ಕರ್ನಾಟಕ

karnataka

ದಲಿತರೆಂದರೆ ಯಾರು..? ಪ್ರಶ್ನೆ ಪತ್ರಿಕೆ ನೋಡಿ ಆಕ್ರೋಶಗೊಂಡ ಸ್ಟಾಲಿನ್​​!

ಕೇಂದ್ರೀಯ ವಿದ್ಯಾಲಯದ ಪ್ರಶ್ನೆ ಪತ್ರಿಕೆಯಲ್ಲಿ ದಲಿತರ ಬಗ್ಗೆ ಪ್ರಶ್ನೆ ಕೇಳಲಾಗಿದೆ ಎಂದು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಆಕ್ರೋಶಗೊಂಡಿದ್ದಾರೆ.

By

Published : Sep 7, 2019, 7:20 PM IST

Published : Sep 7, 2019, 7:20 PM IST

ಎಂ.ಕೆ.ಸ್ಟಾಲಿನ್

ನವದೆಹಲಿ: ಕೇಂದ್ರೀಯ ವಿದ್ಯಾಲಯದ ಆರನೇ ತರಗತಿಯ ಮಕ್ಕಳಿಗೆ ನಡೆಸುವ ಪರೀಕ್ಷೆಯಲ್ಲಿ ದಲಿತರ ಬಗ್ಗೆ ಪ್ರಶ್ನೆ ಕೇಳಲಾಗಿದೆ ಎಂದು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಆಕ್ರೋಶಗೊಂಡಿದ್ದಾರೆ.

ಪ್ರಶ್ನೆ ಪತ್ರಿಕೆಯ ಪ್ರತಿಯನ್ನ ಟ್ವೀಟ್​ ಮಾಡಿರುವ ಸ್ಟಾಲಿನ್,​ ಈ ಪ್ರಶ್ನೆಯನ್ನ ಕಂಡು ನನಗೆ ಗಾಬರಿಯಾಯಿತು. ದಲಿತರೆಂದರೆ ಯಾರು? ಎಂಬ ಪ್ರಶ್ನೆಯನ್ನ ಕೇಳುವ ಮೂಲಕ ಜಾತಿ ತಾರತಮ್ಯ ಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಈ ಪ್ರಶ್ನೆ ಪತ್ರಿಕೆಯನ್ನ ಸಿದ್ಧಪಡಿಸಿದವರು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡೆಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಈ ಪ್ರಶ್ನೆ ಪತ್ರಿಕೆ ಕೇಂದ್ರೀಯ ವಿದ್ಯಾಲಯದ್ದು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ದೊರೆತಿಲ್ಲ.

ABOUT THE AUTHOR

...view details