ಮುರ್ಷಿದಾಬಾದ್ (ಪಶ್ಚಿಮ ಬಂಗಾಳ):ಜಮಾತ್-ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಭಯೋತ್ಪಾದಕ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀಮ್‌ನನ್ನು ಬಂಧಿಸಲಾಗಿದೆ.
ಜೆಎಂಬಿ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀಮ್ ಬಂಧನ - ಅಬ್ದುಲ್ ಕರೀಮ್ ಬಂಧನ ಲೇಟೆಸ್ಟ್ ನ್ಯೂಸ್
ಜೆಎಂಬಿ ಭಯೋತ್ಪಾದಕ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀಮ್‌ನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಉಗ್ರ ಅಬ್ದುಲ್ ಕರೀಮ್ ಬಂಧನ
ಮುರ್ಷಿದಾಬಾದ್‌ನ ಸೂಟಿ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಕೋಲ್ಕತ್ತಾ ಪೊಲೀಸ್ ಸ್ಪೆಷಲ್ ಟಾಸ್ಕ್ ಫೋರ್ಸ್, ಕರೀಮ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಉಗ್ರನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕರೀಮ್, ಬಿಹಾರದ ಗಯಾ ಮತ್ತು ಪಶ್ಚಿಮ ಬಂಗಾಳದ ಬುರ್ದ್ವಾನ್ನಲ್ಲಿ ನಡೆದ ಸ್ಫೋಟಗಳು ಸೇರಿದಂತೆ ದೇಶದಲ್ಲಿ ಹಲವಾರು ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದ.