ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಭಾರತದ ನೌಕಾಪಡೆಯ ಸವಾಲುಗಳೇನು? - Indian Navy challenges

ಭಾರತದ ಸಮುದ್ರ ಗಡಿಗಳು ಆರ್ಥಿಕವಾಗಿ ಹಾಗೂ ಅಂತಾರಾಷ್ಟ್ರೀಯ ವಿಚಾರದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಆದರೆ ನೌಕಾಪಡೆಗೆ ಈ ಬಾರಿ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಕಡಿಮೆ ಇರುವುದು ಸದ್ಯ ಚಿಂತೆಗೆ ಕಾರಣವಾಗಿದೆ.

Indian Navy
ನೌಕಾಪಡೆ

By

Published : Feb 5, 2020, 11:38 PM IST

ಭಾರತದ ಸಮುದ್ರ ಗಡಿಗಳು ಆರ್ಥಿಕವಾಗಿ ಹಾಗೂ ಅಂತರಾಷ್ಟ್ರೀಯ ವಿಚಾರದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಆದರೆ ನೌಕಾಪಡೆಗೆ ಈ ಬಾರಿ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಕಡಿಮೆ ಇರುವುದು ಸದ್ಯ ಚಿಂತೆಗೆ ಕಾರಣವಾಗಿದೆ.

2012-13 ರಲ್ಲಿ ನೌಕಾಪಡೆಗೆ ಶೇ. 18 ರಷ್ಟು ಹಣವನ್ನು ಮೀಸಲಿಡಲಾಗಿತ್ತು. ಆದರೆ ಈ ವರ್ಷ ಇದು ಶೇ. 13 ಕ್ಕೆ ಇಳಿಕೆ ಕಂಡಿದೆ. ಈ ಕ್ರಮಕ್ಕೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ್‌ ಸಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಸ್ವಲ್ಪವೇ ಮೊತ್ತದ ಹಣ ಮೀಸಲಿಡಲಾಗಿದೆ. ಆದರೆ ನೌಕಾಪಡೆಗಂತೂ ಅನುದಾನ ಕಡಿಮೆಯೇ ಆಗಿದೆ. ನೌಕಾಪಡೆ ಈಗಾಗಲೇ ಕಡಿಮೆ ಪ್ರಮಾಣದಲ್ಲಿ ಹಣಕಾಸು ಪಡೆಯುತ್ತಿದೆ ಎಂದಿದ್ದಾರೆ.

ದೇಶದ ಮೂರು ಭಾಗಗಳು ಸಮುದ್ರದಿಂದ ಸುತ್ತುವರಿದಿದ್ದರಿಂದ ಅಂತರಾಷ್ಟ್ರೀಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲು ನಮಗೆ ಅವಕಾಶ ಮಾಡಿಕೊಟ್ಟಿದೆ. ವಿವಿಧ ದೇಶಗಳಿಗೆ ಕಚ್ಚಾ ತೈಲ ಮತ್ತು ಆಹಾರ ಧಾನ್ಯಗಳನ್ನು ಸಮುದ್ರ ಮಾರ್ಗದಿಂದಲೇ ಸಾಗಿಸಲಾಗುತ್ತದೆ. ಈ ಸಮುದ್ರ ಭಾಗದಲ್ಲಿ ಉಂಟಾಗುವ ಯಾವುದೇ ವ್ಯತ್ಯಯಗಳು ವಿಶ್ವದ ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಹೀಗಾಗಿ ಸರ್ಕಾರವು ನೌಕಾಪಡೆಯನ್ನು ಸಶಕ್ತಗೊಳಿಸಬೇಕಿದೆ ಎಂದು ಪರಿಣಿತರು ಹೇಳುತ್ತಾರೆ. ಸಮುದ್ರದ ಜೊತೆಗೆ ಭಾರತವು ದ್ವೀಪಗಳಾದ ಅಂಡಮಾನ್‌, ನಿಕೋಬಾರ್ ಮತ್ತು ಲಕ್ಷದ್ವೀಪವನ್ನೂ ಹೊಂದಿದೆ. ನಮ್ಮ ಜಲಗಡಿಯ ಒಳಗೆ ವಿದೇಶ ಒಳನುಸುಳುವುದನ್ನು ತಡೆಯಲು ನಿರಂತರ ನಿಗಾ ಇಡಬೇಕಾಗುತ್ತದೆ. ಕೆಲವೇ ತಿಂಗಳುಗಳ ಹಿಂದೆ ಚೀನಾದ ಹಡಗೊಂದು ಯಾವುದೆ ಅನುಮತಿ ಪಡೆಯದೆ ಭಾರತದ ಜಲಗಡಿ ಒಳಗೆ ಪ್ರವೇಶಿಸಿತ್ತು. ಭಾರತೀಯ ನೌಕಾಪಡೆ ಸಶಕ್ತವಾಗಿ ಪ್ರತಿರೋಧ ಒಡ್ಡಿದ್ದರಿಂದ ಆ ನೌಕೆ ವಾಪಸಾಯಿತು. ಮೂಲಗಳ ಪ್ರಕಾರ ಏಳರಿಂದ ಎಂಟು ಚೀನಾ ನೌಕೆಗಳು ಭಾರತದ ಜಲಗಡಿಯ ಮೇಲೆ ನಿಗಾ ಇಟ್ಟಿದೆ ಎಂದು ಹೇಳಲಾಗಿದೆ.

ಅಂಡಮಾನ್‌ ಸಮುದ್ರವು ಹಿಂದು ಮಹಾಸಾಗರದ ಪೂರ್ವ ಭಾಗಕ್ಕೆ ಸಂಪರ್ಕ ನೀಡುತ್ತದೆ ಮತ್ತು ಮಲಕ್ಕಾ ಮೂಲಕ ಪೆಸಿಫಿಕ್‌ ಸಮುದ್ರಕ್ಕೂ ಇದು ಸಂಪರ್ಕ ಸಾಧಿಸುತ್ತದೆ. ರಕ್ಷಣಾ ನಿಗಾವಣೆಯಲ್ಲಿ ಭಾರತಕ್ಕೆ ಮೇಲ್ಪಂಕ್ತಿಯನ್ನು ಅಂಡಮಾನ್‌ ದ್ವೀಪಗಳು ಒದಗಿಸುತ್ತವೆ. ಕೇಂದ್ರೀಯ ಏಷ್ಯಾದ ಮೂಲಕ ಚೀನಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ದಕ್ಷಿಣ ಚೀನಾ ಸಮುದ್ರವು ನಮ್ಮದು ಮಾತ್ರ, ಹಿಂದು ಮಹಾಸಾಗರವು ಎಲ್ಲರದ್ದೂ ಎಂದು ಚೀನಾ ಮೊದಲಿನಿಂದಲೂ ಪ್ರತಿಪಾದಿಸುತ್ತಿದೆ. ಸ್ಟ್ರಿಂಗ್‌ ಆಫ್‌ ಪರ್ಲ್ಸ್‌ ಪ್ರಾಜೆಕ್ಟ್‌ ಅಡಿಯಲ್ಲಿ ಭಾರತದ ಸುತ್ತ ನೌಕಾ ನೆಲೆಯನ್ನು ಸ್ಥಾಪಿಸುತ್ತಿರುವ ಚೀನಾ ಮ್ಯಾನ್ಮಾರ್ ಅನ್ನೂ ತನ್ನ ಮಿತೃದೇಶವನ್ನಾಗಿಸಿಕೊಂಡಿದೆ. ಮ್ಯಾನ್ಮಾರ್‌ನ ಕ್ಯಾವ್‌ಕ್ಯು ಕರಾವಳಿಯಿಂದ ಚೀನಾದ ಕುನ್‌ಮಿಂಗ್‌ ಪ್ರಾಂತ್ಯಕ್ಕೆ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಗಾಗಿ ಪೈಪ್‌ಲೈನ್‌ ಅನ್ನು ಚೀನಾ ಸರ್ಕಾರ ನಿರ್ಮಿಸಿದೆ. ಒಂದು ವೇಳೆ ಮಲಕ್ಕಾ ಮಾರ್ಗದಲ್ಲಿ ಯಾವುದೇ ಸಮಸ್ಯೆ ಉಂಟಾದರೆ, ಈ ಪೈಪ್‌ಲೈನ್‌ ಮೂಲಕ ತೈಲ ಸಾಗಣೆ ಮಾಡಬಹುದು ಎಂದು ಚೀನಾ ಭಾವಿಸಿದೆ. ಆದರೆ, ಅಂಡಮಾನ್‌ ಸಮುದ್ರದಲ್ಲಿ ಒಳನುಸುಳಲು ಚೀನಾ ಪ್ರಯತ್ನಿಸುತ್ತಿದೆ ಎಂದು ಭಾರತದ ಸೇನಾಪಡೆ ಮೂಲಗಳು ತಿಳಿಸಿವೆ. ಇದು ಭಾರತ, ಮ್ಯಾನ್ಮಾರ್, ಥಾಯ್ಲೆಂಡ್‌ ಮತ್ತು ಇಂಡೋನೇಷ್ಯಾದ ಮಧ್ಯೆ ಇದೆ. ಈ ಸಮುದ್ರದ ಮೇಲೆ ಚೀನಾಗೆ ಯಾವ ಅಧಿಕಾರವೂ ಇಲ್ಲ.

ಮ್ಯಾನ್ಮಾರ್‌ ಜೊತೆಗೆ ಭಾರತವು ಆತ್ಮೀಯ ಸಂಬಂಧ ಹೊಂದಿದೆ. ಈಶಾನ್ಯ ರಾಜ್ಯಗಳ ಹಲವು ಬಂಡುಕೋರರು ಮ್ಯಾನ್ಮಾರ್‌ನಲ್ಲಿ ನೆಲೆ ಕಂಡುಕೊಂಡಿದ್ದವು. ಎರಡೂ ದೇಶಗಳು ಸೇರಿ ಆಪರೇಶನ್ ಸನ್‌ಶೈನ್‌ ಹೆಸರಿನಲ್ಲಿ ಕ್ರಮ ಕೈಗೊಂಡು ಉಗ್ರ ನೆಲೆಗಳನ್ನು ಧ್ವಂಸ ಮಾಡಿವೆ. ಮ್ಯಾನ್ಮಾರ್‌ ಸಮುದ್ರಕ್ಕೆ ಚೀನಾ ಪ್ರವೇಶಿಸಿರುವುದು ನವದೆಹಲಿಯಲ್ಲಿ ಚಿಂತೆಗೆ ಕಾರಣವಾಗಿದೆ. ಪಾಕಿಸ್ತಾನದ ಗ್ವಾದಾರ್ ಮತ್ತು ಶ್ರೀಲಂಕಾದ ಹಂಬಂತೋಟದಲ್ಲಿ ಈಗಾಗಲೇ ತನ್ನ ನೆಲೆ ಸ್ಥಾಪಿಸಿದ ಚೀನಾ ಈಗ ಹಿಂದು ಮಹಾಸಾಗರದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹವಣಿಸುತ್ತಿದೆ. ಚೀನಾದ ಒಳನುಸುಳುವಿಕೆಯನ್ನು ತಡೆಯಲು ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತವು ಒಪ್ಪಂದ ಮಾಡಿಕೊಂಡಿವೆ. ಚೀನಾವನ್ನು ತಡೆಯುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಬಲ್ಲದು ಎಂದು ಅಮೆರಿಕ ಭಾವಿಸಿದೆ. ಈ ಅವಕಾಶವನ್ನು ಭಾರತ ತೆಗೆದುಕೊಳ್ಳಬೇಕು ಮತ್ತು ಇದಕ್ಕಾಗಿ ನೌಕಾಪಡೆಗೆ ಬಲ ತುಂಬಬೇಕು.

ವಿಶ್ವದ ಶೇ. 60 ರಷ್ಟು ತೈಲವನ್ನು ಹೊರ್ಮುಜ್‌ ಕಣಿವೆಯ ಮೂಲಕ ಮಾಡಲಾಗುತ್ತಿದೆ. ಅಮೆರಿಕ ಮತ್ತು ಇರಾನ್‌ ಮಧ್ಯೆ ಉಂಟಾದ ಸಂಘರ್ಷದ ನಂತರ ಹಿಂದು ಮಹಾಸಾಗರದಲ್ಲಿ ಸರಕು ಸಾಗಣೆ ಹಡಗುಗಳಿಗೆ ಹೆಚ್ಚುವರಿ ರಕ್ಷಣೆ ನೀಡಲು ಭಾರತೀಯ ನೌಕಾಪಡೆ ನಿರ್ಧರಿಸಿದೆ. ಆಪರೇಶನ್ ಸಂಕಲ್ಪ್ ಅಡಿಯಲ್ಲಿ ಭಾರತಕ್ಕೆ ಗಲ್ಫ್‌ ಆಫ್ ಪರ್ಶಿಯಾದಿಂದ ಸರಕು ಪೂರೈಸುತ್ತಿರುವ ಎಲ್ಲ ಹಡಗುಗಳನ್ನು ರಕ್ಷಿಸಲಾಗುತ್ತಿದೆ. ಕನಿಷ್ಠ ಮೂರು ಯುದ್ಧ ವಿಮಾನಗಳ ವಾಹಕವು ರಕ್ಷಣೆಗೆ ಅಗತ್ಯವಿದೆಯಾದರೂ, ಕೇವಲ ಐಎನ್‌ಎಸ್‌ ವಿಕ್ರಮಾದಿತ್ಯ ಸದ್ಯಕ್ಕೆ ಲಭ್ಯವಿದೆ. ದೇಶೀಯ ತಂತ್ರಜ್ಞಾನದ ಅಡಿಯಲ್ಲಿ ನಿರ್ಮಿಸಲಾದ ಇನ್ನೊಂದು ವಾಹಕ ವಿಕ್ರಾಂತ್‌ 2021ರಲ್ಲಿ ಸೇನೆಗೆ ಲಭ್ಯವಾಗಲಿದೆ. ಚೀನಾದ ಒಳನುಸುಳುವಿಕೆಯನ್ನು ತಡೆಯಲು ಹಿಂದು ಮಹಾಸಾಗರದಲ್ಲಿ ಯುದ್ಧ ವಿಮಾನ ವಾಹಕವನ್ನು ಶಾಶ್ವತವಾಗಿ ನಿಯೋಜಿಸಬೇಕು ಎಂದು ಪರಿಣಿತರು ಶಿಫಾರಸು ಮಾಡುತ್ತಾರೆ. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಕನಸು ಕೇವಲ ಸೇನೆ ಸಶಕ್ತವಾದಾಗ ಮಾತ್ರ ನನಸಾಗಲಿದೆ.

ಪೂರ್ವ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಮಧ್ಯೆ ಸಾಗರ ದಾರಿಯ ವ್ಯಾಪಾರದಲ್ಲಿ ಭಾರತ ಅತ್ಯಂತ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ, ನೌಕಾಪಡೆಯನ್ನು ನಿರಂತರವಾಗಿ ರೂಪಾಂತರಿಸಬೇಕು. ಹಡಗು ನಿರ್ಮಾಣವು ನಿರಂತರ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಇದಕ್ಕೆ ಭಾರಿ ಮೊತ್ತ ಬೇಕಾಗುತ್ತದೆ. ಪ್ರಾಜೆಕ್ಟ್‌ 75 ಅಡಿಯಲ್ಲಿ ಆರು ಸಬ್‌ಮರೀನ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ಎರಡನ್ನು ಈಗಾಗಲೇ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ, ಅಣ್ವಸ್ತ್ರ ಸಜ್ಜಿತ ಅರಿಹಂತ್ ಕೂಡ ಇದೆ. ಮೇಕ್ ಇನ್‌ ಇಂಡಿಯಾ ಉಪ ಕ್ರಮದ ಅಡಿಯಲ್ಲಿ ದೊಡ್ಡ ಮಟ್ಟದಲ್ಲಿ ಹಡಗುಗಳ ನಿರ್ಮಾಣವಾಗಬೇಕು ಎಂದು ಪರಿಣಿತರು ಸಲಹೆ ಮಾಡುತ್ತಾರೆ. ಅಮೆರಿಕವು ನೌಕಾಪಡೆಯಲ್ಲಿ ಏಕಸ್ವಾಮ್ಯ ಮತ್ತು ಅಮೋಘ ಸಾಮರ್ಥ್ಯವನ್ನು ಹೊಂದಿರುವುದೇ ಅದು ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ಚೀನಾ ಕೂಡ ಭಾರಿ ಪ್ರಮಾಣದಲ್ಲಿ ಹಡಗುಗಳನ್ನು ನಿರ್ಮಿಸಿದೆ. ಪಾಕಿಸ್ತಾನ ಕೂಡ ತನ್ನ ನೌಕಾಪಡೆಯನ್ನು ರೂಪಾಂತರಿಸುತ್ತಿದೆ. ಭಾರತೀಯ ಸೇನೆಗೆ ಕನಿಷ್ಠ 200 ಹಡಗುಗಳು ಬೇಕು. ಹಣಕಾಸಿನ ಕೊರತೆ, ಸಾಂಸ್ಥಿಕ ನಿರ್ಲಕ್ಷ್ಯ ಮತ್ತು ಪ್ರಾಜೆಕ್ಟ್‌ಗಳು ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದಾಗಿ ಪ್ರಸ್ತುತ ನೌಕಾಪಡೆಯ ಸಾಮರ್ಥ್ಯ ಕೇವಲ 130 ಆಗಿದೆ. 50 ಹೊಸ ಹಡಗುಗಳನ್ನು ನಿರ್ಮಿಸಲಾಗುತ್ತಿದೆ. ಆದರೂ 20 ಹಡಗುಗಳು ಕಡಿಮೆಯಾಗುತ್ತವೆ. ಮೇಕ್ ಇನ್‌ ಇಂಡಿಯಾ ಯೋಜನೆ ಅಂಗವಾಗಿ ಮತ್ತು ಪ್ರೋತ್ಸಾಹಧನಗಳನ್ನು ನೀಡುವ ಮೂಲಕ ಹಡಗು ನಿರ್ಮಾಣದಲ್ಲಿ ಇನ್ನಷ್ಟು ಖಾಸಗಿ ಕಂಪನಿಗಳು ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು.

ABOUT THE AUTHOR

...view details