ಕರ್ನಾಟಕ

karnataka

ETV Bharat / bharat

'ಬಾಂಗ್ಲಾ ಅಮರ್ ಮಾ' ಈ ಸರ್ಕಾರದಿಂದ ಹೊಸ ಮಾಸ್ಕ್​ ಪರಿಚಯ!

WHO ಮಾರ್ಗಸೂಚಿಗಳ ಪ್ರಕಾರ 3 ಲೇಯರ್ ಮಾಸ್ಕ್​ಗಳನ್ನು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

West Bengal
ಸಿಎಂ ಮಮತಾ ಬ್ಯಾನರ್ಜಿ

By

Published : Jul 11, 2020, 8:45 AM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋವಿಡ್​ - 19 ಹರಡುವುದನ್ನು ತಡೆಗಟ್ಟಲು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು ಮಾರುಕಟ್ಟೆಗೆ WHO ಮಾರ್ಗಸೂಚಿಗಳ ಪ್ರಕಾರ 3 ಲೇಯರ್ ಮಾಸ್ಕ್​ಗಳನ್ನು ಪರಿಚಯಿಸುತ್ತಿದೆ. ಈ ಮಾಸ್ಕ್​ಗೆ 'ಬಾಂಗ್ಲಾ ಅಮರ್ ಮಾ' ಎಂದು ಸಿಎಂ ಮಮತಾ ಬ್ಯಾನರ್ಜಿ ಹೆಸರಿಟ್ಟಿದ್ದಾರೆ.

ಈ ಮಾಸ್ಕ್​ಗಳನ್ನು ಬಿಸ್ವಾ ಬಾಂಗ್ಲಾ ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್ ಮಾರಾಟ ಮಾಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಎನ್​ - 95 ಮಾಸ್ಕ್​ಗಳನ್ನು ಕೊಳ್ಳಲು ಎಲ್ಲ ಜನರು ಶಕ್ತರಿರುವುದಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಡಬ್ಲ್ಯುಎಚ್‌ಒ ಮಾರ್ಗಸೂಚಿಗಳನ್ನು ಅನುಸರಿಸಿ ಸುಧಾರಿತ ಮುಖಗವಸುಗಳನ್ನು ಜಾರಿಗೆ ತರುತ್ತಿದೆ.

ಈ ಸರ್ಕಾರಿ ಮುಖಗವಸುಗಳ ಬೆಲೆ ಕೈಗೆಟಕುವ ದರದಲ್ಲಿ ಸಿಗಲಿದೆ ಎಂದು ಹೇಳಲಾಗಿದೆ. ಸಣ್ಣ ಮತ್ತು ದೊಡ್ಡ ಎರಡು ರೀತಿಯ ಮಾಸ್ಕ್​ಗಳಿದ್ದು, ಸುತ್ತಲೂ ದಪ್ಪ ಗಡಿ ಇರುತ್ತದೆ. ದೊಡ್ಡ ಮುಖವಾಡದ ಉದ್ದ ಮತ್ತು ಅಗಲ 7. 5 ಮತ್ತು 5. 5 ಇಂಚುಗಳು. ಇನ್ನೊಂದು 5.5 ಇಂಚು ಉದ್ದ ಮತ್ತು 4.5 ಇಂಚು ಅಗಲವಿದೆ. ವಿಭಿನ್ನ ಬಣ್ಣದ ಮುಖಗವಸುಗಳು ಲಭ್ಯವಿರುತ್ತವೆ. ಆರಂಭದಲ್ಲಿ ಕೆಲವು ಮುಖಗವಸುಗಳನ್ನು ವಿತರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details