್ ಮಟ್ಟದ ಇಬ್ಬರು ಅಧಿಕಾರಿಗಳಲ್ಲಿ ಒಬ್ಬ ಐಎಎಸ್ ಹೊರತುಪಡಿಸಿ, ಇತರ ವಿಭಾಗದಿಂದ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು.
- ಇದರ ಜೊತೆಗೆ ಖಾಸಗಿ ಕ್ಷೇತ್ರದ ಉನ್ನತ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು.
Last Updated : Oct 4, 2020, 5:36 PM IST